ಬೆಳ್ಳಂ ಬೆಳಗ್ಗೆ ಸೌತೆಕಾಯಿ ನೀರು ಕುಡಿದರೇ, ಹತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಕಷ್ಟು ಜನರಿಗೆ ಸೌತೆಕಾಯಿ ತಿನ್ನುವುದು ತುಂಬಾನೇ ಇಷ್ಟ. ಅದರಲ್ಲು ಹಸಿ ಸೌತೆಕಾಯಿಯನ್ನು ಉಪ್ಪು ಹಚ್ಚಿ ತಿನ್ನುವುದು ಅಥವಾ ಸಲಾಡ್ ಗಳಲ್ಲಿ ಮಿಕ್ಸ್ ಮಾಡಿ ತಿನ್ನುವುದು ಹೀಗೇ ಬೇಯಿಸಿ ತಿನ್ನುವುದಕ್ಕಿಂತ ಹಸಿ ಸೌತೆಕಾಯಿ ತಿನ್ನುವುದನ್ನೇ ಹೆಚ್ಚು ಜನ ಇಷ್ಟ ಪಡುತ್ತಾರೆ. ಇನ್ನು ಆಗಾಗ್ಗೆ ಸೌತೆಕಾಯಿ ದೋಸೆ ಮಾಡಿ ತಿನ್ನುವುದು ಕೂಡ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸೌತೆಕಾಯಿಯ ಇನ್ನಷ್ಟು ಪ್ರಯೋಜನಗಳನ್ನ ತಿಳಿಯೋಣ ಬನ್ನಿ.

ಸೌತೆಕಾಯಿಯಲ್ಲಿ ನೀರಿನ ಅಂಶ ಹೇರಳವಾಗಿದೆ. ಹಾಗಾಗಿ ಇದನ್ನು ತಿಂದಈ ದೇಹ ಡಿ ಹೈಡ್ರೇಟ್ ಆಗುವುದೇ ಇಲ್ಲ. ಇನ್ನು ಜೀರ್ಣಕ್ರಿಯೆಯ ವ್ಯವಸ್ಥೆ ಸರಿಯಾಗಿ ಆಗುವುದಕ್ಕೆ ಸೌತೆಕಾಯಿ ಉಪಯುಕ್ತ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ತುಂಬಾನೇ ಉತ್ತಮ. ಸೌತೆಕಾಯಿಯ ಸಿಪ್ಪೆಯಲ್ಲೂ ಫೈಬರ್ ಇದ್ದು ಅನ್ನನಾಳದಲ್ಲಿ ಆಹಾರ ಸುಲಭವಾಗಿ ಇಳಿಯುವುದಕ್ಕೆ ಸಹಾಯಕವಾಗಿದೆ.

ರಕ್ತದೊತ್ತಡ ಸಮಸ್ಯೆಗೂ ಉತ್ತಮ ಪರಿಹಾರ ಸೌತೆಕಾಯಿ ಯಾಕೆ ಗೊತ್ತಾ? ದೇಹದಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದಾಗ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಆದ್ರೆ ನೀವು ಆಗಾಗ ಸೌತೆಕಾಯಿ ಸೇವಿಸಿದ್ರೆ ಅದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇನ್ನು ಸೌತೆಕಾಯಿ ನಿಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಸೌಂದರ್ಯ ವರ್ಧಕದಂತೆ ಕೆಲಸ ಮಾಡುತ್ತದೆ. ತ್ವಚೆಯಲ್ಲಿನ ಟ್ಯಾಕ್ಸಿನ್ ಅಂಶವನ್ನು ತೆಗೆದು ತ್ವಚೆ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಸೌತೆಕಾಯಿಯನ್ನು ಕತ್ತರಿಸಿ ಮುಖದ ಮೇಲೆ ಉಜ್ಜಬೇಕು. ಅಥವಾ ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಡಾರ್ಕ್ ಸರ್ಕಲ್ ಕೂಡ ಕಡಿಮೆಯಾಗುತ್ತದೆ. ದೇಹದ ಒಳಗಿನ ಹಾಗೂ ಹೊರಗಿನ ಆರೋಗ್ಯವನ್ನು ಕಾಪಾಡುವ ಸೌತೆಕಾಯಿಯನ್ನು ಆಗಾಗ್ಗೆ ಬಳಸಿ ಪರಿಣಾಮವನ್ನು ನೀವೇ ಗಮನಿಸಿ.

Comments are closed.