News from ಕನ್ನಡಿಗರು

ನನ್ನ ಮಗಳು ಪ್ರಧಾನಿ ಆಗ್ತಾಳೆ ಎಂದ ಆರ್ಯವರ್ಧನ್; ಅದೇಗೆ ಅಂತೇ ಗೊತ್ತೇ?? ಜಿಂಗಲಕ ಜಿಂಗಲಕ ಸ್ವಾಮೀಜಿ ಹೇಳಿದ್ದೇನು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ನಲ್ಲಿ ಆಯ್ಕೆ ಆಗಿರುವ ಪ್ರತಿಯೊಬ್ಬ ಸ್ಪರ್ಧೆ ಕೂಡ ಒಂದಲ್ಲ ಒಂದು ಕ್ಷೇತ್ರದಲ್ಲಿ ಜನಪ್ರಿಯತೆಯನ್ನು ಅಥವಾ ಬೇರೆ ಬೇರೆ ವಿಚಾರಗಳಿಗಾಗಿ ಸುದ್ದಿ ಆದವರು ಎಂದರೆ ತಪ್ಪಾಗಲಾರದು. ವಾಹಿನಿ ಹಾಗೂ ಕಾರ್ಯಕ್ರಮದ ಮ್ಯಾನೇಜ್ಮೆಂಟ್ ಕೂಡ ತನ್ನ ಟಿ ಆರ್ ಪಿ ಯನ್ನು ಹೆಚ್ಚಿಸಿಕೊಳ್ಳಲು ಜನರಿಗೆ ಮನೋರಂಜನೆ ನೀಡುವಂತಹ ಸ್ಪರ್ಧಿಗಳನ್ನೇ ಆಯ್ಕೆ ಮಾಡುತ್ತದೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ವ್ಯಕ್ತಿ ಎಂದರೆ ಅದು ತನ್ನ ಸಂಖ್ಯಾಶಾಸ್ತ್ರದ ಮೂಲಕ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿದ್ದ ಆರ್ಯವರ್ಧನ ಗುರೂಜಿ.

ಅದರಲ್ಲೂ ವಿಶೇಷವಾಗಿ ಆರ್ಯವರ್ಧನ ಗುರೂಜಿ ರವರು ಐಪಿಎಲ್ ಸಂದರ್ಭದಲ್ಲಿ ಯಾವ ತಂಡ ಗೆಲ್ಲುತ್ತದೆ ಎನ್ನುವ ವಿಚಾರದಲ್ಲಿ ತನ್ನ ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯವನ್ನು ನೋಡಿದ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದರು. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ ರವರ ಎದುರೇ ಆರ್ಯವರ್ಧನ್ ಗುರೂಜಿ ರವರು ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಬೇಕರಿ ಕೆಲಸ ಮುಗಿಸಿಕೊಂಡು ಕ್ರಿಕೆಟ್ ನೋಡುತ್ತಿದ್ದ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರವನ್ನು ಕಲಿತುಕೊಂಡು ಸರಿಯಾದ ಭವಿಷ್ಯವನ್ನು ನಾನು ನುಡಿಯುತ್ತಿದ್ದೇನೆ. ನ್ಯೂಮರಾಲಜಿ ಪ್ರಕಾರ ಹಲವಾರು ಭವಿಷ್ಯವನ್ನು ನುಡಿದಿದ್ದೇನೆ ಪ್ರತಿದಿನ 300ಕ್ಕೂ ಹೆಚ್ಚಿನ ಜನರಿಗೆ ನಾನು ಭವಿಷ್ಯ ನುಡಿಯುತ್ತೇನೆ. ನನ್ನನ್ನು ಕಂಡರೆ ಆಗದೆ ಇರುವವರು ನನ್ನ ಬಗ್ಗೆ ಟ್ರೋಲ್ ಮಾಡುತ್ತಾರೆ ಎಂಬುದಾಗಿ ಹೇಳಿದ್ದಾರೆ. ಇದುವರೆಗೂ ಒಟ್ಟಾರೆಯಾಗಿ 10 ಲಕ್ಷಕ್ಕೂ ಅಧಿಕ ಜನರಿಗೆ ನಾನು ಭವಿಷ್ಯವನ್ನು ಹೇಳಿದ್ದೇನೆ ಎಂಬುದಾಗಿ ಕೂಡ ಬಿಗ್ ಬಾಸ್ ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ.

ಒಂದು ಕಾಲದಲ್ಲಿ ನಾನು ಆಟೋ ಓಡಿಸುತ್ತಿದ್ದಾಗ ನನ್ನನ್ನು ನೋಡಿ ಜನರು ನಗುತ್ತಿದ್ದರು ಆದರೆ ನಾನು ಕಷ್ಟಪಟ್ಟು ದುಡಿದು ಮನೆ ಕಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಕೂಡ ಬೆಳ್ಳಿ ಲೋಟವನ್ನು ಕೂಡ ಉಡುಗೊರೆಯಾಗಿ ನೀಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇನ್ನು ನನ್ನ ಮಗಳು ಎಂದರೆ ನನಗೆ ಪಂಚಪ್ರಾಣ, ಮದುವೆಯಾದ 11-12 ವರ್ಷಗಳ ನಂತರ ಮಗಳು ಜನಿಸಿದ್ದಾಳೆ. ಅವಳ ಜಾತಕ ಅತ್ಯಂತ ಯೋಗ್ಯವಾದದ್ದು ಮುಂದಿನ ಭವಿಷ್ಯದಲ್ಲಿ ಆಕೆ ಖಂಡಿತವಾಗಿ ಪ್ರಧಾನಿ ಆಗುತ್ತಾಳೆ ಎಂಬುದಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಆರ್ಯವರ್ಧನ್ ಗುರೂಜಿ ಈ ರೀತಿ ಹೇಳಿದ್ದಾರೆ ಎಂಬುದು ತಿಳಿದಿಲ್ಲ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ಮತ್ತೆ ಬಿಗ್ ಬಾಸ್ ವೇದಿಕೆಯನ್ನು ಆರ್ಯವರ್ಧನ್ ಗುರೂಜಿ ಬಳಸಿಕೊಂಡಿದ್ದಾರೆ ಎಂಬುದಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.