ನಿಮ್ಮ ಜೇಬಿನಿಂದ ಇದ್ದಕ್ಕಿದ್ದ ಹಾಗೆ ಏನೋ ಬೇರೆ ಮುಟ್ಟಲು ಹೋದಾಗ ದುಡ್ಡು ಕೆಳಗಡೆ ಬಿದ್ದರೆ ಅರ್ಥವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವೆಲ್ಲ ದುಡಿಯೋದು ಜೀವನದಲ್ಲಿ ಉತ್ತಮ ಮಟ್ಟದ ಹಣವನ್ನು ಸಂಪಾದಿಸುವುದಕ್ಕಾಗಿ. ಉತ್ತಮ ಮಟ್ಟದ ಹಣ ಸಂಪಾದನೆ ಎಂದರೆ ಉತ್ತಮಮಟ್ಟದ ಜೀವನ ಕ್ರಮ ಎಂದರ್ಥ. ಈ ಕಾಲದಲ್ಲಿ ದುಡ್ಡಿಲ್ಲದಿದ್ದರೆ ಏನೂ ಆಗುವುದಿಲ್ಲ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಬೇರೆಯಲ್ಲ ಮೌಲ್ಯಗಳಿಗಿಂತ ಹಣಕ್ಕೆ ಇರುವ ಮೌಲ್ಯ ತುಂಬಾನೇ ದೊಡ್ಡದು ಎಂಬುದನ್ನು ನಾವು ಈಗಾಗಲೇ ಅರ್ಥಮಾಡಿಕೊಂಡಿದ್ದೇವೆ. ಕೆಲವಾರು ಬಾರಿ ನಾವು ಕಿಸೆಗೆ ಕೈಹಾಕಿ ದುಡ್ಡು ತೆಗೆಯುವ ಸಂದರ್ಭದಲ್ಲಿ ಚಿಲ್ಲರೆ ಹಾಗೂ ನೋಟುಗಳು ತಮಗರಿವಿಲ್ಲದಂತೆ ಕೆಳಗಡೆ ಬೀಳುತ್ತದೆ.

ಇದು ಕೆಲವಾರು ಬಾರಿ ನಡೆದು ನಮಗೆ ಕಿರಿಕಿರಿ ಎಂದೆನಿಸುತ್ತದೆ. ಇದು ಕೇವಲ ನಮಗೆ ನಡೆದಾಗ ಮಾತ್ರವಲ್ಲ ಬೇರೆಯವರಿಗೆ ನಡೆದಾಗಲೂ ಕೂಡ ದುಡ್ಡಿನ ಕುರಿತಂತೆ ನಿನಗೆ ಜಾಗೃತಿ ಇಲ್ಲವೇ ಎಂಬುದಾಗಿ ಗದರಿಸುತ್ತೇವೆ. ದುಡ್ಡನ್ನು ನಾವು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ನಮ್ಮನ್ನು ದುಡ್ಡು ಮುಂದಿನ ದಿನಗಳಲ್ಲಿ ಎಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತದೆ ಎಂಬುದಾಗಿ ಭರವಸೆ ಇರುತ್ತದೆ. ಹೀಗಾಗಿ ದುಡ್ಡು ಕಿಸೆಯಿಂದ ಕೆಳಗೆ ಬಿದ್ದಾಗ ನಮಗೆ ಬೇಸರವಾಗುವುದು ಸರ್ವೇಸಾಮಾನ್ಯ. ಆದರೆ ಇಂದು ನಾವು ಹೇಳಹೊರಟಿರುವ ವಿಷಯ ನಿಮಗೆ ದುಡ್ಡು ಕಿಸೆಯಿಂದ ಕೈಜಾರಿ ಬಿದ್ದಾಗ ದುಃಖಕ್ಕಿಂತ ಹೆಚ್ಚಾಗಿ ಸಂತೋಷವಾಗುವುದು ಸುಳ್ಳಲ್ಲ. ಕೆಲವರ ಮಟ್ಟಿಗೆ ಕಿಸೆಯಿಂದ ದುಡ್ಡು ಕೆಳಗೆ ಬೀಳುವುದು ಶುಭ ಸೂಚಕವಲ್ಲ ಎಂಬುದು ಆಗಿತ್ತು. ಆದರೆ ವಿಷಯ ಬೇರೇನೇ ಇದೆ ಸ್ನೇಹಿತರೆ.

ಹೌದು ಸ್ನೇಹಿತರೆ ನಿಜವಾಗಿ ಹೇಳಬೇಕೆಂದರೆ ನಾವು ಕಿಸೆಯಿಂದ ದುಡ್ಡು ತೆಗೆಯುವಾಗ ಅದು ಆಕಸ್ಮಿಕವಾಗಿ ಬಿದ್ದರೆ ಅದು ಶುಭ ಸೂಚಕ ವಂತೆ. ಆ ತರಹ ನಮಗರಿವಿಲ್ಲದಂತೆ ದುಡ್ಡು ಕೆಳಗಡೆ ಬಿದ್ದರೆ ನಮಗೆ ಗೊತ್ತಿಲ್ಲದಂತೆ ಅನಿರೀಕ್ಷಿತ ಮೂಲಗಳಿಂದ ನಾವು ಅಂದುಕೊಂಡಿದ್ದಕ್ಕಿಂತಲೂ ಅದೆಷ್ಟು ಮಟ್ಟ ಹೆಚ್ಚಿಗೆ ದುಡ್ಡು ನಮಗೆ ಬಂದು ಸೇರುತ್ತದೆಯಂತೆ. ಮಾತ್ರವಲ್ಲದೆ ನಾವು ಬೇಕು ಅಂತಾನೆ ಕೈಯಿಂದ ದುಡ್ಡನ್ನು ಬೀಳೆಸಿಕೊಂಡರೆ ನಮಗೆ ಯಾವುದೇ ಶುಭಸೂಚಕ ವಾಗಿರುವುದಿಲ್ಲ ಅದು ತನ್ನಿಂತಾನಾಗಿ ಬೀಳಬೇಕಂತೆ. ಆಗಲೇ ನಮಗೆ ಶುಭ ಸೂಚಕದ ಫಲ ಸಿಗುತ್ತದೆ ಅಂತೆ. ಇನ್ನು ಮುಂದೆ ನಿಮ್ಮ ಕೈತಪ್ಪಿ ದುಡ್ಡು ಇದ್ದರೆ ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ಈ ವಿಚಾರಕ್ಕೆ ನಿಮಗೆ ತಿಳಿದಿರಬಹುದು.

Comments are closed.