ಚಿನ್ನದ ದರದಲ್ಲಿ ಭಾರಿ ಕುಸಿತ, ಖರೀದಿ ಮಾಡಲು ಅಂಗಡಿಗಳಿಗೆ ಮುಗಿಬಿದ್ದ ಜನ, ದರ ಎಷ್ಟಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಮಹಿಳೆಯರು ಬಹುತೇಕರು ಅಲಂಕಾರಪ್ರಿಯರು. ಅದರಲ್ಲೂ ಅಲಂಕಾರ ಎಂದಾಗ ಮೊದಲಿಗೆ ಬರುವುದು ಒಡವೆ ಅಭರಣಗಳ ವಿಷಯ. ಹೌದು ಸ್ನೇಹಿತರೆ ಇಡೀ ಪ್ರಪಂಚದಲ್ಲಿ ಹೋಲಿಸಿದರೆ ಭಾರತದ ಮಹಿಳೆಯರು ಅತ್ಯಂತ ಹೆಚ್ಚು ಚಿನ್ನವನ್ನು ಖರೀದಿಸುತ್ತಾರೆ ಅದರಲ್ಲೂ ಕೂಡ ಅಕ್ಷಯ ತೃತೀಯ ಬಂತೆಂದರೆ ಸಾಕು ದಾಖಲೆಯ ಮಟ್ಟದಲ್ಲಿ ಚಿನ್ನದ ವ್ಯಾಪಾರ ನಡೆಯುತ್ತದೆ ನಮ್ಮ ದೇಶದಲ್ಲಿ.

ಸಾಮಾನ್ಯವಾಗಿ ನಮ್ಮ ದೇಶದ ಎಲ್ಲಾ ವರ್ಗದ ಮಹಿಳೆಯರಿಗೆ ಚಿನ್ನ ಎಂದರೆ ತುಂಬಾ ಇಷ್ಟ ವಿರುತ್ತದೆ ಹಾಗಾಗಿ ಚಿನ್ನವನ್ನು ಖರೀದಿಸುವುದಕ್ಕಾಗಿ ಬಹಳಷ್ಟು ಹಣವನ್ನು ಕೂಡ ಕೂಡಿಟ್ಟಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಚಿನ್ನವನ್ನು ಖರೀದಿಸುವುದಕ್ಕೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಅದರ ಬೆಲೆ ಏರಿಕೆ. ನಮ್ಮ ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಪೆಟ್ರೋಲ್ ಹಾಗೂ ಚಿನ್ನದ ದರ ಖಂಡಿತವಾಗಿಯೂ ಯಾರಿಗೂ ಹೇಳದಂತೆ ಹೇಳಿದಂತೆ ಏರಿಕೆಯಾಗಿ ಬಿಡುತ್ತದೆ ಎಂಬುದನ್ನು ನೀವು ಈಗಾಗಲೇ ಗಮನಿಸಿದ್ದೀರಿ. ಲಾಕ್ಡೌನ್ ಹಾಗೂ ಗಣೇಶನ ಹಬ್ಬ ಹೇಗೆ ಹಲವರು ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆ ಸಾಕಷ್ಟು ಗಗನದ ಮಟ್ಟಕ್ಕೆ ಏರಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಹಾಗೂ ಪೆಟ್ರೋಲ್ ಡೀಸೆಲ್ ಎರಡರ ಬೆಲೆಯಲ್ಲಿ ಕೂಡ ಸಾಕಷ್ಟು ಇಳಿಕೆ ಕಂಡು ಬಂದಿದ್ದು ಚಿನ್ನವನ್ನು ಖರೀದಿಸಲು ಅಂಗಡಿಗೆ ಜನರು ಮುತ್ತಿಗೆ ಇಡುತ್ತಿದ್ದಾರೆ.

ಈಗ ಪೆಟ್ರೋಲ್ ದರ 104.70 ರೂಪಾಯಿ ಆಗಿದೆ. ಡೀಸೆಲ್ ದರ 94.04 ರೂಪಾಯಿ ಆಗಿದೆ. ಇನ್ನು ಚಿನ್ನದ ದರ 22 ಕ್ಯಾರೆಟ್ ಚಿನ್ನ, 10 ಗ್ರಾಮ್ ಗೆ 43,300 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 59,300 ರೂಪಾಯಿ ಆಗಿದೆ. ಇಷ್ಟು ಕಡಿಮೆಯಾಗಿರುವುದು ಚಿನ್ನವನ್ನು ಖರೀದಿ ಮಾಡ ಬಯಸುವ ಮಹಿಳೆಯರಿಗೆ ತುಂಬಾ ಖುಷಿಯಾಗಿದೆ ಆದರೆ ಇದರ ಮೇಲೆ ಹೂಡಿಕೆ ಮಾಡಬೇಕೆಂದು ಕೊಳ್ಳುವವರಿಗೆ ಮಾತ್ರ ದುಃಖದ ಸಂದರ್ಭವಾಗಿದೆ. ನೀವು ಚಿನ್ನವನ್ನು ಖರೀದಿಸಬೇಕು ಎಂದು ಅಂದುಕೊಂಡಿದ್ದೀರಾ ಅಥವಾ ಅದರ ಮೇಲೆ ಹೂಡಿಕೆ ಮಾಡಬೇಕು ಅಂದುಕೊಂಡಿದ್ದೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.