ಜೇನು ಸಾಕಾಣಿಕೆ ಉದ್ಯಮ ಹೇಗೆ ಆರಂಭ ಮಾಡುವುದು?? ಎಷ್ಟರಮಟ್ಟಿಗೆ ಲಾಭ ಸಿಗುತ್ತದೆ?? ಬಂಡವಾಳ ಎಷ್ಟು ಕಡಿಮೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಯಿಂದಾಗಿ ಯಾವುದೇ ಉದ್ಯೋಗಗಳು ಕೂಡ ಈಗ ಗ್ಯಾರಂಟಿ ಎಂದು ಹೇಳುವಂತಿಲ್ಲ. ತಮ್ಮದೇ ಆದಂತಹ ಒಂದು ಸ್ವಂತ ಉದ್ಯಮ ಅಥವಾ ಮನೆ ಕೈಗಾರಿಕೆ ಇದ್ದರೆ ಖಂಡಿತವಾಗಿಯೂ ಕೂಡ ನಾವು ಜೀವನದಲ್ಲಿ ಯಾವುದೇ ಚಿಂತೆ ಗಳಿಲ್ಲದೆ ಜೀವನವನ್ನು ನಡೆಸಬಹುದಾಗಿದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಜೇನು ಸಾಕಾಣಿಕೆಯ ಕುರಿತಂತೆ. ಜೇನುಸಾಕಣೆಗೆ ಏನು ಮಾಡಬೇಕು ಹೇಗೆ ಬಂಡವಾಳ ಹಾಕಬಹುದು ಎಷ್ಟು ಗಳಿಕೆ ಸಿಗಬಹುದು ಎಂಬುದರ ಕುರಿತಂತೆ ವಿವರವಾಗಿ ಹೇಳುತ್ತೇವೆ ತಪ್ಪದೇ ಲೇಖನಿಯನ್ನು ಓದಿ.

ನೀವು ಅಂದುಕೊಂಡ ಹಾಗೆ ಜೇನು ಸಾಕಾಣಿಕೆ ಉದ್ಯಮವನ್ನು ಪ್ರಾರಂಭಿಸಲು ದೊಡ್ಡಮಟ್ಟದ ಬಂಡವಾಳವೇನು ಬೇಕಾಗಿಲ್ಲ. ಹೂದೋಟ ಅಥವಾ ಜೇನು ಮಕರಂದ ಹೀರಲು ಪ್ರಶಸ್ತವಾದ ಸ್ಥಳ ಇದ್ದರೆ ಸಾಕು. ಈ ಉದ್ಯಮಕ್ಕೆ ಕೇವಲ ಪ್ರಕೃತಿಮಾತೆಯ ನೆರವಿದ್ದರೆ ಸಾಕು ಇನ್ನೇನು ಬೇಡ. ಜೇನುಸಾಕಣೆ ಸಣ್ಣ ರೈತರಿಗೆ ಸರ್ಕಾರ ಶೇಕಡ 75% ದಷ್ಟು ಸಬ್ಸಿಡಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ 90% ದವರೆಗೆ ಸಹಾಯಧನ ಸರ್ಕಾರ ನೀಡುತ್ತದೆ. ಕೇವಲ ಜೇನು ಹನಿಯನ್ನು ಮಾತ್ರವಲ್ಲದೆ ಅದರ ಉಪ ವಸ್ತುಗಳ ಆದಂತಹ ಜೇನು ಸಾಕುವ ಪೆಟ್ಟಿಗೆ ಹುಳ ಪರಾಗ ಮೇಣ ನ್ಯಾಚುರಲ್ ವ್ಯಾಸಲಿನ್ ಮಾರಾಟ ಮಾಡಿ ಕೂಡ ಹಣ ಗಳಿಸಬಹುದು. ಗಾರ್ಲಿಕ್ ಹನಿ ಹನಿ ಜಾಮ್ ಅಕೇಶಿಯ ಹನಿ ರಾಯಲ್ ಜಲ್ಲಿ ಹೀಗೆ ಹಲವಾರು ರೀತಿಯ ಜೇನು ತುಪ್ಪಗಳನ್ನು ತಯಾರಿಸಿ ಮಾರಬಹುದು.

