ಸಿನಿಮಾ ತಾರೆಯರು ಮಾತ್ರವಲ್ಲ ಕ್ರಿಕೆಟಿಗರ ಲವ್ ಸ್ಟೋರಿ ಕೂಡ ಆಸಕ್ತಿದಾಯಕವೇ? ಯಾರ ಲವ್ ಸ್ಟೋರಿ ಹೇಳ್ತಿದ್ದೇವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಸಿನಿಮಾ ತಾರೆಯರ ನಿಜ ಜೀವನದ ಬಗ್ಗೆ ಅವರ ಲವ್ ಸ್ಟೋರಿ ಅಥವಾ ಅವರ ಕುಟುಂಬದ ಬಗ್ಗೆ ಅವರ ವಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ಎಲ್ಲರಿಗೂ ತುಸು ಆಸಕ್ತಿ ಹೆಚ್ಚು ಅಂತಲೇ ಹೇಳಬಹುದು. ಆದ್ರೆ ಕ್ರಿಕೆಟ್ ಕೂಡ ಇಂಥ ವಿಷಯಗಳಿಗೆ ಹೊರತಲ್ಲ. ಕ್ರಿಕೆಟಿಗರು ತಮ್ಮ ಆಟದಿಂದ ಮಾತ್ರವಲ್ಲ ತಮ್ಮ ಜೀವನ, ಜೀವನ ಸಂಗಾತಿಯರ ಜೊತೆ ತುಂಬಾನೇ ಸುದ್ದಿ ಮಾಡುತ್ತಾರೆ.

ಕ್ರಿಕೆಟಿಗರಲ್ಲಿ ಲವ್ ಸ್ಟೋರಿ ಎಂದರೆ ನಮ್ಮ ಕಣ್ಮುಂದೆ ಬರುವುದು ವಿರಾಟ್ ಕೊಹ್ಲಿ ಹಾಗೂ ನಟಿ ಅನುಶ್ಕಾ ಶೆಟ್ಟಿ. 2017ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ಒಂದು ಮುದ್ದಾದ ಹೆಣ್ಣು ಮಗುವನ್ನು ಹೊಂದಿದ್ದಾರೆ. ಇವರಂತೆ ಇನ್ನೊಂದಿಷ್ಟು ಲವ್ ಬರ್ಡ್ಸ್ ನಮ್ಮ ಕ್ರಿಕೆಟ್ ಪ್ರಪಂಚದಲ್ಲಿದೆ.

ಅದರಲ್ಲಿ ಮೊದಲಿನ ಜೋಡಿ ರೋಹಿತ್ ಶರ್ಮಾ ಹಾಗೂ ರಿತೀಕಾ ಸಜ್ದೆಹ್ ಇವರ ಮದುವೆ 2015ರಲ್ಲಿಆಗಿದ್ದು ಆರು ವರ್ಷ ಪ್ರೀತಿಸಿ ಮದುವೆಯಾಗಿದೆ ಈ ಜೋಡಿ. ಇವರು ಭೇಟಿ, ಪ್ರೀತಿ ಆಗಿದ್ದು ಮುಂಬೈನ ಬೊರಿವಲಿ ಸ್ಪೋರ್ಟ್ ಕ್ಲಬ್ನಲ್ಲಿ.

ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ : ಆಯೇಷಾ ಮುಖರ್ಜಿ ಶಿಖರ್ ಧವನ್ಗಿಂತ ವಯಸ್ಸಿನಲ್ಲಿ ದೊಡ್ಡವರು. ಮೊದಲು ಫೇಸ್ಬುಕ್ನಲ್ಲಿ ಪರಿಚಯವಾಗಿ ಪ್ರೀತಿಸಲು ಶುರು ಮಾಡಿದ್ರು. 2009ರಲ್ಲಿ ಮದುವೆಯಾದ ಇವರಿಗೆ ಒಂದು ಮಗು ಇದೆ. ಆಯೇಷಾಗೆ ಮೊದಲ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಅಜಿಂಕ್ಯಾ ರಹಾನೆ ಹಾಗೂ ರಾಧಿಕಾ ಧೋಪವ್ಕರ್ ನೆರೆಹೊರೆಯವರಾದ ಇವರು ಆರಂಭದಿಂದ ಸ್ನೇಹಿತರು. ಕೊನೆಗೆ ಮನೆಯವರೂ ಒಪ್ಪಿ ಮದುವೆಯಾದರು. ಇವರಿಗೆ ಒಂದು ಹೆಣ್ಣು ಮಗು. ಇದೀಗ ಸುಖವಾಗಿ ಸಂಸಾರ ನಡೆಸುತ್ತಿರುವ ಈ ಮೇಲಿನ ಎಲ್ಲಾ ಕ್ರಿಕೆಟಿಗರೂ ಕೂಡ ಕ್ರಿಕೆಟ್ ನಲ್ಲಿಯೂ ವಯಕ್ತಿಕ ಜೀವನದಲ್ಲಿಯೂ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ

Comments are closed.