ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ರಸಂ ಅನ್ನು ಮನೆಯಲ್ಲಿಯೇ ಮಾಡುವುವು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ವಿಭಿನ್ನ ರೀತಿಯಲ್ಲಿ ಜೀರಿಗೆ ಮತ್ತು ಮೆಣಸಿನ ರಸಂ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಜೀರಿಗೆ ಮತ್ತು ಮೆಣಸಿನ ರಸಂ ಮಾಡುವ ವಿಧಾನ: ಒಂದುವರೆ ಚಮಚ ಮೆಣಸಿನಕಾಳು, 1 ಚಮಚ ಜೀರಿಗೆ, 2 ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 4 ಒಣಮೆಣಸಿನಕಾಯಿ,1 ಗಡ್ಡೆ ಬೆಳ್ಳುಳ್ಳಿ, 2 ಚಮಚ ಎಣ್ಣೆ, ಸ್ವಲ್ಪ ಇಂಗು, ಸ್ವಲ್ಪ ಸಾಸಿವೆ, ಸ್ವಲ್ಪ ಅರಿಶಿನ ಪುಡಿ, ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, ರುಚಿಗೆ ತಕಷ್ಟು ಉಪ್ಪು.

ಜೀರಿಗೆ ಮತ್ತು ಮೆಣಸಿನ ರಸಂ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ ಹುಣಸೆಹಣ್ಣು ಹಾಗೂ ಬಿಸಿನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ.ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಮೆಣಸು ಹಾಗೂ ಜೀರಿಗೆಯನ್ನು ಹಾಕಿ ಕಡಿಮೆ ಉರಿಯಲ್ಲಿ 3 – 4 ನಿಮಿಷಗಳ ಕಾಲ ಹುರಿದುಕೊಂಡು ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಟೊಮೊಟೊವನ್ನು ನಾಲ್ಕು ಭಾಗ ಮಾಡಿ ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನೀರನ್ನು ಹಾಕಿ ಕೈಯಿಂದ ಕಿವುಚಿಕೊಳ್ಳಿ.ನಂತರ ನೀರಿನಲ್ಲಿರುವ ಟೊಮೇಟೊ ಸಿಪ್ಪೆಯನ್ನು ಹೊರತೆಗೆಯಿರಿ.

ನಂತರ ಮತ್ತೆ ಗ್ಯಾಸ್ ನಲ್ಲಿ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಇಂಗು, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ, ನಂತರ ಇದಕ್ಕೆ ಮುರಿದ ಒಣಮೆಣಸಿನಕಾಯಿ, ಕರಿಬೇವವನ್ನು ಹಾಕಿ 30 ಸೆಕೆಂಡುಗಳ ಕಾಲ ಮತ್ತೆ ಮಾಡಿಕೊಳ್ಳಿ. ನಂತರ ಹುಣಸೆ ಹಣ್ಣಿನ ರಸ, ಅರಿಶಿನ ಪುಡಿ,ಮಿಕ್ಸಿಯಲ್ಲಿ ಮಾಡಿಕೊಂಡ ಪುಡಿ,ರುಚಿಗೆ ತಕ್ಕಷ್ಟು ಉಪ್ಪು, 2 ಲೋಟ ನೀರನ್ನು ಹಾಕಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ಜೀರಿಗೆ ಮತ್ತು ಮೆಣಸಿನ ರಸಂ ಸವಿಯಲು ಸಿದ್ದ.

Comments are closed.