ಮನೆಯಲ್ಲಿ ದೋಸೆ ಕಾಯಿಸೋ ತವಾದ ಹಿಂದೆಯೂ ಇದೆ ವಾಸ್ತುಶಾಸ್ತ್ರ, ಈ ತಪ್ಪು ಮಾಡಿದ್ದರೇ ಆರ್ಥಿಕ ನಷ್ಟ ಖಚಿತ.

ನಮಸ್ಕಾರ ಸ್ನೇಹಿತರೇ, ಅಡುಗೆ ಮನೆ ಅಂದ್ರೆ ಸಾಕು ಹೆಂಗಸರು ಅಚ್ಚುಕಟ್ಟಾಗಿ ತಮಗೆ ಬೇಕಾದ ರೀತಿಯಲ್ಲಿ ಅಡುಗೆ ಮನೆಯನ್ನು ಸಿದ್ಧಪಡಿಸಿಕೊಂಡುಬಿಡುತ್ತಾರೆ. ಅವರಿಗೆ ಬೇಕಾದ ವಸ್ತುಗಳನ್ನು ಬೇಕಾದ ಕಡೆಗಿಟ್ಟು ಒಪ್ಪ ಓರಣ ಮಾಡುತ್ತಾರೆ. ಆದರೆ ನಾವು ಜೋಡಿಸುವ ಪಾತ್ರೆಗಳೂ ಕೂಡ ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟಿರುತ್ತವೆ ಎಂಬುದು ನಿಮಗೆ ಗೊತ್ತೆ?

ಮನೆಯಲ್ಲಿ ದೋಸೆಯನ್ನೋ, ಚಪಾತಿಯನ್ನೋ ಕಾಯಿಸುವ ತವಾ ಕೂಡ ನಮ್ಮ ಆರ್ಥಿಕ ಹಿನ್ನೆಲೆಗೆ ಸಹಕಾರಿಯಾಗುತ್ತೆ ಅನ್ನುತ್ತೆ ವಾಸ್ತುಶಾಸ್ತ್ರ. ಹಾಗಾಗಿ ತವಾ ಅಥವಾ ಕಾವಲಿಯನ್ನು ಮನೆಯಲ್ಲಿ ಹೇಗಿಡಬೇಕು ಎಲ್ಲಿಡಬೇಕು ಅನ್ನುವುದು ಕೂಡ ಬಹಳ ಮುಖ್ಯ. ಅದರ ಬಗ್ಗೆ ಈಗ ನೋಡೋಣ. ಮೊದಲನೆಯದಾಗಿ ಮನೆಯಲ್ಲಿ ಬಳಸುವ ತವಾ ಶುದ್ಧವಾಗಿಡಬೇಕು. ಬೆಳಗ್ಗೆ ದೋಸೆಯನ್ನೋ ಚಪಾತಿಯನ್ನೋ ಕಾಯಿಸಿ ತವಾವನ್ನು ತೊಳೆಯದೇ ಹಾಗೇ ಇಡಬಾರದು, ಜೊತೆಗೆ ಅಡುಗೆ ಮನೆಯೂ ಕೂಡ ಸ್ವಚ್ಛವಾಗಿರಬೇಕು. ಹಾಗಿಲ್ಲದಿದ್ದರೆ ರಾಹುವಿನ ಕೆಟ್ಟ ದೃಷ್ಟಿ ಮನೆ ಯಜಮಾನನ ಮೇಲೆ ಬೀಳುತ್ತದೆ. ಜೊತೆಗೆ ರಾತ್ರಿ ಅಡುಗೆ ಮನೆಯನ್ನು ಸ್ವಚ್ಛವಾಗಿರಿಸದಿದ್ದಲ್ಲಿ ಅನ್ನಪೂರ್ಣೆಶ್ವರಿ ಹಾಗೂ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾದೀತು.

