ಬೆಳಗಾವಿ ಉಪ ಚುನಾವಣೆ ಎದುರಿಸಲು ಡಿಕೆಶಿಯಿಂದ ಮಹಾ ರಣತಂತ್ರ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ, ದಿನೇ ದಿನೇ ಚುನಾವಣಾ ರಂಗು ಏರುತ್ತಿದ್ದು ಬಿಜೆಪಿ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದರೇ ಕಾಂಗ್ರೆಸ್ ಪಕ್ಷವು ದೇಶದ ಎಲ್ಲೆಡೆ ಮೋದಿ ರವರ ವಿರುದ್ಧ ಬಿಡುತ್ತಿರುವ ಟೀಕೆಗಳ ಬಾಣಗಳಿಗೆ ಮೋದಿ ಜನಪ್ರಿಯತೆ ಕಡಿಮೆಯಾಗಿದೆ ಎಂಬಂತೆ ನಿರೂಪಿಸಲು ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ.

ಸುರೇಶ್ ಅಂಗಡಿ ರವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣ ಬಿಜೆಪಿ ಪಕ್ಷ ಗೆಲ್ಲುವ ನೆಚ್ಚಿನ ಕುದುರೆಯಾಗಿದೆ, ಅಷ್ಟೇ ಅಲ್ಲದೆ ಮೋದಿ ಕುರಿತು ಇದೀಗ ಪ್ರತಿ ಪಕ್ಷಗಳ ಆರೋಪಗಳು ಹೆಚ್ಚಾಗಿದ್ದರೂ ಕೂಡ ಮೋದಿ ಅಲೆ ಕಡಿಮೆಯಾಗಿರುವ ಯಾವುದೇ ಸೂಚನೆಗಳು ಮಾತ್ರ ಇಲ್ಲಿಯವರೆಗೂ ಕಾಣಿಸಿಲ್ಲ, ಹಲವಾರು ತಿಂಗಳುಗಳಿಂದ ಮೋದಿ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದರೂ ಕೂಡ ನಡೆಯುತ್ತಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಯಾಗುತ್ತಿದೆ ಇನ್ನು ತನ್ನ ಅಸ್ತಿತ್ವವೇ ಇಲ್ಲದ ಪ್ರದೇಶಗಳಲ್ಲಿ ಗಣನೀಯವಾಗಿ ಮತಗಳನ್ನು ಪಡೆದು ಕೊಂಡು ದಿನೇ ದಿನೇ ಬೆಳೆಯುವ ಸೂಚನೆ ನೀಡುತ್ತಿದೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚೆಗೆ ನಡೆದ ಹೈದರಾಬಾದ್ ಚುನಾವಣೆ.

ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಕುರಿತು ಮಾತನಾಡುವುದಾದರೇ ಈ ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ತೆಗೆದು ಕೊಂಡಿದ್ದು ಡಿಕೆ ಶಿವಕುಮಾರ್ ಅವರು ಹೊಸದೊಂದು ರಣತಂತ್ರ ಹೆಣೆದಿದ್ದಾರೆ, ಈ ರಣತಂತ್ರದ ಅನ್ವಯ ಶಾಸಕರು ಹಾಗೂ ಮಾಜಿ ಶಾಸಕರು ಸೇರಿದಂತೆ ವಿವಿಧ ಕಾಂಗ್ರೆಸ್ ಪಕ್ಷದ ಅರವತ್ತು ನಾಯಕರು ಬೆಳಗಾವಿ ಕ್ಷೇತ್ರದಲ್ಲಿ ಟಿಕಾಣಿ ಮಾಡಲು ನಿರ್ಧಾರ ಮಾಡಿದ್ದಾರೆ, ಈ ಮೂಲಕ ಪ್ರತಿಯೊಂದು ಸಮುದಾಯದ ಸೆಳೆದು ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂಬುದು ಡಿಕೆ ಶಿವಕುಮಾರ್ ಅವರ ತಂತ್ರವಾಗಿದೆ.

Comments are closed.