News from ಕನ್ನಡಿಗರು

ಪತ್ನಿ ವಿಜಯಲಕ್ಷ್ಮಿ ರವರಿಗಾಗಿ ವಿಶೇಷವಾದ ಉಡುಗೊರೆಯನ್ನು ತರಿಸಿ ಕೊಟ್ಟ ದರ್ಶನ. ಏನು ಗೊತ್ತೇ?? ಮನೆಯಲ್ಲಿದೆ ಹಬ್ಬದ ವಾತಾವರಣ.

18

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ವಿ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾದಲ್ಲಿ ಡಿಬಾಸ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಕ್ಷಣದ ಕ್ರಾಂತಿಯ ಸಿನಿಮಾ ಆಗಿರುವ ಕ್ರಾಂತಿ ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣವನ್ನು ಪೂರೈಸಿದೆ ಎನ್ನುವ ಸುದ್ದಿ ಕೂಡ ಸಿಕ್ಕಿದೆ. ಹೀಗಾಗಿ ಈ ವರ್ಷದ ಅಂತ್ಯದ ಒಳಗೆ ಕ್ರಾಂತಿ ಸಿನಿಮಾ ದೊಡ್ಡ ಪರದೆಯ ಮೇಲೆ ಮಿಂಚುವುದು ಗ್ಯಾರಂಟಿ. ಸದ್ಯಕ್ಕೆ ಕನ್ನಡದ ಮೀಡಿಯಾಗಳು ದರ್ಶನ್ ರವರ ಸಿನಿಮಾಗಳಿಗೆ ಪ್ರಚಾರವನ್ನು ನೀಡುವುದನ್ನು ನಿಷೇಧಿಸಿದೆ ಆದರೂ ಕೂಡ ಅಭಿಮಾನಿಗಳು ಕರ್ನಾಟಕದಾದ್ಯಂತ ಚಿತ್ರಕ್ಕೆ ತಾವೇ ಪ್ರಮೋಷನ್ ಮಾಡುತ್ತಿದ್ದಾರೆ.

ಈ ಮೂಲಕ ಮೀಡಿಯಾಗಳು ಬಿಟ್ಟರು ಕೂಡ ಡಿ ಬಾಸ್ ರವರ ಕೈಯನ್ನು ನಾವು ಬಿಡುವುದಿಲ್ಲ ಎಂಬುದಾಗಿ ತೊಡೆ ತಟ್ಟಿ ನಿಂತಿದ್ದಾರೆ. ಸದ್ಯಕ್ಕೆ ಬಿಡುವಿನ ಲ್ಲಿರುವ ಡಿ ಬಾಸ್ ರವರ ತಮ್ಮ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ತಮ್ಮ ಮಡದಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ರವರ ಜೊತೆಗೆ ಕಾಲಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಡಿ ಬಾಸ್ ರವರು ತರಿಸಿರುವ ಒಂದು ಉಡುಗೊರೆ ಅವರ ಮಡದಿ ಹಾಗೂ ಮಗನ ಮುಖದಲ್ಲಿ ಸಂತೋಷವನ್ನು ಮೂಡಿಸಿದೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ.

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರು ಚಿಕ್ಕವಯಸ್ಸಿನಿಂದಲೂ ಕೂಡ ಪ್ರಾಣಿ ಪ್ರೇಮಿ. ಈಗ ಅವರ ಫಾರ್ಮ್ ಹೌಸ್ ಗೆ ವಿದೇಶದಿಂದ ತರಿಸಿರುವ ಕುದುರೆಯೊಂದು ಬಂದಿದ್ದು ಈಗಾಗಲೇ ಅದರ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮುದ್ದಾದ ಕುದುರೆಯನ್ನು ನೋಡಿ ಡಿ ಬಾಸ್ ರವರ ಮಡದಿ ಹಾಗೂ ಮಗ ಕೂಡ ಖುಷಿಪಟ್ಟಿದ್ದಾರೆ.

Leave A Reply

Your email address will not be published.