ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳಿಂದ ಮೊಟ್ಟೆ ಇಲ್ಲದೇ ಕೇಕ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿಹಿಗಳಲ್ಲಿ ಅತ್ಯಂತ ರುಚಿ ಕೇಕ್. ಕೇಕ್ ತಿನ್ನೋದಕ್ಕೆ ರುಚಿ ಆದ್ರೆ ಮಾಡೋದಕ್ಕೆ ಬಹಳ ಕಷ್ಟ. ಅದರಲ್ಲೂ ಮನೆಯಲ್ಲಿ ಮಾಡೋದು ದೂರದ ಮಾತು. ಹೀಗೆ ಅಂದುಕೊಂಡು ಸಾಕಷ್ಟು ಜನ ಕೇಕ್ ಮಾಡುವ ಉಸಾಬರಿ ಹಚ್ಚಿಕೊಳ್ಳುವುದೇ ಇಲ್ಲ. ಆದರೆ ಕೇಕೆ ಎಷ್ಟು ಸುಲಭವಾಗಿ ಮಾಡಬಹುದೆಂದರೆ, ನಾವು ಈಗ ಹೇಳಿಕೊಡುವ ರೆಸಿಪಿ ತರ ಮಾಡಿದ್ರೆ ವಾರದಲ್ಲಿ 2 ದಿನ ಮಾಡೇ ಮಾಡ್ತೀರಿ. ಇದಕ್ಕೆ ಮೈದಾ ಬೇಡ, ಈಸ್ಟ್ ಬೇಡ, ಮೊಟ್ಟೆಯಂತೂ ಬೇಡವೇ ಬೇಡ. ಕೆಲವೇ ಕೆಲವು ವಸ್ತುಗಳು ಸಾಕು ಇದನ್ನು ತಯಾರಿಸಲು. ಹಾಗಾದ್ರೆ ಮಾಡೋದು ಹೇಗೆ.. ಬನ್ನಿ ನೋಡೋಣ.

ಎಗ್ ಲೆಸ್ ಕೇಕ್ ಮಾಡೋದಕ್ಕೆ ಬೇಕಾಗುವ ಸಾಮಗ್ರಿಗಳು; ಗೋಡಂಬಿ 5-10, ಬಾದಾಮಿ 4-5, ಖರ್ಜೂರ 10, ಬೆಲ್ಲ ಒಂದು ಚಿಕ್ಕ ಬೌಲ್, ಎಣ್ಣೆ ಒಂದು ಚಿಕ್ಕ ಬೌಲ್, ಗೋದಿಹಿಟ್ಟು ಒಂದು ಬೌಲ್, ಹಾಲಿನ ಪೌಡರ್ ಒಂದು ಬೌಲ್, ಬೇಕಿಂಗ್ ಸೋಡಾ ಒಂದು ಸಣ್ಣ ಚಮಚ, ಬೇಕಿಂಗ್ ಪೌಡರ್ ಒಂದು ಸಣ್ಣ ಚಮಚ, ಏಲಕ್ಕಿ ಹುಡಿ ಸ್ವಲ್ಪ ( ಬೇಕಿದ್ದರೆ ಮಾತ್ರ) ಹಾಲು ಒಂದೂವರೆ ಬೌಲ್.

ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಕತ್ತರಿಸಿ ಇಟ್ಟುಕೊಂಡ ಬಾದಾಮಿ, ಗೋಡಂಬಿ, ಖರ್ಜೂರ, ಬೆಲ್ಲವನ್ನು ಹಾಕಿ ಅದಕ್ಕೆ ಮುಕ್ಕಾಲು ಕಪ್ ನಷ್ಟು ಹಾಲನ್ನು ಹಾಕಿ ಮುಕ್ಕಾಲು ಗಂಟೆ ನೆನೆಯಲು ಬಿಡಿ. ಅದು ನೆನೆಯುವಷ್ಟರಲ್ಲಿ ಗೋದಿಹಿಟ್ಟು, ಹಾಲಿನ ಪೌಡರ್, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.

ಮುಕ್ಕಾಲು ಗಂಟೆಯ ಬಳಿಕ ನೆನೆದ ಮಿಶ್ರಣವನ್ನು ಮಿಕ್ಸರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ, ಅದಕ್ಕೆ ಒಂದು ಬೌಲ್ ಎಣ್ಣೆಯನ್ನು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅರ್ಧ ಕಪ್ ಹಾಲನ್ನು ಹಾಕಿಕೊಂಡು ಹಿಟ್ಟನ್ನು ಸರಿಯಾದ ಹದಕ್ಕೆ ಕಲಸಿ.

ಈ ಹಿಟ್ಟನ್ನು ಒಂದು ಕೇಕ್ ಪ್ಯಾನ್ ( ಅಲ್ಯುಮಿನಿಯಂ) ಗೆ ಹಾಕಿ, ಅದಕ್ಕೆ ಡ್ರೈ ಪ್ರುಟ್ಸ್ ನಿಂದ ಅಲಂಕಾರ ಮಾಡಿ ಓವನ್ ನಲ್ಲಿ 20 ನಿಮಿಷ ಬೇಯಿಸಿ. ಅಥವಾ ಕುಕ್ಕರ್ ನಲ್ಲಿ ಅಥವಾ ಮುಚ್ಚಳಿರುವ ತವಾ ತೆಗೆದುಕೊಳ್ಳಿ. ಆ ಪಾತ್ರೆಗೆ ಅಡಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ. ಈಗ ಒಂದು ಪಾತ್ರೆ ತಳ ಹಿಡಿಯದಂತೆ ಸ್ಟ್ಯಾಂಡ್ ಇಟ್ಟು ಕೇಕ್ ಮಿಶ್ರಣದ ಪಾತ್ರೆಯನ್ನು ಇಡಿ. 20 ನಿಮಿಷಗಳ ಕಾಲ ಬೇಯಿಸಿ ನಂತರ ತೆಗೆಡಿದಿ. ಇದು ಬೆಕ್ ಆದಮೇಲೆ ಮತ್ತೊಂದು ಸರ್ವಿಂಗ್ ಪಾತ್ರೆಗೆ ಹಾಕಿದರೆ ಮೃದುವಾದ ರುಚಿಯಾದ ಕೇಕ್ ತಿನ್ನಲು ಸಿದ್ಧ. ಇನ್ಯಾಕ್ ತಡ, ಮನೆಯಲ್ಲೊಮ್ಮೆ ಮಾಡಿಯೇ ಬಿಡಿ ಈ ಕೇಕ್ ನ್ನು.

Comments are closed.