ಇನ್ನು ಸರಿಯಾದ ದಿಕಿನಲ್ಲಿ ಕಾವಲಿಯನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ಇನ್ನೂ ಮುಖ್ಯವಾಗಿ ಹೊರಗಿನವರ ಕಣ್ಣುಗಳಿಗೆ ಕಾವಲಿ ಬೀಳದಂತೆ ಇಡಬೇಕು. ಹೀಗೆ ಕಂಡರೆ ಅದು ಮನೆಗೆ ಅಶುಭವನ್ನು ಉಂಟು ಮಾಡುತ್ತದೆ. ಇನ್ನು ಕಾವಲಿಯನ್ನು ಬಳಸುವುದಕ್ಕೂ ಮೊದಲು ಅದರ ಮೇಲೆ ತುಸು ಉಪ್ಪನ್ನು ಸಿಂಪಡಿಸಿದರೆ ಮನೆಯಲ್ಲಿ ಸದಾ ಸಂಪತ್ತು, ಧಾನ್ಯ ತುಂಬಿರುತ್ತದೆ ಎಂದು ಅರ್ಥ.

ಸಾಕಷ್ಟು ಜನ ತವಾ ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ನೀರನ್ನು ಚಿಮುಕಿಸುತ್ತಾರೆ. ಹೀಗೆ ಎಂದಿಗೂ ಮಾಡಬಾರದು. ಕಾವಲಿಗೆ ನೀರು ಬಿದ್ದಾಗ ಉಂಟಾಗುವ ಸ್ವರವು ಸಂಸಾರದ ರಾಗದಲ್ಲಿ ಅಪಸ್ವರ ತರುತ್ತದೆ ಎಂಬ ನಂಬಿಕೆ ಇದೆ. ಇನ್ನು ಖಾಲಿ ತವಾವನ್ನು ನೇರವಾಗಿ ಇಡಬಾರದು. ಖಾಲಿ ಪಾತ್ರೆಯು ನಷ್ಟದ ಸಂಕೇತ. ಹಾಗೆಯೇ ಕಾವಲಿಯನ್ನು ಯಾವಾಗಲೂ ಅಡುಗೆ ಕಟ್ಟೆಯ ಮೇಲೆ ಗ್ಯಾಸ್ ನ ಬಲಭಾಗದಲ್ಲಿ ಇರಬೇಕು.

ಮನೆಯಲ್ಲಿ ವಾಸ್ತು ದೋಷದಿಂದ ಸಮಸ್ಯೆಯಾಗಿದ್ದರೆ, ತವಾವನ್ನು ತೊಳೆಯದೆ ಎರಡು ಅಥವಾ ಮೂರು ಇಂಚು ರೊಟ್ಟಿ ತಯಾರಿಸಿ ಅದನ್ನು ಯಾವುದಾದರೂ ಪ್ರಾಣಿ ಅಥವಾ ಪಕ್ಷಿಗೆ ನೀಡಿ. ಹೀಗೆ ಮಾಡಿದಲ್ಲಿ ಮನೆಯಲ್ಲಿ ಮನಃಶಾಂತಿ ಉಂಟಾಗುತ್ತದೆ. ತವಾವನ್ನು ಸ್ವಚ್ಛಗೊಳಿಸುವಾಗ ನಿಂಬೆಹಣ್ಣು ಮತ್ತು ಉಪ್ಪನ್ನು ಸೇರಿಸಿ ಉಜ್ಜಿ. ತವಾ ಹೊಳೆದರೆ ಅದೃಷ್ಟವೂ ಜೊತೆಗಿರುತ್ತದೆ ಎನ್ನುವ ನಂಬಿಕೆ ವಾಸ್ತುಶಾಸ್ತ್ರದಲ್ಲಿದೆ. ಕೊನೆಯದಾಗಿ ತವಾ ಮೇಲೆ ಮಾಡಿ ತಿಂಡಿಯನ್ನು ನೇರವಾಗಿ ಸೇವಿಸದೇ ಮೊದಲು ಪ್ಲೇಟ್ ಗೆ ಹಾಕಿ ನಂತರ ಅದನ್ನು ತಿನ್ನುವ ಪ್ಲೇಟ್ ಗೆ ಬಡಿಸಿ ತಿನ್ನಬೇಕು. ಈ ಕೆಲವು ಸರಳ ವಿಧಾನಗಳ ಮೂಲಕ ಮನೆಯಲ್ಲಿ ಆರ್ಥಿಕ ನಷ್ಟವಾಗುವುದನ್ನು ತಪ್ಪಿಸಬಹುದು.

Comments are closed.