ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಲಾಕ್ಡೌನ್ ಪ್ರಭಾವದಿಂದ ಮರೆತರು ಚಿನ್ನ. ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಧ್ಯಮ ವರ್ಗದ ಕುಟುಂಬದ ಪ್ರತಿಯೊಬ್ಬರೂ ಕೂಡ ಚಿನ್ನ ಖರೀದಿಗೆ ಸದಾ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಯಾವುದೇ ಸಮಯದಲ್ಲಿ ಚಿನ್ನದ ಬೆಲೆ ಕಡಿಮೆಯಾದರೂ ಕೂಡ ಮುಂದಾಲೋಚನೆ ಮಾಡಿ ಚಿನ್ನ ಖರೀದಿ ಮಾಡುವುದು ಮಧ್ಯಮ ವರ್ಗದ ಜನರ ಕನಸಾಗಿರುತ್ತದೆ. ಯಾಕೆಂದರೆ ನಮ್ಮ ಮಧ್ಯಮ ವರ್ಗದ ಕುಟುಂಬದ ಜನರ ಪರಿಸ್ಥಿತಿ ಹಾಗಿದೆ ಪ್ರತಿಯೊಂದು ರೂಪಾಯಿಗಳನ್ನು ಕೂಡ ಲೆಕ್ಕಹಾಕಿ ನಾವು ಖರ್ಚು ಮಾಡಬೇಕಾಗುತ್ತದೆ

ಇನ್ನು ಪ್ರತಿಯೊಬ್ಬರ ಕನಸು ಚಿನ್ನ ಖರೀದಿ ಮಾಡುವುದಾಗಿದ್ದರೆ ಹಲವಾರು ವರ್ಷಗಳಿಂದ ಅಥವಾ ಕಳೆದ ಕೆಲವು ತಿಂಗಳುಗಳಿಂದ ನಾವು ಚಿನ್ನದ ಕುರಿತು ಆಲೋಚನೆ ಮಾಡುವ ಸಾಧ್ಯತೆ ಕೂಡ ಇರಲಿಲ್ಲ, ಯಾಕೆಂದರೆ 10 ಗ್ರಾಂ ಚಿನ್ನ ಕೊಂಡು ಕೊಳ್ಳಬೇಕು ಎಂದರೆ ನಾವು ಕನಿಷ್ಠ ಕೈಯಲ್ಲಿ 56 ಸಾವಿರ ರೂಪಾಯಿಗಳು ಹಾಗೂ ಮೇಕಿಂಗ್ ಚಾರ್ಜರ್ಸ್ ಹಾಗೂ ವೆಸ್ಟೇಜ್ ಎಂಬ ಹೆಸರಿನಲ್ಲಿ ಕನಿಷ್ಠ 60 ರಿಂದ 65 ಸಾವಿರ ರೂಪಾಯಿಗಳನ್ನು ಕೈಯಲ್ಲಿ ಹಿಡಿದು ಕೊಳ್ಳಬೇಕಾಗಿತ್ತು.

ಇದು ನಿಜಕ್ಕೂ ಅಸಾಧ್ಯದ ಕೆಲಸ, ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆಯಾಗಿತ್ತು. ಆದರೆ ಕಳೆದ 23ನೇ ತಾರೀಖಿನಂದು ಚಿನ್ನದ ಬೆಲೆ ಇದ್ದಕ್ಕಿದ್ದಂತೆ ಏರಿ ಮತ್ತೆ 50 ಸಾವಿರದ ಕಡೆಯಲ್ಲಿ ಬಂದು ನಿಂತಿತ್ತು. ಆದರೆ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಪ್ರಕಾರ ತೆಗೆದುಕೊಳ್ಳುವುದಾದರೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ, 47780 ಇದೆ, ಕಳೆದ ಕೆಲವು ತಿಂಗಳುಗಳಲ್ಲಿ 10 ಗ್ರಾಂ ಚಿನ್ನಕ್ಕೆ ಎಂಟು ಸಾವಿರ ರೂಪಾಯಿಗೂ ಹೆಚ್ಚು ಕಡಿಮೆ ಆಗಿದೆ. ಹಾಗೆಂದು ಈಗಲೇ ಹೂಡಿಕೆ ಮಾಡುವುದು ಸರಿ ಇಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ ಯಾಕೆಂದರೆ ಇನ್ನು ಕೆಲವು ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Comments are closed.