ಕೊನೆಯ ಟೆಸ್ಟ್ ಅನ್ನು ಗೆಲ್ಲುವ ಕನಸಿನಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್. ಏನು ಗೊತ್ತೇ?? ಅಷ್ಟಕ್ಕೂ ನಡೆದದ್ದು ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಸೌತ್ ಆಫ್ರಿಕಾ ವಿರುದ್ಧದ ಟಿ-20 ಪಂದ್ಯವನ್ನು ಮುಗಿಸಿರುವ ಭಾರತೀಯ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲು ಇಂಗ್ಲೆಂಡಿಗೆ ಬಂದಿಳಿದಿದ್ದು ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಲೀಸೆಸ್ಟರ್ ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಟೆಸ್ಟ್ ಪಂದ್ಯ ಕೇವಲ ನಾಲ್ಕು ದಿನಗಳ ಟೆಸ್ಟ್ ಪಂದ್ಯ ವಾಗಿದ್ದು ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಕೊನೆಯ ಟೆಸ್ಟ್ ಪಂದ್ಯವನ್ನು ಆಡುವುದಕ್ಕಿಂತ ಮುಂಚೆ ಒಂದೊಳ್ಳೆ ಅಭ್ಯಾಸ ಪಂದ್ಯ ಎಂದು ಹೇಳಬಹುದಾಗಿದೆ.

ಇನ್ನು ಅಭ್ಯಾಸ ಪಂದ್ಯದ ಮೊದಲ ದಿನವೇ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಹೇಳಬಹುದಾಗಿದೆ. ಮೊದಲ ವಿಕೆಟ್ ಪಾರ್ಟ್ನರ್ಶಿಪ್ ಗೆ ಕೇವಲ 35 ರನ್ನುಗಳನ್ನು ಮಾತ್ರ ಜೋಡಿಸಲು ಸಾಧ್ಯವಾಯಿತು. ರೋಹಿತ್ ಶರ್ಮಾ 25ರನ್ನು ಗಳನ್ನು ಗಳಿಸಿದರೆ ಶುಭಮನ್ ಗಿಲ್ ರವರು ಕೇವಲ 21 ರನ್ನುಗಳನ್ನು ಗಳಿಸುತ್ತಾರೆ. ನಂತರ ಹನುಮ ವಿಹಾರಿ ಕೇವಲ ಮೂರು ರನ್ನುಗಳು ಹಾಗೂ ಮಾಜಿ ಕಪ್ತಾನ ಆಗಿರುವ ವಿರಾಟ್ ಕೊಹ್ಲಿ ರವರು 33 ರನ್ನುಗಳನ್ನು ಬಾರಿಸುತ್ತಾರೆ. ಭರವಸೆಯ ಬ್ಯಾಟ್ಸ್ಮನ್ ಆಗಿದ್ದ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟ್ ಆಗುತ್ತಾರೆ. ಇನ್ನು ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಆಗಿರುವ ರಿಷಬ್ ಪಂತ್ ಜಸ್ಪ್ರೀತ್ ಬುಮ್ರಾ ಚೆತೇಶ್ವರ್ ಪೂಜಾರ ಹಾಗೂ ಪ್ರಸಿದ್ಧ ಕೃಷ್ಣರವರು ಎದುರಾಳಿ ತಂಡದಲ್ಲಿ ಹಾಡುತ್ತಿದ್ದಾರೆ.

India test | ಕೊನೆಯ ಟೆಸ್ಟ್ ಅನ್ನು ಗೆಲ್ಲುವ ಕನಸಿನಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್. ಏನು ಗೊತ್ತೇ?? ಅಷ್ಟಕ್ಕೂ ನಡೆದದ್ದು ಏನು ಗೊತ್ತೇ?
ಕೊನೆಯ ಟೆಸ್ಟ್ ಅನ್ನು ಗೆಲ್ಲುವ ಕನಸಿನಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್. ಏನು ಗೊತ್ತೇ?? ಅಷ್ಟಕ್ಕೂ ನಡೆದದ್ದು ಏನು ಗೊತ್ತೇ? 2

ಭಾರತೀಯ ಕ್ರಿಕೆಟ್ ತಂಡದ ಪತನದಲ್ಲಿ ಇವರ ಪ್ರಯತ್ನವೂ ಕೂಡ ಇದೆ ಎಂದು ಹೇಳಬಹುದು. ಮೊದಲ ಇನ್ನಿಂಗ್ಸ್ ನಲ್ಲಿ ಈಗಾಗಲೇ ಭಾರತ 246 ರನ್ನುಗಳನ್ನು ಗಳಿಸಿತ್ತು ಹಾಗೂ ಇದಕ್ಕೆ ಉತ್ತರವಾಗಿ ಲೀಸಿಸ್ಟರ್ ಕಂಡ 244 ರನ್ನುಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತೀಯ ಕ್ರಿಕೆಟ್ ತಂಡ 203 ರನ್ನುಗಳನ್ನು ಗಳಿಸಿದ್ದು ಒಟ್ಟಾರೆಯಾಗಿ 205 ರನ್ನುಗಳ ಮುನ್ನಡೆಯಲ್ಲಿದೆ. ನಿರೀಕ್ಷಿತ ಪ್ರದರ್ಶನ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಂದ ಬರುತ್ತಿಲ್ಲ ಹೀಗಾಗಿ ಈಗಾಗಲೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಹಾಗೂ ಒಂದು ಅಂತರದಿಂದ ಲೀಡ್ ಕಾಯ್ದುಕೊಂಡಿರುವ ಭಾರತೀಯ ಕ್ರಿಕೆಟ್ ತಂಡ ಕೊನೆಯ ಟೆಸ್ಟ್ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತದೆ ಎಂಬುದು ಚಿಂತಾದಾಯಕವಾಗಿದೆ.

Comments are closed.