News from ಕನ್ನಡಿಗರು

ಬಾಕ್ಸ್ ಆಫೀಸ್ ಉಡೀಸ್ ಮಾಡುವಂತಹ ಸುದ್ದಿ ಕೊಟ್ಟ ದರ್ಶನ್, ರವಿ ಮಾಮ ರವರ ಜೊತೆ ಕಾಣಿಸ್ಕೊಂಡದ್ದು ಯಾಕೆ ಗೊತ್ತೇ?? ಯಾವ ಸಿನಿಮಾ ಗೊತ್ತೇ?

5,919

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಕೂಡ ಆಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಇಬ್ಬರು ಒಟ್ಟಿಗೆ ಇರುವಂತಹ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಇವರಿಬ್ಬರು ಇದಕ್ಕೂ ಮುನ್ನ ಕುರುಕ್ಷೇತ್ರ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ.

ಕುರುಕ್ಷೇತ್ರ ಚಿತ್ರದ ನಂತರ ಡಿ ಬಾಸ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಇಬ್ಬರು ಕೂಡ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿ ಎಂಬುದಾಗಿ ಅಭಿಮಾನಿಗಳು ಹಾರೈಸಿದ್ದರು. ಈಗ ಆ ಹಾರೈಕೆ ಫಲಿಸಿದೆ ಎಂಬುದಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಡಿ ಬಾಸ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಕೂಡ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದೇ ಸಿನಿಮಾದ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವುದು.

ಹೌದು ಗೆಳೆಯರೇ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಡಿಬಾಸ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ ಸಿನಿಮಾದಲ್ಲಿ. ಹೌದು ಗೆಳೆಯರೇ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ಎಂಟು ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ವಿ ಹರಿಕೃಷ್ಣ ರವರು ನಿರ್ದೇಶಿಸುತ್ತಿದ್ದು ನಿರ್ಮಾಣವನ್ನು ಶೈಲಜಾ ನಾಗ್ ರವರು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪ ಅಥವಾ ಅಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಇವುಗಳನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.

Leave A Reply

Your email address will not be published.