ಒಂದಲ್ಲ ಎರಡಲ್ಲ 12 ತಿಂಗಳು ಇದ್ದರೂ ಕೂಡ ಜನವರಿಯೇ ವರ್ಷದ ಮೊದಲ ತಿಂಗಳಾಗಿದ್ದು ಹೇಗೆ ಗೊತ್ತಾ?? ಅಸಲಿ ಕಾರಣ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಹೊಸ ವರ್ಷ ಆರಂಭವಾಗಿಯೇ ಬಿಟ್ಟಿದೆ. ಜನವರಿ ಒಂದನೇ ತಾರೀಕು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಹರುಷ, ಅದೇನೋ ಹೊಸ ಹುರುಪು. ಕಳೆದ ವರ್ಷದ ಸಂಕಷ್ಟಗಳು ಮತ್ತೆ ಬಾರದೇ ಇರಲಿ, ಹೊಸ ವರ್ಷಕ್ಕೆ ಎಲ್ಲವೂ ಶುಭವಾಗಲಿ ಎಂದೇ ಪ್ರಾರ್ಥಿಸಿಕೊಳ್ಳುತ್ತಾರೆ. ಅದೆಲ್ಲ ಸರಿ, ಆದರೆ ವರ್ಷದ ಮೊದಲ ತಿಂಗಳು ಜನವರಿಯೇ ಏಕೆ? ಜನವರಿ ಹೇಗೆ ಶುರುವಾಯಿತು ಎಂಬುದರ ಬಗ್ಗೆ ಎಷ್ಟು ಜನರಿಗೆ ಗೊತ್ತು? ಇಲ್ಲಿದೆ ಕೆಲವು ಆಸಕ್ತಿದಾಯಿಕ ವಿಚಾರಗಳು.

ಜನವರಿ ಅನ್ನುವುದು ರೋಮನ್ ಕ್ಯಾಲೆಂಡರ್ ನ ತಿಂಗಳು. ಇದು ಶುರುವಾಗುವುದರ ಹಿನ್ನೆಲೆಯೂ ಆಸಕ್ತಿದಾಯಕವಾಗಿದೆ. ಜನವರಿ ತಿಂಗಳೇ ಮೊದಲಿನಿಂದ ಹೊಸ ವರ್ಷದ ಆರಂಭವಾಗಿರಲಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ದಿನ ಹೊಸ ವರ್ಷವನ್ನಾಗಿ ಆಚರಿಸಲಾಗುತ್ತಿತ್ತು. ಕೆಲವರು ಮಾರ್ಚ್ 25 ರಂದು ಆಚರಿಸಿದ್ರೆ ಮತ್ತೆ ಕೆಲವರು ಡಿಸೆಂಬರ್ 25 ರಂದು ಹೊಸ ವರ್ಷವನ್ನು ಆಚರಿಸುತ್ತಿದ್ದರು. ಹಲವು ವರ್ಷಗಳ ಬಳಿಕ ಜನವರಿ ಒಂದರಂದು ಹೊಸ ವರ್ಷಾರಚಣೆ ಶುರುವಾಯ್ತು. ಇದು ಮೊದಲ ಬಾರಿಗೆ ಆರಂಭವಾಗಿದ್ದು ರೋಮ್ ನಲ್ಲಿ. ರಾಜ ನುಮಾ ಪೊಂಪಿಲಸ್ ರೋಮನ್ ಕ್ಯಾಲೆಂಡರ್ ನ್ನು ಬದಲಾಯಿಸುತ್ತಾನೆ. ಬದಲಾದ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ ಮೊದಲ ದಿನದಂದು ಆಚರಿಸಲು ಶುರುಮಾಡಲಾಯಿತು.

2022 | ಒಂದಲ್ಲ ಎರಡಲ್ಲ 12 ತಿಂಗಳು ಇದ್ದರೂ ಕೂಡ ಜನವರಿಯೇ ವರ್ಷದ ಮೊದಲ ತಿಂಗಳಾಗಿದ್ದು ಹೇಗೆ ಗೊತ್ತಾ?? ಅಸಲಿ ಕಾರಣ ಇಲ್ಲಿದೆ ನೋಡಿ.
ಒಂದಲ್ಲ ಎರಡಲ್ಲ 12 ತಿಂಗಳು ಇದ್ದರೂ ಕೂಡ ಜನವರಿಯೇ ವರ್ಷದ ಮೊದಲ ತಿಂಗಳಾಗಿದ್ದು ಹೇಗೆ ಗೊತ್ತಾ?? ಅಸಲಿ ಕಾರಣ ಇಲ್ಲಿದೆ ನೋಡಿ. 2

ಇನ್ನು ಜನವರಿ ಎಂಬ ಹೆಸರು ಬಂದಿದ್ದು ಹೇಗೆ ಎಂದರೆ, ರೋಮ್ ನ ದೇವರು ಜಾನಸ್. ಕೆಲವು ವರ್ಷಗಳ ನಂತರ ಜಾನಸ್ ಹೆಸರೇ ಮುಂದೆ ಜನವರಿಯಾಯಿತು. ಇನ್ನು ಶತಮಾನಗಳ ಹಿಂದೆ ವರ್ಷಕ್ಕೆ ಇದ್ದಿದ್ದು ಹತ್ತೇ ತಿಂಗಳು. ನಂತರ ಹನ್ನೆರಡು ತಿಂಗಳನ್ನಾಗಿ ಮಾಡಲಾಯಿರು. ಅಂದು ಮಂಗಳ ಎಂದು ಯುದ್ಧ ದೇವರ ಹೆಸರನ್ನು ಇಂದು ಮಾರ್ಚ್ ಎನ್ನಲಾಗುತ್ತದೆ. ಇನ್ನು ವರ್ಷಕ್ಕೆ ಈ ಮೊದಲು ಎಷ್ಟು ದಿನಗಳಿತ್ತು ಗೊತ್ತಾ? ೩೧೦ ದಿನಗಳು ಮಾತ್ರ. ಆದರೆ ರೋಮ್ ನ ಜೂಲಿಯಸ್ ಸೀಸರ್ ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು ಆರು ಗಂಟೆಗಳಲ್ಲಿ ಸುತ್ತುತ್ತದೆ ಎಂಬುದನ್ನು ಕಲಿತು ಕ್ಯಾಲೆಂಡರ್ ನಲ್ಲಿ ೧೨ ತಿಂಗಳುಗಳು ಮತ್ತು ೩೬೫ ದಿನಗಳನ್ನು ಸೇರಿಸಿದರು. ಆದರೆ ಭಾರತದಲ್ಲಿ ಜನವರಿ ಒಂದು ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ವರ್ಷದ ಆರಂಭ ಅಷ್ಟೇ. ಹೊಸ ವರ್ಷವನ್ನು ಯುಗಾದಿಯಂದು ಆಚರಿಸಲಾಗುತ್ತದೆ.

Comments are closed.