ತೂಕ ಇಳಿಸಿಕೊಳ್ಳಲ್ಲು ಬಯಸಿದರೆ ಜೀರಿಗೆ ನೀರು ಸೂಕ್ತವೇ?? ಯಾವ ರೀತಿ ಮಾಡಿದರೆ ಪ್ರಯೋಜನ ಸಿಗುತ್ತದೆ ಗೊತ್ತೇ?? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್.

ನಮಸ್ಕಾರ ಸ್ನೇಹಿತರೇ, ದೇಹದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬೇಕು ಎನ್ನುವುದು ಸಾಮಾನ್ಯವಾಗಿ ಅಧಿಕ ತೂಕ ಇರುವ ಎಲ್ಲರ ಮಹದಾಸೆ. ಅದರಲ್ಲೂ ಯಾವುದೇ ವ್ಯಾಯಾಮ ಮಾಡದೇ, ಔಷಧಿ ತೆಗೆದುಕೊಳ್ಳದೇ ಹೇಗೆ ತೂಕ ಇಳಿಸಿಕೊಳ್ಳುವುದು ಎಂದೇ ಎಲ್ಲರೂ ಯೋಚಿಸುತ್ತಾರೆ ಅದಕ್ಕೊಂದು ಮಾರ್ಗ ಇಲ್ಲಿದೆ!

jeerige | ತೂಕ ಇಳಿಸಿಕೊಳ್ಳಲ್ಲು ಬಯಸಿದರೆ ಜೀರಿಗೆ ನೀರು ಸೂಕ್ತವೇ?? ಯಾವ ರೀತಿ ಮಾಡಿದರೆ ಪ್ರಯೋಜನ ಸಿಗುತ್ತದೆ ಗೊತ್ತೇ?? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್.
ತೂಕ ಇಳಿಸಿಕೊಳ್ಳಲ್ಲು ಬಯಸಿದರೆ ಜೀರಿಗೆ ನೀರು ಸೂಕ್ತವೇ?? ಯಾವ ರೀತಿ ಮಾಡಿದರೆ ಪ್ರಯೋಜನ ಸಿಗುತ್ತದೆ ಗೊತ್ತೇ?? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್. 2

ಸ್ನೇಹಿತರೆ, ದೇಹ ಭಾರವಾದಷ್ಟು ದೇಹದಲ್ಲಿ ಖಾಯಿಲೆಗಳೂ ಕೂಡ ಆವರಿಸಿಕೊಂಡು ಬಿಡುತ್ತವೆ. ಅದರಲ್ಲಿ ಮುಖ್ಯವಾಗಿ ಬಿಪಿ, ಮಧುಮೇಹ, ಹೃದಯದ ಖಾಯಿಲೆ ಹೀಗೆ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಇದಕ್ಕೆಲ್ಲಾ ಒಂದು ಅತ್ಯುತ್ತಮ ಪರಿಹಾರ ಎಂದ್ರೆ ಅದು ಜೀರಿಗೆ ನೀರಿನ ಸೇವನೆ. ಹೌದು, ಜೀರಿಗೆ ನೀರು ದೇಹದ ತೂಕ ಇಳಿಸುವುದು ಮಾತ್ರವಲ್ಲದೇ, ದೇಹದ ಹಲವು ಖಾಯಿಲೆಗಳನ್ನು ನಿಯಂತ್ರಿಸುತ್ತದೆ. ದೇಹದ ಜೀರ್ಣಶಕ್ತಿ ಸುಧಾರಿಸಲು, ರಕ್ತದೊತ್ತಡ ಕಡಿಮೆ ಮಾಡಲು ಕೂಡ ಸಹಾಯಕ.

ಹಾಗಾದರೆ ಜೀರಿಗೆ ನೀರನ್ನು ಸೇವಿಸುವುದು ಹೇಗೆ? ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುದಿಸಿ, ತಣ್ಣಗೆ ಮಾಡಿಕೊಂಡು ಕುಡಿಯಿರಿ. ಒಂದು ವೇಳೆ ಕುದಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಈ ನೀರನ್ನು ಹಾಗೆಯೇ ಸೇವಿಸಬಹುದು ಯಾವುದೇ ಸಮಸ್ಯೆಯಿಲ್ಲ. ಜೀರಿಗೆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹಕ್ಕೂ ಒಳ್ಳೆಯದು, ತೂಕವೂ ಕಡಿಮೆಯಾಗುತ್ತದೆ.

ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು ಅಥವಾ ನೀವು ಆಹಾರವನ್ನು ಸೇವಿಸಿದ ನಂತರವೂ ಕೂಡ ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ನೀವು ನಿಮ್ಮ ದಿನಚರಿಯಲ್ಲಿ ಜೀರಿಗೆ ನೀರನ್ನು ಕುಡಿಯುವುದನ್ನೂ ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಜೀರಿಗೆ ನೀರನ್ನು ದಿನದಲ್ಲಿ ಎಷ್ಟು ಬಾರಿ ಬೇಕಾದರೂ ಕುಡಿಯಬಹುದು. ಆದರೆ ಅದಕ್ಕೂ ಮೊದಲು ನಿಮ್ಮ ದೇಹಕ್ಕೆ ಒಗ್ಗಿ ಕೊಳ್ಳುವವರೆಗೆ ದಿನದಲ್ಲಿ ಒಂದೆರಡು ಬಾರಿ ಮಾತ್ರ ಸೇವಿಸಿದರೆ ಉತ್ತಮ.

Comments are closed.