ಎಲ್ಲರ ಬಾಯಲ್ಲೂ ಕೂಡ ನೀರೂರುವಂತಹ ಎಗ್ ಬಿರಿಯಾನಿ ಯನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ವಿಟಮಿನ್ ಯುಕ್ತ ಆಹಾರಗಳ ಸೇವನೆ ಒಳ್ಳೆಯದು ಅಂತಾ ಎಲ್ಲಾ ಡಾಕ್ಟರ್ ಗಳು ಹೇಳ್ತಾ ಇರ್ತಾರೆ, ಮೊಟ್ಟೆಯಲ್ಲೂ ಒಳ್ಳೇ ಪ್ರೊಟೀನ್ ವಿಟಮಿನ್ ಇರುತ್ತೆ ಆ ಮೊಟ್ಟೆ ಬಳಸಿ ಅನೇಕ ರೆಸಿಪಿ ಮಾಡಬಹುದು ಅದ್ರಲ್ಲಿ ಒಂದು ಎಗ್ ಬಿರಿಯಾನಿ. ಅತ್ಯಂತ ವೇಗವಾಗಿ ಸುಲಭವಾಗಿ ಮಾಡಬಹುದಾದ ರೆಸಿಪಿ ಈ ಎಗ್ ಬಿರಿಯಾನಿ.

ಮೊದಲು ಮೊಟ್ಟೆಗಳನ್ನ ಬೇಯಿಸಿ ಸಿಪ್ಪೆ ತೆಗೆದು ಇಟ್ಟುಕೊಂಡು, ಅವುಗಳಿಗೆ ಮಸಾಲೆ ಒಳಗೆ ಸೇರುವಂತೆ ಚಾಕುವಿನಲ್ಲಿ ಸುತ್ತಲೂ ನಾಲ್ಕೈದು ಕಡೆ ಚುಚ್ಚಿ ಇಟ್ಟುಕೊಳ್ಳಬೇಕು, ಟೊಮೆಟೊ,ಈರುಳ್ಳಿ, ಬೆಳ್ಳುಳ್ಳಿ, ಹಸಿಶುಂಠಿ, ಎರೆಡು ಹಸಿ ಮೆಣಸಿನಕಾಯಿ,ಕೊತ್ತಂಬರಿಸೊಪ್ಪು, ಪುದಿನಾ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಟ್ಟುಕೊಂಡು ನಂತರ ಅಕ್ಕಿ ನೆನೆಸಿಟ್ಟುಕೊಳ್ಳಬೇಕು.

ಸ್ಟವ್ ಮೇಲೆ ಕುಕ್ಕರ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಸಾಸಿವೆ, ಕಾಳು ಮೆಣಸು, ಪಲಾವ್ ಎಲೆ, ಹಾಕಿ ಸ್ವಲ್ಪ ಘಮ್ ಅನ್ನುವ ವರೆಗೆ ಫ್ರೈ ಮಾಡ್ಕೊಂಡು ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕೊಂಡು ಈರುಳ್ಳಿ ಗೋಲ್ಡ್ ಕಲರ್ ಬರುವವರೆಗೆ ಫ್ರೈ ಮಾಡಿ, ಮೊದಲೇ ರುಬ್ಬಿಟ್ಟುಕೊಂಡ ಶುಂಠಿ ಬೆಳ್ಳುಳ್ಳಿ ಮಿಶ್ರಣ ಪೇಸ್ಟ್ ಸೇರಿಸಿ, ಸ್ವಲ್ಪ ಮೊಸರನ್ನ ಸೇರಿಸಿ ಫ್ರೈ ಮಾಡ್ಕೊಂಡು ಹಸಿ ವಾಸನೆ ಹೋದಾಗ ಅಚ್ಚಕಾರದಪುಡಿ,ಧನ್ಯಪುಡಿ, ಅರಿಶಿನಪುಡಿ, ಉಪ್ಪು, MTR ಬಿರಿಯಾನಿ ಪೌಡರ್ ಸೇರಿಸಿ ಸ್ವಲ್ಪ ತುಪ್ಪ ಹಾಕಿ ನೆನೆಸಿಟ್ಟುಕೊಂಡ ಅಕ್ಕಿ ಸೇರಿಸಿ ಫ್ರೈ ಮಾಡಿಕೊಂಡು ಸರಿಹೊಂದುವಷ್ಟು ನೀರು ಸೇರಿಸಿ ಎರೆಡು ಕುದಿ ಬಂದಮೇಲೆ ಚನ್ನಾಗಿ ಕಲೆಸಿ ಮೊದಲೇ ಬೇಯಿಸಿಟ್ಟ ಮೊಟ್ಟೆ ಹಾಕಿ ಕುಕ್ಕರ್ ಮುಚ್ಕೊಂಡು ಎರೆಡು ಕೂಗು ಕೂಗಿಸಿದ ನಂತರ ಬಿಸಿ ಬಿಸಿ ಹೆಲ್ದಿ ಬಿರಿಯಾನಿ ರೆಡಿ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ಹೇಗಾಗಿತ್ತು ಅಂತಾ ತಿಳಿಸಿ.

Comments are closed.