ಮನೆಯಲ್ಲಿಯೇ ಕುಳಿತು ಇನ್ಸ್ಟಾಗ್ರಾಮ್ ನಿಂದ ಕೋಟಿ ಕೋಟಿ ಹಣ ಗಳಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಸೋಶಿಯಲ್ ಮೀಡಿಯಾ ಎನ್ನುವುದು ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೆ, ಅಥವಾ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಇದೀಗ ಹಣ ಗಳಿಕೆ ಮಾಡಲೂ ಕೂಡ ಸೋಶಿಯಲ್ ಮೀಡಿಯಾ ಪ್ರಯೋಜನಕಾರಿಯಾಗಿದೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಿಂದ ಕೋಟಿಗಟ್ಟಲೇ ಹಣ ಸಂಪಾದಿಸುವವರಿದ್ದಾರೆ. ಇತ್ತೀಚಿಗೆ ಇನ್ಸ್ಟಾಗ್ರಾಮ್ ನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂದದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಗುರುತಿಸಿಕೊಂಡಿದ್ದರು.

ಇನ್ಸ್ಟಾಗ್ರಾಮ್ ನಲ್ಲಿ ಏನಿದೆ ಎನಿಲ್ಲ. ನಿಮ್ಮ ಎಲ್ಲಾ ಮೆಚ್ಚಿನ ನಟ ನಟಿಯರಿಂದ ಹಿಡಿದು, ಸ್ನೇಹಿತರು, ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಈ ಎಲ್ಲರ ಪ್ರೊಫೈಲ್ ನಲ್ಲಿರುವ ವಿಡಿಯೊ, ಪೋಸ್ಟ್ ಗಳನ್ನು ನೋಡಬಹುದು, ಓದಬಹುದು. ಹಾಗೆಯೇ ನೀವು ಕೂಡ ಬೇಕಾದವರಿಗೆ ರಿಕ್ವೆಸ್ಟ್ ಕಳುಹಿಸುವುದರ ಮೂಲಕ ಇತರರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ನಿಮ್ಮ ನೆಚ್ಚಿನ ಪೋಸ್ಟ್ ಗಳನ್ನು ಹಂಚಿಕೊಳ್ಳಬಹುದು. ನೀವು ಕೂಡ ಪೋಸ್ಟ್ ಮಾಡಬಹುದು. ಹಾಗೆಯೇ ಹಣವನ್ನೂ ಮಾಡಬಹುದು!
ಇನ್ಸ್ಟಾಗ್ರಾಮ್ ನಲ್ಲಿ ಹಣ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಇದರಲ್ಲಿ ಸರಿಯಾಗಿ ಯೋಜನೆ ರೂಪಿಸಿ, ಸರಿಯಾಗಿ ಅರ್ಥ ಮಾಡಿಕೊಂಡು ಬಳಸಲು ಶುರು ಮಾಡಿದರೆ ಉತ್ತಮ ಹಣವನ್ನು ಗಳಿಸಬಹುದು. ಇದಕ್ಕಾಗಿ ನೀವು ಇನ್ಸ್ಟಾದಲ್ಲಿ ಹೆಚ್ಚಿನ ಅನುಯಾಯಿಗಳು ಅಂದರೆ ಫಾಲೋವರ್ಸ್ ಗಳನ್ನು ಹೊಂದಿರುವುದು ತುಂಬಾನೇ ಮುಖ್ಯ. ಹೀಗೆ ಹೆಚ್ಚಿನ ಫಾಲೋವರ್ಸ್ ನ್ನು ನೀವು ಹೊಂದಿದ್ದರೆ ನಿಮಗೆ ಬ್ರ್ಯಾಂಡ್ ಪಾಲುದಾರಿಕೆ ಸಿಗುತ್ತದೆ. ಹಾಗಾಗಿ ಹೆಚ್ಚಿನ ಫಾಲೋವರ್ಸ್ ಗಳನ್ನು ಮಾಡಿಕೊಳ್ಳಬೇಕು. ಇನ್ನು ಫಾಲೋವರ್ಸ್ ಗಳು ಹೆಚ್ಚಲು ನೀವು ಹಂಚಿಕೊಳ್ಳುವ ಪೋಸ್ಟ್ ಗಳೂ ಕೂಡ ಅಷ್ಟೇ ಉತ್ತಮವಾಗಿರಬೇಕು.

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಪೋಸ್ಟ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಜನರಿಗೆ ಅದು ತಲುಪುವಂತೆ ಮಾಡುವುದು ಅತೀ ಮುಖ್ಯ. ನಿಮ್ಮ ಪೋಸ್ಟ್ ಗೆ ಅನುಗುಣವಾಗಿ ಬ್ರಾಂಡ್ ಗಳನ್ನು ಹ್ಯಾಶ್ ಟ್ಯಾಗ್ ನಲ್ಲಿ ಬಳಸುತ್ತಾ ಬರಬೇಕು. ನಿಮ್ಮ ವಿಡಿಯೋ ಮೂಲಕ ಜಾಹಿರಾತು ನೀಡಿದರೆ ಅದರ ಮೂಲಕ ಹಣ ಮಾಡಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳು ಕೆಲವೇ ಸೆಕೆಂಡುಗಳಷ್ಟು ಅವಧಿಯನ್ನು ಹೊಂದಿದ್ದರೂ ಐಜಿಟಿವಿ ವೀಡಿಯೋಗಳು ದೀರ್ಘ ಅವಧಿಯನ್ನು ಹೊಂದಿರುತ್ತವೆ. ಇವುಗಳನ್ನು ಜಾಹಿರಾತು ಪ್ಲಾಟ್ ಫಾರ್ಮ್ ಆಗಿ ಬಳಸಿಕೊಳ್ಳಬಹುದು.

ಇನ್ನು ಇನ್ಸ್ಟಾ ದಲ್ಲಿ ವ್ಯಾಪಾರವನ್ನೂ ಮಾಡಬಹುದು. ಅಂದರೆ ನಿಮ್ಮದೇ ಆದ ಪೋಸ್ಟ್ ಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಜೊತೆಗೆ ನಿಮ್ಮ ಬ್ರಾಂಡ್ ಬಗ್ಗೆ ಹೇಳುವುದರ ಮೂಲಕ ಬ್ರಾಂಡ್ ಫೇಮಸ್ ಮಾಡಿಕೊಳ್ಳಬಹುದು. ಇನ್ನು ಇತರ ಬ್ರಾಂಡ್ ಗಳಿಗೆ ಸಂಬಂಧಿಸಿದ ಫೋಟೊಗಳನ್ನು ಶೇರ್ ಮಾಡಿಕೊಂಡು ಅದರಿಂದ ಜನ ಕರೀದಿ ಮಾಡಿದರೆ ನಿಮಗೆ ಕಮೀಶನ್ ನೀಡಲಾಗುತ್ತದೆ. ಇನ್ನು ಇನ್ಸ್ಟಾಗ್ರಾಮ್ ರ್‍ಇಲ್ ಗಳ ಮೂಲಕವೂ ಗಳಿಗೆ ಮಾಡುವ ಅವಕಾಶ ನೀಡಿದೆ. ರೀಲ್ ಗಳಲ್ಲಿ ವಿತ್ತೀಯ ಬೋನಸ್ ಗಳೂ ಕೂಡ ಶೀರ್ಘದಲ್ಲಿ ಬಿಡುಗಡೆಯಾಗಲಿದೆ. ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಹಣ ಗಳಿಕೆ ಮಾಡಬಹುದಾಗಿದೆ.

Comments are closed.