ಬಿಗ್ ಬಾಸ್ ಮುಗಿದ ಕೂಡಲೇ ದಿವ್ಯ ಉರುಡುಗ ಮನೆಗೆ ಹೋದ ಅರವಿಂದ್, ಮಾಡಿದ್ದೇನು ಗೊತ್ತಾ?? ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನಗಳ ಕಾಲ ದಿವ್ಯ ಹಾಗೂ ಅರವಿಂದ ಅವರು ಪ್ರೇಕ್ಷಕರ ನೆಚ್ಚಿನ ಜೋಡಿಯಾಗಿದ್ದರು, ಮನೆಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿ ಕೊಳ್ಳುತ್ತಿದ್ದ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದವು. ಈ ಜೋಡಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಇದ್ದಾರೆ ಅದೇ ಕಾರಣಕ್ಕಾಗಿ ಇಬ್ಬರನ್ನು ಫಿನಾಲೆ ವರೆಗೂ ಕೂಡ ಕರೆ ತಂದಿದ್ದಾರೆ. ಇನ್ನು ಇಂತಹ ಸಮಯದಲ್ಲಿ ನೀವು ಬಹಳ ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದು ಈ ಜೋಡಿಗೆ ಇರುವ ಅಭಿಮಾನಿಗಳ ಸಂಖ್ಯೆ ಎಷ್ಟಿರಬಹುದು ಎಂದು.

ಯಾಕೆಂದರೆ ಬಹಳ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಫೈನಲ್ ವರೆಗೂ ತಲುಪುವಷ್ಟು ಮಟ್ಟಕ್ಕೆ ಅಭಿಮಾನಿಗಳು ಈ ಜೋಡಿಯನ್ನು ಒಪ್ಪಿಕೊಂಡು ಇದ್ದರೇ ಎಂದರೇ ಅಭಿಮಾನಿಗಳ ಸಂಖ್ಯೆಗಳು ಲಕ್ಷಗಳಲ್ಲಿ ಇರಲೇಬೇಕು. ಇನ್ನು ಹೀಗೆ ಮನೆಯಲ್ಲಿ ಪ್ರೇಮ ಪಕ್ಷಿಗಳಂತೆ ಹಾರಾಟ ನಡೆಸಿದ ಈ ಜೋಡಿ ಇದೀಗ ಈಗ ಮನೆಯಿಂದ ಹೊರಬಂದ ಮೇಲೆ ಕೂಡ ಕೆಲವೇ ಕೆಲವು ದಿನಗಳಲ್ಲಿ ಅಧಿಕೃತವಾಗಿ ಬೇಟಿ ಮಾಡಿಕೊಂಡಿದ್ದಾರೆ.

ಹೌದು ಸ್ನೇಹಿತರೇ ಎಲ್ಲಾ ಸ್ಪರ್ಧಿಗಳು ನೀವು ಈಗಾಗಲೇ ಎಲ್ಲ ಟಿವಿಗಳಲ್ಲಿ ನೋಡುತ್ತಿರುವಂತೆ ಸಂದರ್ಶನ ನೀಡುವುದರಲ್ಲಿ ನಿರತರಾಗಿರುವ ಸಮಯದಲ್ಲಿ ದಿವ್ಯ ಹುಡುಗ ಹಾಗೂ ಅರವಿಂದ್ ರವರು ಮಾತ್ರ ಪರಸ್ಪರ ಜೊತೆಯಲ್ಲಿ ಕಾಲಕಳೆಯುತ್ತಿದ್ದಾರೆ, ಇದೀಗ ಬಂದಿರುವ ಮಾಹಿತಿಯ ಪ್ರಕಾರ ಅರವಿಂದ್ ರವರು ದಿವ್ಯ ಉರುಡುಗ ರವರ ಮನೆಗೆ ತೆರಳಿ ಅವರ ತಂದೆ ತಾಯಿಯನ್ನು ಮಾತನಾಡಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ನೋಡಿದ ದಿವ್ಯ ಹಾಗೂ ಅರವಿಂದ ಅಭಿಮಾನಿಗಳು ನಿಜಕ್ಕೂ ಸಂತಸಗೊಂಡಿದ್ದು ಹಾಗೆ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಮಾತುಕತೆ ಮಾಡಿ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, ಆದರೆ ಮದುವೆಯ ಕುರಿತು ಯಾವುದೇ ಚರ್ಚೆ ನಡೆದಿರುವ ಸುದ್ದಿ ತಿಳಿದುಬಂದಿಲ್ಲ, ಅಭಿಮಾನಿಗಳ ಕೋರಿಕೆಯ ಮೇರೆಗೆ ಮದುವೆ ಮಾಡಿಕೊಂಡರು ಯಾವುದೇ ಅಚ್ಚರಿಪಡಬೇಕಾಗಿಲ್ಲ ಯಾಕೆಂದರೆ ಮನೆಯ ಒಳಗಡೆ ಇವರಿಬ್ಬರು ಅಷ್ಟು ಕ್ಲೋಸ್ ಆಗಿದ್ದರು.

Comments are closed.