ಪಾಕ್ ವಿರುದ್ದದ ಪಂದ್ಯಕ್ಕೆ ಇರ್ಫಾನ್ ಅಂತಿಮಗೊಳಿಸಿರುವ ಭಾರತ ತಂಡ ಹೇಗಿದೆ ಗೊತ್ತೇ‌?? ಅಚ್ಚರಿಯಾಗಿ ಆಯ್ಕೆಗೊಂಡವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಹೀಗಾಗಿ ಪಾಕಿಸ್ತಾನ ವಿರುದ್ದ ನಡೆಯಲಿರುವ ಪಂದ್ಯ ಹೈವೋಲ್ಟೇಜ್ ಎನಿಸಿದೆ. ಈಗ ಆಡುವ ಹನ್ನೊಂದರ ಬಳಗದ ಬಗ್ಗೆ ಚರ್ಚೆ ತೀವ್ರವಾಗಿದ್ದು, ಪಾಕ್ ವಿರುದ್ದ ಗೆಲ್ಲಲು ಅತ್ಯುತ್ತಮ ಇಲೆವೆನ್ ನ್ನು ಆಡಿಸಬೇಕು ಎಂಬ ಅಭಿಪ್ರಾಯ ಜೋರಾಗಿದೆ. ಈ ಬಗ್ಗೆ ವಿಶೇಷ ಸಂದರ್ಶನಗಳಲ್ಲಿ ಮಾತನಾಡುತ್ತಿರುವ ಭಾರತ ತಂಡದ ಹಿರಿಯ ಕ್ರಿಕೇಟಿಗರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ಭಾರತ ಪಾಕಿಸ್ತಾನದ ವಿರುದ್ದ ಗೆಲ್ಲಲೇಬೇಕಾದರೇ ಈ ಕೆಳಗಿನ ಪ್ಲೇಯಿಂಗ್ ಇಲೆವೆನ್ ರನ್ನು ಆಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬನ್ನಿ ಆ ಇಲೆವೆನ್ ಬಗ್ಗೆ ತಿಳಿಯೋಣ.

ಆರಂಭಿಕರಾಗಿ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾರನ್ನ ಆಡಿಸಿದ್ದಾರೆ. ಇವರಿಬ್ಬರು ಉತ್ತಮ ಆರಂಭ ನೀಡಿದರೇ ಅರ್ಧ ಪಂದ್ಯ ಗೆದ್ದಂತೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಬೇಕು. ನಾಲ್ಕನೇ ಕ್ರಮಾಂಕದಲ್ಲಿ ಸ್ಲಾಗ್ ಓವರ್ ಗಳಿದ್ದರೇ ರಿಷಭ್ ಪಂತ್ ಆಡಬೇಕು. ಐದನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಬೇಕು. ಆಗ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಬಲ ಸಿಗುತ್ತದೆ. ಆರನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರವರನ್ನೇ ಆಡಿಸುವುದು ಸೂಕ್ತ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಆಡಿದರೇ, ಏಂಟನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಅಥವಾ ಶಾರ್ದೂಲ್ ಠಾಕೂರ್ ರವರನ್ನ ಆಡಿಸಬೇಕು. ಒಂಬತ್ತನೇ ಕ್ರಮಾಂಕದಲ್ಲಿ ಮಹಮದ್ ಶಮಿಯವರನ್ನ ಆಡಿಸಬೇಕು. ಹತ್ತನೇ ಕ್ರಮಾಂಕದಲ್ಲಿ ಆರ್.ಅಶ್ವಿನ್ ಬದಲು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯವರನ್ನೇ ಆಡಿಸುವುದು ಸೂಕ್ತ ಎಂಬ ಅಭಿಪ್ರಾಯ ಪಠಾಣ್ ರವರದ್ದಾಗಿದೆ. ಇನ್ನು ಹನ್ನೊಂದನೇ ಕ್ರಮಾಂಕದಲ್ಲಿ ಜಸ್ಪ್ರಿತ್ ಬುಮ್ರಾರವರನ್ನ ಆಡಿಸುವುದು ಸೂಕ್ತ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಇರ್ಫಾನ್ ಪಠಾಣ್ ಆಯ್ಕೆ ಮಾಡಿರುವ ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.