ಹರಳೆಣ್ಣೆಯಿಂದ ನಿಮ್ಮ ದೇಹಕ್ಕೆ ಆಗುವ ಉಪಯೋಗಗಳು ಏನು ಗೊತ್ತೇ?? ತಿಳಿದರೆ ಇಂದೇ ಬಳಸಲು ಆರಂಭಿಸುತ್ತೀರಿ.

ನಮಸ್ಕಾರ ಸ್ನೇಹಿತರೆ ಅಯ್ಯೋ ಹರಳೆಣ್ಣೆ ಮುಖದವನೇ ಅಂತ ಇನ್ನಾರಿಗಾದರೂ ಬೈ ಯ್ಯುವ ಮುನ್ನ ಇನ್ಮುಂದೆ ಒಮ್ಮೆ ಕೊಂಚ ಯೋಚನೆ ಮಾಡಿ. ಏಕೆಂದರೇ ಹರಳೆಣ್ಣೆ ಉಪಯೋಗದ ಆಗರ. ಹರಳೆಣ್ಣೆಯನ್ನ ದಿನನಿತ್ಯ ಬಳಸುವುದರಿಂದ ದೇಹಕ್ಕೆ ಅಪರಿಮಿತವಾದ ಲಾಭಗಳಿವೆ. ಬನ್ನಿ ಅವು ಯಾವುವು ಎಂದು ತಿಳಿಯೋಣ.

ತೂಕ ಕಳೆದುಕೊಳ್ಳುವವರಿಗೆ ಹರಳೆಣ್ಣೆ ಉತ್ತಮ ಎಣ್ಣೆ. ದೇಹಕ್ಕೆ ಬೇಡವಾದ ಕೊಬ್ಬುಗಳನ್ನ ಈ ಎಣ್ಣೆ ಹೊಂದಿರುವುದಿಲ್ಲ. ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಹರಳೆಣ್ಣೆಯನ್ನ ನಿಯಮಿತವಾಗಿ ಉಪಯೋಗಿಸಬಹುದು. ಹೌದು ನೀವು ಹರಳೆಣ್ಣೆ ಬಳಸಿದರೆ ಕ್ರಮೇಣ ಹಗುರವಾಗುತ್ತಿರ.

ಇನ್ನು ಅಷ್ಟೇ ಅಲ್ಲದೇ ಮಲಬದ್ದತೆ, ಜೀರ್ಣಕ್ರಿಯೆಗೂ ಹರಳೆಣ್ಣೆ ಉತ್ತಮ . ಒಂದು ಚಮಚ ಎಣ್ಣೆಯನ್ನ ನೀರಿನಲ್ಲಿ ಹಾಕಿ ಸೇವಿಸಬೇಕು. ಇನ್ನು ಕಣ್ಣುರಿ ಅಥವಾ ದೇಹದಲ್ಲಿನ ಅತಿಯಾದ ಉಷ್ಣಾಂಶದಿಂದ ಕಣ್ಣು ಕೆಂಪಾಗಿದ್ದರೇ, ಕಣ್ಣನ್ನ ತಂಪು ಮಾಡಿಕೊಳ್ಳಲು ಹರಳೆಣ್ಣೆಯ ಆಯಿಲ್ ಮಸಾಜ್ ಮಾಡಿಸಿಕೊಂಡರೇ ತಕ್ಷಣ ಪರಿಹಾರ ಸಿಗುತ್ತದೆ. ಇನ್ನು ಹರಳೆಣ್ಣೆಯನ್ನು ಬಾಡಿ ಮಸಾಜ್ ಗೆ ಮಾಡಿಸಿಕೊಂಡರೇ ಮೈಕೈ ನೋವು ಹಾಗೂ ಕೀಲು ನೋವುಗಳು ಶಮನವಾಗುತ್ತವೆ. ಪ್ರಾಚೀನ ಕಾಲದಿಂದಲೂ ಹರಳೆಣ್ಣೆಯನ್ನು ಈ ಕಾರಣಕ್ಕೆ ಭಾರತೀಯ ಆಯುರ್ವೇದ ಪದ್ದತಿಯಲ್ಲಿ ಬಳಸಲಾಗುತ್ತಿದೆ.

ಸೀಗೆಕಾಯಿ ಪುಡಿಗೆ ಹರಳಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೇ ಚರ್ಮದ ಕಾಂತಿ ಹೆಚ್ಚುತ್ತದೆ. ಒಂದು ಚಮಚ ಹರಳೆಣ್ಣೆ, ಒಂದು ಚಮಚ ನಿಂಬೆರಸ, ಒಂದು ಚಮಚ ಜೇನುತುಪ್ಪ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಖ ಫೇಸ್ ಪ್ಯಾಕ್ ಮಾಡಿಕೊಂಡರೇ ಉತ್ತಮ ರಿಸಲ್ಟ್ ಸಿಗುತ್ತದೆ. ಹರಳೆಣ್ಣೆಯನ್ನು ಬಳಸಿಕೊಂಡು ಮಾಡುವ ಬೇರೆ ಮನೆಮದ್ದುಗಳು ನಿಮಗೆ ತಿಳಿದಿದ್ದರೇ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.