ಡಿ ಬಾಸ್ ಬಳಿ ಇರೋ ಕಾರುಗಳ ಲಿಸ್ಟ್, ಇಲ್ಲಿದೆ ನೋಡಿ..!

ನಮಸ್ಕಾರ ಸ್ನೇಹಿತರೆ ನಾವು ಇಂದು ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಖ್ಯಾತರಾದ ನಮ್ಮೆಲ್ಲರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಇರುವ ಕಾರುಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ, ಡಿ ಬಾಸ್ ಅವರಿಗೆ ಕೇವಲ ಸಿನಿಮಾದ ಮೇಲೆ ಮಾತ್ರ ಕ್ರೇಜ್ ಇಲ್ಲ, ಜೊತೆಗೆ ಅವರಿಗೆ ಕಾರ್ ಗಳ ಮೇಲೂ ಸಹ ದೊಡ್ಡಮಟ್ಟದ ಕ್ರೇಜ್ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇತ್ತೀಚೆಗೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಅವರ ಕಾರುಗಳನ್ನು ನೀವು ನೋಡಿರಬಹುದು ಅವುಗಳ ಲಿಸ್ಟ್ ನೋಡೋಣ ಬನ್ನಿ..

ಮೊದಲನೆಯದಾಗಿ ಲ್ಯಾಂಬೋರ್ಗಿನಿ ಅವೆನ್ ಟೇಡರ್ ಕಾರಿನ ಬೆಲೆ ಬರೋಬ್ಬರಿ ಐದು ಕೋಟಿ ರೂಪಾಯಿಗಳು. ನೀವು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದರೆ, ನಿಮಗೆ ಈ ಕಾರಿನ ಬಗ್ಗೆ ತಿಳಿದೇ ಇರುತ್ತದೆ, ದರ್ಶನ್ ಅವರು ಈ ಲ್ಯಾಂಬೋರ್ಗಿನಿ ಯನ್ನು ಓಡಿಸುತ್ತಿರುವ ದೃಶ್ಯ ಎಲ್ಲಾ ಕಡೆ ವೈರಲ್ ಆಗಿತ್ತು. ಎರಡನೆಯದಾಗಿ ನೋಡುವುದಾದರೆ ಇದು ಲ್ಯಾಂಬೋರ್ಗಿನಿ ಯುರಸ್ ಇದು ಹಳದಿ ಬಣ್ಣ ಹೊಂದಿದು.ಈ ಕಾರಿನ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿಗಳು.

ನಂತರ ಜಾಗ್ವಾರ್ ಎಕ್ಸ್ ಕೆಆರ್, ಈ ಕಾರ್ ಬರೋಬ್ಬರಿ 88 ಲಕ್ಷ ರೂಪಾಯಿಗಳು. ಬ್ಲೂ ಬಣ್ಣದಾಗಿದ್ದು ಹಲವಾರು ವಿಶೇಷಗಳನ್ನು ಒಳಗೊಂಡಿದೆ. ಪೋರ್ಸಿ ಮ್ಯಕನ್ ಮತ್ತು ಆಡಿ ಕ್ಯೂ ಸವೆನ್. ಇದರ ಬೆಲೆ 80 ಲಕ್ಷ ರೂಪಾಯಿಗಳು, ಇದು ಹಲವಾರು ಉಪಯೋಗಗಳನ್ನು ಹೊಂದಿದೆ. ನಂತರ ರೇಂಜ್ ರೋವರ್ ವೋಗ್ ಈ ಕಾರಿನ ಬೆಲೆ ಸುಮಾರು ಎರಡು ಕೋಟಿ ರೂಪಾಯಿಗಳು. ಅಷ್ಟಲ್ಲದೆ ಇನ್ನೂ ಅನೇಕ ದುಬಾರಿ ಫಾರಿನ್ ಕಾರುಗಳು ದರ್ಶನ್ ರವರ ಬಳಿ ಇವೆ, ಅದು ಯಾವುದೆಂದರೆ.

ಹಮ್ಮರ್ H3 ಈ ಕಾರಿನ ಬೆಲೆ ಸರಿಸುಮಾರು 80 ಲಕ್ಷ ರೂಪಾಯಿಗಳು ನೀವು ಈ ಕಾರನ್ನು ಹಲವಾರು ಸಿನಿಮಾಗಳಲ್ಲಿ ನೋಡಿರಬಹುದು ಇದು ತುಂಬಾನೇ ಫೇಮಸ್ ಕಾರ್. ನೆಕ್ಸ್ಟ್ ಆಡಿ ಟಿಟಿ ಈ ಕಾರಿನ ಬೆಲೆ ಬರೋಬ್ಬರಿ 66 ಲಕ್ಷ ರೂಪಾಯಿಗಳು. ಅದೇ ರೀತಿ ಈ ಕಾರುಗಳು ಬೆಲೆಗೆ ತಕ್ಕಂತೆ ಹಲವಾರು ಉಪಯೋಗಗಳನ್ನು ಒಳಗೊಂಡಿವೆ. ನಂತರ ಫೋರ್ಡ್ ಮಸ್ಟಾಂಗ್ ಇದರ ಬೆಲೆ ಸರಿಸುಮಾರು 75 ಲಕ್ಷ ರೂಪಾಯಿಗಳು ಇದು ಹಳದಿ ಬಣ್ಣದಲ್ಲಿ ಇದೆ ಹಾಗೆಯೇ ಇದು ತುಂಬಾನೇ ಫೇಮಸ್ ಕಾರ್ ಕೂಡ. ನೋಡಿದ್ರಲ್ಲ ಸ್ನೇಹಿತರೇ ಇಷ್ಟು ದರ್ಶನ್ ರವರ ಬಳಿ ಇರುವ ಹಲವಾರು ವಿಭಿನ್ನ ಹಾಗೂ ವಿಶಿಷ್ಟ ತರಹದ ಜಗತ್ತಿನ ದುಬಾರಿ ಕಾರುಗಳ ಬಗೆಗಿನ ಒಂದು ಚಿಕ್ಕ ಮಾಹಿತಿ.

Comments are closed.