honey bee business in kannada | ಜೇನು ಸಾಕಾಣಿಕೆ ಉದ್ಯಮ ಹೇಗೆ ಆರಂಭ ಮಾಡುವುದು?? ಎಷ್ಟರಮಟ್ಟಿಗೆ ಲಾಭ ಸಿಗುತ್ತದೆ?? ಬಂಡವಾಳ ಎಷ್ಟು ಕಡಿಮೆ ಗೊತ್ತೇ??
ಜೇನು ಸಾಕಾಣಿಕೆ ಉದ್ಯಮ ಹೇಗೆ ಆರಂಭ ಮಾಡುವುದು?? ಎಷ್ಟರಮಟ್ಟಿಗೆ ಲಾಭ ಸಿಗುತ್ತದೆ?? ಬಂಡವಾಳ ಎಷ್ಟು ಕಡಿಮೆ ಗೊತ್ತೇ?? 2

ಜೇನುತುಪ್ಪ ಕೇವಲ ಸ್ವಾದಿಷ್ಟವಾಗಿ ಮಾತ್ರವಲ್ಲದೆ ಔಷಧೀಯ ದೃಷ್ಟಿಯಲ್ಲಿ ಕೂಡ ಸ್ಮರಣಶಕ್ತಿ ತಲೆಹೊಟ್ಟಿನ ಸಮಸ್ಯೆ ಸೀತಾ ಸೈನಸ್ ಕೆಮ್ಮು ಚರ್ಮದ ತೇವಾಂಶ ಹಾಗೂ ನಿದ್ರಾಹೀನತೆಗೆ ಮೊದಲನೇ ಪ್ರಾಶಸ್ತ್ಯ ಹೊಂದಿರುವ ಮದ್ದಾಗಿದೆ. ಜೇನು ಸಾಕಾಣಿಕೆ ವ್ಯಾಪಾರದಲ್ಲಿ ಇದನ್ನು ಮುಖ್ಯ ಉದ್ಯಮವಾಗಿ ಮಾಡಿಕೊಂಡವರು ವರ್ಷಕ್ಕೆ ಒಂದರಿಂದ ಎರಡು ಕೋಟಿ ರೂಪಾಯಿ ವರೆಗೆ ಸಂಪಾದಿಸಿದ್ದನ್ನು ನಾವು ನೋಡಿದ್ದೇವೆ. ಕೃಷಿ ಜೊತೆಗೆ ಉಪ ಕಸುಬನ್ನಾಗಿ ಮಾಡಿಕೊಂಡವರು ಕೂಡ ವರ್ಷಕ್ಕೆ 20 ರಿಂದ 30 ಲಕ್ಷ ರೂಪಾಯಿ ದುಡಿಯ ಬಹುದಾಗಿದೆ. ಇಷ್ಟು ಮಾತ್ರವಲ್ಲ ಸಣ್ಣಮಟ್ಟದಲ್ಲಿ ಅಂದರೆ ಐದರಿಂದ ಆರು ಜೇನಿನ ಪೆಟ್ಟಿಗೆಗಳನ್ನು ಹೊಂದಿರುವವರು ಕೂಡ ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ದುಡಿಯುತ್ತಾರೆ. ಹೆಚ್ಚು ಪರಿಶ್ರಮವಿಲ್ಲದೆ ಅಧಿಕ ಗಳಿಕೆ ಮಾಡಲು ಜೇನು ಸಾಕಾಣಿಕೆ ಪ್ರಶಸ್ತವಾದ ಉದ್ಯಮ.

Comments are closed.