ಹೆಚ್ಚಿನ ಸಮಯ ಬೇಡ, ಕೇವಲ ಮುಂದಿನ 6 ತಿಂಗಳಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ?? ತಜ್ಞರ ವರದಿ ಏನು ಹೇಳುತ್ತದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಭಾರತೀಯಯರು ಚಿನ್ನದ ಆಭರಣಗಳನ್ನು ಧರಿಸದೇ ಇರುವುದು ಅಸಾಧ್ಯವೇ ಸರಿ. ಯಾವುದೇ ಸಮಾರಂಭಗಳಿದ್ದರೂ ತಪ್ಪದೇ ಚಿನ್ನದ ಖರೀದಿ ಇದ್ದೇ ಇರುತ್ತದೆ. ಇನ್ನು ಅಕ್ಷಯ ತ್ರತೀಯಾದಂಥ ಸಂದರ್ಭದಲ್ಲಿ ಸ್ಪಲ್ಪವಾದರೂ ಸರಿ ಚಿನ್ನ ಕೊಳ್ಳಲು ಬಂಗಾರದ ಅಂಗಡಿಗೆ ಮುಗಿ ಬೀಳುತ್ತಾರೆ. ಅದರೆ ಇತ್ತೀಚಿಗೆ ಚಿನ್ನ ಎನ್ನುವುದು ಸಾಕಷ್ಟು ಜನರಿಗೆ ಗಗನ ಕುಸುಮವಾಗಿದೆ.

ಕರೋನಾ ಭಾದಿಸಲು ಶುರುವಾದಾಗಿನಿಂದ ಚಿನ್ನದ ಬೆಲೆ ಏರುತ್ತಲೇ ಇದೆ. ಕೆಲವೊಮ್ಮೆ ಸ್ಪಲ್ವ ಕಡಿಮೆಯಾದರೂ ಕೂಡ ಒಂದೆರಡು ವರ್ಷಗಳ ಹಿಂದಿನ ಚಿನ್ನದ ದರಕ್ಕೆ ಹೋಲಿಸಿದರೆ ಇಂದಿನ ಚಿನ್ನದ ದರ ಸಾಕಷ್ಟು ಹೆಚ್ಚು. ಹಾಗೆಯೇ ಬೆಳ್ಳಿಯ ದರವೂ ಕುಡ ಹೆಚ್ಚಾಗುತ್ತಲೇ ಇದೆ. ಈ ವಾರ 24 ಕ್ಯಾರೆಟ್ ಚಿನ್ನದ ಬೆಲೆ 269ರೂಪಾಯಿಗಳಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 46,597 ರೂಪಾಯಿಗೆ ಏರಿದೆ. ಇನ್ನು ಬೆಳ್ಳಿಯ ಬೆಲೆ ತುಸು ಇಳಿಕೆ ಕಂಡುಬಂದಿದೆ. ಬೆಳ್ಳಿಯಲ್ಲಿ ರೂ 146 ಕುಸಿತ ಉಂಟಾಗಿದೆ.

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ ನ ವರದಿಯ ಪ್ರಕಾರ 23 ಕ್ಯಾರೆಟ್ ಚಿನ್ನದ ಬೆಲೆ 46410 ರೂಪಾಯಿಗಳು. 22 ಕ್ಯಾರೆಟ್ ಚಿನ್ನದ ಬೆಲೆ 42,683 ರೂಪಾಯಿಗಳು. ಹಾಗೂ 18 ಕ್ಯಾರೆಟ್ ಬಂಗಾರದ ಬೆಲೆ 34948 ರೂಪಾಯಿಗಳು. ಹಾಗೆಯೇ ಬೆಳ್ಳಿ ಕೂಡ ಕಳೆದ ವರ್ಷಕ್ಕಿಂತ ಇಳಿಕೆ ಕಂಡಿದ್ದು 13158 ರೂಪಾಯಿ ಇಳಿಕೆಯಾಗಿ, ಪ್ರತಿ ಕೆಜಿಗೆ 62704 ರೂಪಾಯಿಗಳಾಗಿವೆ.

ಚಿನ್ನದ ಬೆಲೆ ಹೀಗೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಪ್ರಕಾರ ಇನ್ನು ಆರರಿಂದ ಒಂದು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆ ಇನ್ನೂ ಏರಿಕೆಯಾಗಬಹುದು ಅಂದರೆ 10 ಗ್ರಾಮ್ ಚಿನ್ನಕ್ಕೆ ಸರಿ ಸುಮಾರು 50000 ರೂಪಾಯಿ ದಾಟಬಹುದು. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದಿದ್ದರೆ ಇದು ಸರಿಯಾದ ಸಮಯ. ಮುಂದಿನ ದಿನಗಳಲ್ಲಿ ಹೂಡಿಕೆ ಮಾದುವುದು ಕಷ್ಟ ಹಾಗೂ ಚಿನ್ನದ ಬೆಲೆ ಒಮ್ಮೆ 50000 ರೂಪಾಯಿ ದಾಟಿದರೆ ಮತ್ತೆ ನಾಲೈದು ವರ್ಷ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Comments are closed.