ಜಡೇಜಾ ನಿವೃತ್ತಿಗೆ ಆಲೋಚನೆ ನಡೆಸುತ್ತಿರುವಾಗ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಬ್ಬ ಯುವ ಆಟಗಾರ ನಿವೃತ್ತಿ ಸಾಧ್ಯತೆ. ಯಾರು ಗೊತ್ತೇ?? ಭವಿಷ್ಯವಿದೆ ಆತುರ ಬೇಡ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಟೆಸ್ಟ್ ಕ್ರಿಕೇಟ್ ಗೂ ಭಾರತ ತಂಡಕ್ಕೂ ಅವಿನಾಭಾವ ಸಂಭಂಧ. ಟೆಸ್ಟ್ ಕ್ರಿಕೇಟ್ ಕ್ರಿಕೇಟಿಗರ ತಾಳ್ಮೆಯನ್ನ ಪರೀಕ್ಷಿಸುತ್ತದೆ. ಯಶಸ್ವಿ ಕ್ರಿಕೇಟಿಗರಾಗಬೇಕೆಂದರೇ, ಟೆಸ್ಟ್ ಕ್ರಿಕೇಟ್ ನಲ್ಲಿ ಹೆಚ್ಚು ಆಟವಾಡಬೇಕು. ಕ್ರಿಕೇಟಿಗನ ಸಂಪೂರ್ಣ ದೈಹಿಕ ಸಾಮರ್ಥ್ಯ ಅನಾವರಣಗೊಳ್ಳುವುದು ಟೆಸ್ಟ್ ಕ್ರಿಕೇಟ್ ನಲ್ಲೇ. ಐದು ದಿನಗಳ ಪಂದ್ಯ ಹಲವು ರೋಚಕ ತಿರುವುಗಳಿಗೆ ಸಾಕ್ಷಿಯಾಗಿರುತ್ತದೆ. ಈಗ ಭಾರತ ಟೆಸ್ಟ್ ಕ್ರಿಕೇಟ್ ನಲ್ಲಿ ನಂ 1 ಆಗಿದ್ದರೂ, ಭಾರತೀಯ ಆಟಗಾರನೊಬ್ಬ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಲು ಯೋಚಿಸುತ್ತಿದ್ದಾರೆ.

ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ, ರನ್ ಬರ ಎದುರುಸುತ್ತಿರುವ ಚೇತೇಶ್ವರ ಪೂಜಾರ, ಸ್ಥಿರ ಫಾರ್ಮ್ ಇಲ್ಲದಿರುವ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳುತ್ತಿರುವ ಆಟಗಾರ ಎಂದು ನೀವು ಊಹಿಸಿದರೇ, ನಿಮ್ಮ ಊಹೆ ಸಂಪೂರ್ಣ ತಪ್ಪು. ಆ ಮೂವರಿಗೂ ಸದ್ಯ ಆ ಯೋಚನೆ ಇಲ್ಲದಿರಬಹುದು. ಆದರೇ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಲು ಚಿಂತಿಸಿರುವ ಆಟಗಾರ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಹೌದು ತಂಡಕ್ಕೆ ಆಲ್ ರೌಂಡರ್ ಎಂದು ಬಂದ ಹಾರ್ದಿಕ್ ಮೊದಮೊದಲು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು.

jadeja ind test cricket | ಜಡೇಜಾ ನಿವೃತ್ತಿಗೆ ಆಲೋಚನೆ ನಡೆಸುತ್ತಿರುವಾಗ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಬ್ಬ ಯುವ ಆಟಗಾರ ನಿವೃತ್ತಿ ಸಾಧ್ಯತೆ. ಯಾರು ಗೊತ್ತೇ?? ಭವಿಷ್ಯವಿದೆ ಆತುರ ಬೇಡ ಎಂದ ನೆಟ್ಟಿಗರು.
ಜಡೇಜಾ ನಿವೃತ್ತಿಗೆ ಆಲೋಚನೆ ನಡೆಸುತ್ತಿರುವಾಗ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಬ್ಬ ಯುವ ಆಟಗಾರ ನಿವೃತ್ತಿ ಸಾಧ್ಯತೆ. ಯಾರು ಗೊತ್ತೇ?? ಭವಿಷ್ಯವಿದೆ ಆತುರ ಬೇಡ ಎಂದ ನೆಟ್ಟಿಗರು. 2

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಾ, ಕ್ರಿಕೇಟ್ ನ ಎಲ್ಲಾ ಮಾದರಿಗಳಲ್ಲಿಯೂ ಭಾರತ ತಂಡದ ಖಾಯಂ ಸದಸ್ಯರಾದರು. ಆದರೇ ಇತ್ತಿಚಿನ ದಿನಗಳಲ್ಲಿ ಪಾಂಡ್ಯ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇನ್ನು ಬೆನ್ನು ನೋವಿನಿಂದ ಬೌಲಿಂಗ್ ಸಹ ಮಾಡುತ್ತಿಲ್ಲ. ಹೀಗಾಗಿ ಹಾರ್ದಿಕ್ ರನ್ನ ಭಾರತ ತಂಡದಿಂದ ಕೈ ಬಿಡಲಾಗಿತ್ತು. ರಣಜಿ ಕ್ರಿಕೇಟ್ ಆಡಿ ಫಾರ್ಮ್ ಖಚಿತಪಡಿಸಿಕೊಳ್ಳಿ ಎಂದು ಸಹ ಹೇಳಲಾಗಿತ್ತು. ಆದರೇ ಹೆಚ್ಚು ಕ್ರಿಕೇಟ್ ಆಡುವ ಉದ್ದೇಶದಿಂದ ಹಾರ್ದಿಕ್ ಪಾಂಡ್ಯ, ಮುಂಬರುವ ದಿನಗಳಲ್ಲಿ ಟೆಸ್ಟ್ ಕ್ರಿಕೇಟ್ ನಿಂದ ದೂರ ಉಳಿಯಲಿದ್ದಾರೆ. ರಣಜಿಯಲ್ಲಿಯೂ ಸಹ ಕೇವಲ ವಿಜಯ್ ಹಜಾರೆ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಹೀಗಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲಿ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳುವ ಎಲ್ಲಾ ಸಾಧ್ಯತೆಗಳು ಇವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.