ಎಲ್ಲರೂ ಮತ್ತೆ ಮತ್ತೆ ಕೇಳಿ ಕೇಳಿ ಮಾಡಿಸಿಕೊಳ್ಳುವ ಎಗ್ ಪೆಪ್ಪರ್ ಫ್ರೈ ಮನೆಯಲ್ಲಿಯೇ ಹೀಗೆ ಮಾಡಿ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೊಟ್ಟೆ ತಿನ್ನೋಕೆ ಬಹಳ ರುಚಿ. ಅದರಲ್ಲೂ ಅದರಿಂದ ಬೇರೆ ಬೇರೆ ತರದ ಪದಾರ್ಥಗಳನ್ನು ಮಾಡಿ ಸವಿಯೋಕೆ ಇನ್ನೂ ಮಜವಾಗಿರತ್ತೆ. ಅಂತ ಸೂಪರ್ ಫುಡ್ ನಲ್ಲಿ ಎಗ್ ಪೆಪ್ಪರ್ ಮಸಾಲ ಕೂಡ ಒಂದು. ಇದನ್ನ ಮಾಡೋದು ಹೇಗೆ ನೋಡೋಣ ಬನ್ನಿ.

ಎಗ್ ಪೆಪ್ಪರ್ ಮಸಾಲ ಮಾಡಲು ಬೇಕಾಗುವ ಸಾಮಗ್ರಿಗಳು: ಮೊಟ್ಟೆ ಬೇಯಿಸಿದ್ದು ನಿಮಗೆ ಬೇಕಾದಷ್ಟು ಹಾಕಬಹುದು, ಎಣ್ಣೆ, ಈರುಳ್ಳಿ 3 ಹೆಚ್ಚಿಟ್ಟುಕೊಂಡಿದ್ದು, ಹಸಿಮೆಣಸು -3, ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ, ಕೊತ್ತಂಬರಿ ಪುಡಿ-ಕಾಲು ಚಮಚ, ಜೀರಿಗೆ ಪುಡಿ – ಕಾಲು ಚಮಚ, ಅರಿಸಿನ ಸ್ವಲ್ಪ, ಪೆಪ್ಪರ್ ಪುಡಿ – ಕಾಲು ಚಮಚ, ಕರಿಬೇವು 4 ಎಲೆ, ಸೋಯಾ ಸಾಸ್, ಉಪ್ಪು ರುಚಿಗೆ ತಕ್ಕಷ್ಟು. ಸ್ವಲ್ಪ ನೀರು.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ. ಅದು ಸ್ವಲ್ಪ ಬಿಸಿಯಾದ ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೂ ಫ್ರೈ ಮಾಡಿ. ನಂತರ ಕಟ್ ಮಾಡಿಕೊಂಡ ಹಸಿಮೆಣಸು ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ತಿರುವಿ. ನಂತರ ಇದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಅರಿಸಿನ ಹಾಗೂ ಗರಮ್ ಮಸಾಲ ಪುಡಿ ಇವುಗಳನ್ನು ಕಾಲು ಚಮಚದಷ್ಟು ಹಾಕಿ ಮಿಕ್ಸ್ ಮಾಡಿ ತಳ ಹಿಡಿಯದಂತೆ ಫ್ರೈ ಮಾಡಿ.

ನಂತರ ಇದಕ್ಕೆ ಕಾಲು ಚಮಚ ಪೆಪ್ಪರ್ ( ಕಾಳು ಮೆಣಸಿನ ಪುಡಿ) ಪುಡಿಯನ್ನು ಹಾಕಿ. ನಿಮ್ಮ ಖಾರಕ್ಕೆ ಅನುಗುಣವಾಗಿ ಪೆಪ್ಪರ್ ಪೌಡರ್ ನ್ನು ಹಾಕಿ. ಹಾಗೆಯೇ ಕರಿಬೇವಿನ ಎಲೆಗಳನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸೋಯಾ ಸಾಸ್ ನ್ನು ಹಾಕಿ. ಇದು ಬೇಡವಾದರೆ ಹಾಕದೆ ಇರಬಹುದು. ಹಾಕಿದರೆ ರುಚಿ ಉತ್ತಮವಾಗಿರುತ್ತದೆ. ನಂತರ ಕಾಲು ಕವ್ ನಷ್ಟು ನೀರನ್ನು ಹಾಕಿ ಬೇಯಿಸಿ. ಇದಕ್ಕೆ ಟೊಮ್ಯಾಟೋ ಪೇಸ್ಟ್ ನ್ನು ಹಾಕಿ. ಟೊಮ್ಯಾಟೋ ಹೆಚ್ಚಿಕೊಂಡು ಬೇಕಿದ್ದರೂ ಹಾಕಬಹುದು. ಇದಕ್ಕೆ ಸ್ವಲ್ಪ ನೀರನ್ನು ಹಾಗೂ ಉಪ್ಪನ್ನು ಸೇರಿಸಿ. ಈ ಮಿಶ್ರಣ ಒಂದು ಕುದಿ ಬಂದ ಮೇಲೆ ನಿಮಗೆ ಬೇಕಾದಷ್ಟು ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಮೊಟ್ಟೆಗಳನ್ನು ಮೊದಲೇ ಎಣ್ಣೆಯಲ್ಲಿ ಫ್ರೈ ಮಾಡಿ ಕೂಡ ಸೇರಿಸಬಹುದು. ಇದೀಗ ಬಾಯಲ್ಲಿ ನೀರೂರಿಸುವ ಎಗ್ ಪೆಪ್ಪರ್ ಮಸಾಲ ರೆಡಿ.

Comments are closed.