ಐಪಿಎಲ್ ನಲ್ಲಿ ಕೋಟಿ ಕೋಟಿ ಬಾಚಿದರು ಕೂಡ ಟೀಮ್ ಇಂಡಿಯಾದಲ್ಲೂ ಸ್ಥಾನ ಸಿಗುತ್ತಿಲ್ಲ. ರಂಜಿಗೂ ಇಲ್ಲ ಎಂದು ನೋವು ತೋಡಿಕೊಂಡ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಕ್ರಿಕೇಟ್ ಆಡುವ ಪ್ರತಿಯೊಬ್ಬ ಆಟಗಾರನಿಗೂ ಟೀಮ್ ಇಂಡಿಯಾದಲ್ಲಿ ಆಡುವ ಕನಸು ಇರುತ್ತದೆ. ಅದೃಷ್ಠವಷಾತ್ ಕೆಲವೊಮ್ಮೆ ಅವಕಾಶ ಸಿಕ್ಕರೂ ಆ ಅವಕಾಶವನ್ನ ಎರಡು ಕೈಗಳಿಂದ ಬಾಚಿಕೊಳ್ಳಲು ಆಟಗಾರರು ವಿಫಲರಾಗುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೇ ಸೌರಾಷ್ಟ್ರದ ಏಡಗೈ ವೇಗಿ ಜಯದೇವ್ ಉನದ್ಕತ್. ಅಂಡರ್ 19 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಉನದ್ಕತ್ 2009 ರಲ್ಲಿ ಒಂದು ರಣಜಿ ಪಂದ್ಯ ಆಡದೇ ನೇರವಾಗಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆ ನಂತರ ನೀರಸ ಪ್ರದರ್ಶನದಿಂದ ತಂಡಕ್ಕೆ ಮರಳಲಿಲ್ಲ.

ಈಗ ಈ ಬಗ್ಗೆ ಬರೆದುಕೊಂಡಿರುವ ಜೈದೇವ್ ಉನದ್ಕತ್ ಕೆಂಪು ಚೆಂಡೇ, ನಿನ್ನನ್ನ ಮತ್ತೆ ನಾನು ಯಾವಾಗ ಮುಟ್ಟುವುದು ಎಂದು ಬರೆದು ಕೊಂಡಿದ್ದಾರೆ. ಈ ಮೂಲಕ ಇತ್ತ ರಾಷ್ಟ್ರೀಯ ತಂಡಕ್ಕೆ ಮರಳಲು ಆಗುತ್ತಿಲ್ಲ, ಇದರ ಜೊತೆ ಕೋರೋನಾ ಕಾರಣ ಬಿಸಿಸಿಐ ಎಲ್ಲಾ ರಣಜಿ ಪಂದ್ಯಗಳನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದೆ‌. ಹೀಗಾಗಿ ಈ ಭಾರಿ ರಣಜಿ ಋತು ಆರಂಭವಾಗುವುದೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.

ganguly rr | ಐಪಿಎಲ್ ನಲ್ಲಿ ಕೋಟಿ ಕೋಟಿ ಬಾಚಿದರು ಕೂಡ ಟೀಮ್ ಇಂಡಿಯಾದಲ್ಲೂ ಸ್ಥಾನ ಸಿಗುತ್ತಿಲ್ಲ. ರಂಜಿಗೂ ಇಲ್ಲ ಎಂದು ನೋವು ತೋಡಿಕೊಂಡ ಆಟಗಾರ ಯಾರು ಗೊತ್ತೇ??
ಐಪಿಎಲ್ ನಲ್ಲಿ ಕೋಟಿ ಕೋಟಿ ಬಾಚಿದರು ಕೂಡ ಟೀಮ್ ಇಂಡಿಯಾದಲ್ಲೂ ಸ್ಥಾನ ಸಿಗುತ್ತಿಲ್ಲ. ರಂಜಿಗೂ ಇಲ್ಲ ಎಂದು ನೋವು ತೋಡಿಕೊಂಡ ಆಟಗಾರ ಯಾರು ಗೊತ್ತೇ?? 2

ಹಾಗಾಗಿಯೇ ಸೌರಾಷ್ಟ್ರ ವೇಗಿ ತಮ್ಮ ಅಸಾಹಯಕತೆಯನ್ನ ಹೇಳಿಕೊಂಡಿದ್ದಾರೆ. ಕಳೆದ ಭಾರಿ ಬಲಿಷ್ಠ ಪಶ್ಚಿಮ ಬಂಗಾಳವನ್ನ ಮಣಿಸಿ ಸೌರಾಷ್ಟ್ರ ತಂಡ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತ್ತು. ಚೇತೇಶ್ವರ ಪೂಜಾರ ನಂತರ ಜೈದೇವ್ ಉನದ್ಕತ್ ಸೌರಾಷ್ಟ್ರ ತಂಡದಿಂದ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರರಾಗಿದ್ದರು. ಐಪಿಎಲ್ ನಲ್ಲಿಯೂ ಸಹ ರಾಜಸ್ಥಾನ ರಾಯಲ್ಸ್ ಪರ ಆಡಿರುವ ಉನದ್ಕತ್, ಈ ಭಾರಿ ಹರಾಜಿನಲ್ಲಿ ಯಾವ ತಂಡದ ಪಾಲಾಗುತ್ತಾರೋ ಎಂಬುದನ್ನ ಕಾದು ನೋಡಬೇಕಿದೆ. ಒಂದು ಭಾರಿ ಆರ್ಸಿಬಿ ತಂಡವನ್ನು ಸಹ ಪ್ರತಿನಿಧಿಸಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.