ಈ ಚಿಕ್ಕ ವಿಧಾನಗಳಲ್ಲಿ ಒಂದನ್ನು ಮಾಡಿ ಸಾಕು, ಜೀವನದಲ್ಲಿ ಜಿರಳೆಗಳು ನಿಮ್ಮ ಮನೆ ಕಡೆ ಬರಲ್ಲ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೇಳುವ 5 ಟಿಪ್ಸ್ ಗಳನ್ನು ಮನೆಯಲ್ಲಿ ಫಾಲೋ ಮಾಡಿದರೆ ಜಿರಳೆಗಳು ನಿಮ್ಮ ಮನೆಯ ಒಳಗೆ ಬರುವುದಿಲ್ಲ. ನಿಮ್ಮ ಮನೆಯಿಂದ ಇರುವೆಗಳನ್ನು ಸುಲಭವಾಗಿ ಹೋಲಿಸಬಹುದು. ಮನೆಯಲ್ಲಿರುವ ಸಾಮಾನುಗಳನ್ನು ಬಳಸಿಕೊಂಡು ಈ 5 ಟಿಪ್ಸ್ ಗಳನ್ನೂ ಫಾಲೋ ಮಾಡಿ.

ಮೊದಲನೆಯದು ಪಲಾವ್ ಎಲೆ: ಪಲಾವ್ ಎಲೆಗಳನ್ನು ಜಿರಳೆ ಬರುವ ಜಾಗದಲ್ಲಿ ಇಡುವುದರಿಂದ ಅದರ ವಾಸನೆಗೆ ಮನೆಯ ಒಳಗೆ ಜಿರಳೆಗಳು ಬರುವುದಿಲ್ಲ. ಎರಡನೆಯದು ಬೆಳ್ಳುಳ್ಳಿ ಪುಡಿ ಹಾಗೂ ಶುಂಠಿ ಪುಡಿ: ಬೆಳ್ಳುಳ್ಳಿ ಪುಡಿ ಮತ್ತು ಶುಂಠಿ ಪುಡಿಯನ್ನು ಒಂದು ಬಟ್ಟಲಿಗೆ ಸಮ ಪ್ರಮಾಣದಲ್ಲಿ ಹಾಕಿ ಮಿಕ್ಸ್ ಮಾಡಿಕೊಂಡು ಜಿರಳೆ ಬರುವ ಜಾಗಕ್ಕೆ ಹಾಕಿಕೊಳ್ಳಿ. ಈ ಪುಡಿಯ ವಾಸನೆಗಳಿಗೆ ಜಿರಳೆಗಳು ಬರುವುದಿಲ್ಲ.

ಇನ್ನು ವಿನೆಗರ್ ಅಥವಾ ನಿಂಬೆಹಣ್ಣು: ನಿಂಬೆಹಣ್ಣಿನ ರಸ ಅಥವಾ ವಿನೆಗರ್ ನನ್ನು ಮುಕ್ಕಾಲು ಭಾಗ ಹಾಕಿ ಹಾಗೂ ಕಾಲುಭಾಗದಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಈ ಲಿಕ್ವಿಡ್ ನನ್ನು ಜಿರಳೆ ಬರುವ ಜಾಗಕ್ಕೆ ಸ್ಪ್ರೇ ಮಾಡಿಕೊಳ್ಳಿ. ಇನ್ನು ಬೇವಿನ ಎಣ್ಣೆ: ಈ ಎಣ್ಣೆಗೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಒಂದು ಸ್ಪ್ರೇ ಬಾಟಲಿಗೆ ಹಾಕಿ ಜಿರಳೆ ಬರುವ ಜಾಗಕ್ಕೆ ಹೊಡೆಯುವುದರಿಂದ ಜಿರಳೆಗಳು ಬರುವುದಿಲ್ಲ. ಇನ್ನು ಕೊನೆಯದಾಗಿ ಕಾಫಿ ಪುಡಿ ಹಾಗೂ ಡಬಲ್ ಟೇಪ್: ಒಂದು ರೊಟ್ಟಿಗೆ ಡಬಲ್ ಟೇಪ್ ಅನ್ನು ಅಂಟಿಸಿಕೊಳ್ಳಿ. ಅದರ ಒಂದು ಭಾಗಕ್ಕೆ ಸ್ವಲ್ಪ ಕಾಫಿ ಪುಡಿಯನ್ನು ಉದುರಿಸಿಕೊಳ್ಳಿ. ಇದರ ವಾಸನೆಗೆ ಜಿರಳೆಗಳು ಬಂದು ಟೇಪಿಗೆ ಅಂಟಿಕೊಳ್ಳುತ್ತದೆ.

Comments are closed.