ನಾಮಕರಣ ಕಾರ್ಯಕ್ರಮದಲ್ಲಿ ಚಿಕ್ಕಪ್ಪನ ಜೊತೆ ಮಸ್ತ್ ಆಟ ಆಡಿದ ಜೂನಿಯರ್ ಚಿರು, ಹೇಗಿದೆ ಗೊತ್ತಾ ಹೊಸ ವಿಡಿಯೋ??

ನಮಸ್ಕಾರ ಸ್ನೇಹಿತರೇ ಇಂದು ಕನ್ನಡ ಚಿತ್ರರಂಗದ ಒಂದು ಕುಟುಂಬಕ್ಕೆ ಬಹಳಷ್ಟು ಸಂತೋಷದ ದಿನ ಎಂದು ಹೇಳಬಹುದಾಗಿದೆ. ಈ ಹಿಂದೆ ಈ ಕುಟುಂಬ ಹಲವಾರು ಬೇಸರದ ದಿನಗಳನ್ನು ಕಂಡಿತ್ತು ಹಾಗೂ ದುಃಖವನ್ನು ಅನುಭವಿಸಿತ್ತು. ಹೌದು ಸ್ನೇಹಿತರೆ ಸರ್ಜಾ ಮನೆತನಕ್ಕೆ ಇಂದು ಬಹಳಷ್ಟು ಸಂತೋಷದ ದಿನ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ಅವರ ನಾಮಕರಣ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಚಿರು ಸರ್ಜಾ ಹಾಗೂ ಮೇಘನಾ ರಾಜ್ ರವರ ಏಕೈಕ ಪುತ್ರನಾಗಿರುವ ಜೂನಿಯರ್ ಚಿರು ಸರ್ಜಾ ರವರಿಗೆ ಇಂದು ಶಾಸ್ತ್ರೋಕ್ತವಾಗಿ ಯಾವ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡಲಾಗಿದೆ.

ಇನ್ನು ಜೂನಿಯರ್ ಚಿರು ಸರ್ಜಾ ರವರಿಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ‌. ಹೆಸರು ನೋಡುವುದಕ್ಕೆ ತುಂಬಾನೇ ವಿಚಿತ್ರ ಹಾಗೂ ವಿಭಿನ್ನವಾಗಿದೆ ಅಲ್ಲವೇ ಸ್ನೇಹಿತರೆ. ಸಂಸ್ಕೃತದ ಪ್ರಕಾರ ಈ ಹೆಸರಿನ ಅರ್ಥ ಯುವರಾಜ ಎಂದು. ಕೇವಲ ಮೇಘನಾರಾಜ್ ರವರ ತಂದೆ-ತಾಯಿಯರು ಮಾತ್ರವಲ್ಲದೆ ಚಿರು ಸರ್ಜಾ ರವರ ತಂದೆ-ತಾಯಿಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮೊಮ್ಮಗನನ್ನು ಹೆಸರಿನ ಮೂಲಕ ಕರೆಯುವ ಭಾಗ್ಯ ಎಲ್ಲರದಾಯಿತು.

ಇನ್ನು ಈ ಕಾರ್ಯಕ್ರಮವನ್ನು ಧ್ರುವ ಸರ್ಜಾ ಹಾಗೂ ಪ್ರೇರಣ ರವರು ಆಯೋಜಿಸಿದ್ದು ಎಲ್ಲವನ್ನೂ ಅವರ ಮೇಲ್ವಿಚಾರಿಕೆ ಅಲ್ಲಿ ನೋಡಿಕೊಂಡಿದ್ದರು. ಇನ್ನು ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ 2 ಕುಟುಂಬದ ಗುರುಹಿರಿಯರು ಆಗಮಿಸಿ ಭಾಗಿಯಾಗಿದ್ದರು. ಇನ್ನು ರಾಯನ್ ರಾಜ್ ಸರ್ಜಾ ರವರನ್ನು ಚಿಕ್ಕಪ್ಪ ನಾಗಿರುವ ಧ್ರುವ ಸರ್ಜಾ ರವರು ಎತ್ತಿ ಮುದ್ದಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು ವೈರಲ್ ಕೂಡ ಆಗಿದೆ ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Comments are closed.