ಹುರಳಿಕಾಳು ಕುದುರೆ ಆಹಾರ ಮಾತ್ರವಲ್ಲ, ಮಾನವ ದೇಹಕ್ಕೂ ಅಷ್ಟೇ ಉತ್ತಮ. ಹೀಗೆ ಬಳಸಿ ನೋಡಿ, ಏನಾಗುತ್ತದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದೇ ಆರೋಗ್ಯ ಸಂಪತ್ತು ಅದೊಂದಿದ್ದರೆ ಬೇರೆ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ನಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದರಲ್ಲೀ ಈ ಕರೋನಾದಂಥ ಕಾಲದಲ್ಲಿ ಯಾವ ಸೋಂಕು ಅಂಟದೇ ಇರುವವನೇ ಸುಖಿ! ನಾವು ನಮ್ಮ ಆರೋಗ್ಯಕ್ಕಾಗಿ, ಉತ್ತಮವಾಹಂತಹ ಆಹಾರವನ್ನೇ ಸೇವಿಸಬೇಕು.

ನಾವು ಆರೋಗ್ಯವರ್ಧಕಗಳಾದ ನಾನಾ ವಿಧದ ದವಸ ಧಾನ್ಯಗಳನ್ನು ಆಹಾರವಾಗಿ ಸೇವಿಸುತ್ತೇವೆ. ಒಂದೊಂದು ಧಾನ್ಯಗಳೂ ಒಂದೊಂದು ಆರೋಗ್ಯ ಗುಣಗಳನ್ನು ಹೊಂದಿದೆ. ಇಂದು ಹುರಳಿ ಕಾಳಿನ ಮಹತ್ವವನ್ನು ನೋಡೋಣ. ನಮ್ಮ ಆಹಾರಗಳಲ್ಲಿ ವಾರಕ್ಕೊಮ್ಮೆಯಾದರೂ ಹುರಳಿ ಕಾಳುಗಳನ್ನು ಬಳಸುವುದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹುರಳಿ ಕಾಳಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಹೇರಳವಾಗಿರುತ್ತದೆ.

ಹುರಳಿಕಾಳಿನ ಪ್ರಯೋಜನಗಳು: ಮೊದಲನೆಯದಾಗಿ ಹೊಟ್ಟೆ ಬೊಜ್ಜು ಕರಗಿಸುತ್ತದೆ: ಹುರಳಿ ಕಾಳುಗಳನ್ನು ಸೇವಿಸುವುದರಿಂದ ದೇಹದ ಬೊಜ್ಜು ಕರಗುತ್ತದೆ. ಕಫ, ಶೀತ ನೆಗಡಿಗಳಾಗಿದ್ದರೂ ಕೂಡ ಹುರಳಿ ಕಾಳಿನ ಸೇವನೆ ಇವೆಲ್ಲವನ್ನೂ ಹೋಗಲಾಡಿಸುತ್ತದೆ. ಹಾಗೆಯೇ ಹುರುಳಿ ನರ ದೌರ್ಭಲ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚಿಸಲು ಇದು ಸಹಾಯಕ. ಹಾಗಾಗಿ ಮೊಳಕೆ ಕಟ್ಟಿದ ಹುರಳಿಯನ್ನು ಪದಾರ್ಥಗಳಲ್ಲಿ ಉಪಯೋಗಿಸಿ ಆಗಾಗ ಸೇವಿಸುವುದು ಅತ್ಯಂತ ಒಳ್ಳೆಯದು.

ಕರುಳಿನ ಆರೋಗ್ಯಕ್ಕೆ ರಾಮಬಾಣ: ಕರುಳಿನ ಆರೋಗುಅಕ್ಕೆ ಹುರಳಿ ಅತ್ಯಂತ ಒಳ್ಳೆಯದು. ಹುರಳಿ ಕಾಳುಗಳನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದು ಬೇಯಿಸಿ ತಿಂದರೆ ತುಂಬಾನೇ ಒಳ್ಳೆಯದು. ಇದು ಮೂತ್ರಪಿಂಡದಲ್ಲಿ ಕಲ್ಲು ಕರಗಿಸಲೂ ಸಹ ಒಳ್ಳೆಯ ಔಷಧ. ಹಾಗೆಯೇ ಹುರುಳಿ ಪೇಸ್ಟ್ ತಯಾರಿಸಿ ಸಂದು ನೋವುಗಳಿಗೆ ಹಚ್ಚುತ್ತಾ ಬಂದರೆ ಸಂದಿವಾತ ಕೂಡ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿಗೆ ಬೇಕು ಹುರಳಿ: ಹುರಳಿ ಕಾಳುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ. ಹಾಗಾಗಿ ವಾರದಲ್ಲಿ ಒಮ್ಮೆಯಾದರೂ ಹುರಳಿ ಕಾಳುಗಳನ್ನು ಬೇರೆ ಬೇರೆ ರೀತಿಯಲ್ಲಿ ಸೆವಿಸಬೇಕು. ಅಂದರೆ ಹುರಳಿ ಕಾಳುಗಳನ್ನು ನೆನೆಸಿ ಮೊಳಕೆ ತರಿಸಿ ತಿನ್ನಬಹುದು. ಬೇಯಿಸಿ ಸಾಂಬಾರ್ ಮಾಡಿ ಸೇವಿಸಬಹುದು, ಸೊಪ್ಪುಗಳ ಜೊತೆಗೆ ಸೇರಿಸಿ ಪಲ್ಯ ಮಾಡಿ ತಿನ್ನಬಹುದು. ಒಟ್ಟಿನಲ್ಲಿ ನಿಮಗಿಷ್ಟವಾದ ರೀತಿಯಲ್ಲಿ ಹುರಳಿಯನ್ನು ಸೇವಿಸಿ ಆರೋಗ್ಯವರ್ಧಿಸಿಕೊಳ್ಳಿ.

Comments are closed.