ಸರ್ಕಾರೀ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ತಮಿಳುನಾಡಿನ ಸರ್ಕಾರ ಜಾರಿಗೆ ತಂತು ಹೊಸ ಮೀಸಲಾತಿ ನಿಯಮ. ಇದು ಬೇಕಾಗಿರೋದು ಎಂದ ಜನತೆ

ನಮಸ್ಕಾರ ಸ್ನೇಹಿತರೇ ಮೀಸಲಾತಿಯನ್ನು ಹಲವಾರು ಕ್ಷೇತ್ರಗಳಲ್ಲಿ ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು ಹೀಗೆ ವಿವಿಧ ಹಂತಗಳಲ್ಲಿ ಮೀಸಲಾತಿಯನ್ನು ನೀಡಲಾಗುತ್ತದೆ. ಆದರೆ ಈ ಮೀಸಲಾತಿನಿಯಮಗಳ ಬಗ್ಗೆ ಎಲ್ಲಾ ರಾಜ್ಯಗಳಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಜೊತೆತೆ ಭಿನ್ನಾಭಿಪ್ರಾಯಗಳೂ ಕೂಡ ಇವೆ. ಆದರೆ ತಮಿಳುನಾಡಿನ ಸರ್ಕಾರ ಶಿಕ್ಷಣದ ವಿಷಯದಲ್ಲಿ ರೂಪಿಸಿರುವ ಹೊಸ ಮೀಸಲಾತಿ ನಿಯಮ ಎಲ್ಲರಿಗೂ ಖುಷಿಕೊಟ್ಟಿದೆ.

ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವುದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳ ಅಗತ್ಯವಿರುತ್ತದೆ ಹಾಗಾಗಿ ತಮಿಳುನಾಡಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದಲ್ಲಿ ಹೆಚ್ಚು ತೊಡಗಿಕೊಳ್ಳಲು ಪ್ರೋತ್ಸಾಹಿಸುವುದಕ್ಕಾಗಿ ಹೊಸ ಮೀಸಲಾತಿಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗಿದೆ. ವಿರೋಧ ಪಕ್ಷವಾದ ಎಐಡಿಎಂಕೆ ಕೂಡ ಇದನ್ನು ಒಪ್ಪಿದ್ದು ಸಧ್ಯದಲ್ಲೇ ಇದು ಅಂಗೀಕಾರವಾಗಬಹುದು.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕಾಗಿ ಶೇ. 7.5ರಷ್ಟು ಮೀಸಲಾತಿ ನೀಡುವ ಹೊಸ ನೂತನ ಮಸೂದೆಯನ್ನು ವಿಧಾನ ಸಭೆಯಲ್ಲಿ ಚರ್ಚೆಗೆ ತಂದರು. ಈ ಮಸೂದೆ ಪ್ರಕಾರ ವೃತ್ತಿಪರ ಕೋರ್ಸ್ಗಳಾದ ಇಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಹಾಗೂ ಕಾನೂನು ವಿಷಯಗಳಲ್ಲಿ ಅಧ್ಯಯನಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ತಿಂಗಳ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ ಮುಖ್ಯಮಂತ್ರಿ ಸ್ಟಾಲಿನ್. ಬಡ ಕುಟುಂಬದ ಮಕ್ಕಳು ವೃತ್ತಿಪರ ಕೋರ್ಸ್ ಗಳಿಗೆ ಸೇರುವುದು ಕಡಿಮೆ. ಹಾಗಾಗಿ ಅವರಿಗೆ ಆನುಕೂಲವಾಗಲೆಂದು ಈ ಮೀಸಲಾತಿ ಘೋಷಿಸಲಾಗುತ್ತಿದೆ ಎಂದು ಸಾಲ್ವಿನ್ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ವಿರೋಧ ಪಕ್ಷ ನಾಯಕ ಎಡಪ್ಪಾಡಿ.ಕೆ. ಪಳನಿಸ್ವಾಮಿ ಕೂಡ ಮಸೂದೆಯನ್ನು ಸ್ವಾಗತಿಸಿದ್ದಾರೆ. ಸಧ್ಯದಲ್ಲೇ ಇದು ಅಂಗೀಕಾರಗೊಳ್ಳಲಿದೆ.

Comments are closed.