ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಟಾಪ್ ಗಾಯಕ ಹೇಮಂತ್, ಹುಡುಗಿ ನಿಜಕ್ಕೂ ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಸೆಲೆಬ್ರೆಟಿಗಳ ಮದುವೆ ನಡೆದು ಹೋಗಿದೆ. ಚಂದನ್ ಗೌಡ ಕವಿತಾ ಗೌಡ ಪ್ರಣಿತ ಸುಭಾಷ್ ಹೀಗೆ ಹಲವಾರು ಚಿತ್ರ ನಟ ನಟಿಯರು ಹಾಗೂ ಧಾರಾವಾಹಿ ನಟ-ನಟಿಯರು ಮದುವೆಯಾಗಿದ್ದಾರೆ.ಇನ್ನು ಈಗ ಮದುವೆಯ ಸರದಿ ಬಂದಿರುವುದು ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾಗಿ ಇರುವಂತಹ ಹೇಮಂತ್ ರವರದ್ದು.

ಹೌದು ಸ್ನೇಹಿತರೆ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಗಾಯಕ ಹೇಮಂತ್ ರವರ ಮದುವೆ ಇದೇ ಆಗಸ್ಟ್ 11ರಂದು ನಡೆದಿದೆ. ಇನ್ನು ಅವರು ಮದುವೆಯಾಗಿರುವುದು ಬೆಂಗಳೂರಿನ ಮೂಲದವರಾದಂತಹ ಕೃತಿಕಾ ಎಂಬವರನ್ನು. ಕೃತಿಕಾ ರವರು ಮೂಲತಹ ವೈದ್ಯೆ. ನಿನ್ನ ಇವರಿಬ್ಬರು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಇನ್ನು ಹೇಮಂತ್ ರವರಿಗೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೂರವಾಣಿ ಕರೆ ಮಾಡುವುದರ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ದರ್ಶನ್ ರವರು ಹೇಮಂತ್ ರವರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಯಾಕೆಂದರೆ, ಹೇಮಂತ್ ರವರೇ ಕೆಲಸ ಇಲ್ಲದಿದ್ದ ಸಂದರ್ಭದಲ್ಲಿ ದರ್ಶನ್ ರವರು ಅವರಿಗೆ ತಮ್ಮ ಚಿತ್ರಗಳಲ್ಲಿ ಹಾಡುವ ಕೆಲಸವನ್ನು ನೀಡಿ ಸಹಾಯ ಮಾಡಿದ್ದರು. ಮಾತ್ರವಲ್ಲದೆ ತಮ್ಮ ಎಲ್ಲಾ ಚಿತ್ರಗಳ ನಿರ್ಮಾಪಕರಿಗೂ ಹೇಮಂತ್ ರವರು ತಮ್ಮ ಚಿತ್ರಗಳಲ್ಲಿ ಕನಿಷ್ಠ ಒಂದು ಹಾಡನ್ನಾದರೂ ಹಾಡಲೇಬೇಕು ಎಂಬ ನಿಯಮವನ್ನು ಕೂಡ ಮಾಡಿದ್ದರು. ಹೀಗಾಗಿ ಗಾಯಕ ಹೇಮಂತ್ ರವರಿಗೆ ದರ್ಶನ್ ರವರ ಎಂದರೆ ಸಾಕಷ್ಟು ಪ್ರೀತಿ ಹಾಗೂ ಗೌರವ. ಇದಕ್ಕಾಗಿ ದರ್ಶನ್ ರವರ ಪ್ರತಿಯೊಂದು ಜನ್ಮದಿನಕ್ಕೂ ಅವರ ಮನೆಗೆ ಹೋಗಿ ಶುಭಾಶಯಗಳನ್ನು ತಿಳಿಸಿ ಬರುತ್ತಾರೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಹೇಮಂತ್ ರವರು ಹೊಂದಿರುವ ಭ್ರಾತೃತ್ವದ ಸಂಬಂಧ.

Leave a Reply

Your email address will not be published. Required fields are marked *