ರಾಹುಲ್ ದ್ರಾವಿಡ್ ರವರ ಸ್ಥಾನವನ್ನು ತುಂಬುವ ಏಕೈಕ ಆಟಗಾರ ಈತ, ಆತನಿಗೆ ಅವಕಾಶ ನೀಡಿ ಎಂದ ಮೊಹಮದ್ ಕೈಫ್. ಆ ಆಟಗಾರ ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ಇತಿಹಾಸವನ್ನು ನಾವು ಅದಕ್ಕೆ ನೋಡಿದರೆ ಹಲವಾರು ಶ್ರೇಷ್ಠ ಕ್ರಿಕೆಟಿಗರು ಸಿಗುತ್ತಾರೆ. ಇನ್ನು ಕ್ರಿಕೆಟ್ನಲ್ಲಿ ಮೂರು ವಿಧಗಳಿದ್ದು ಅದರಲ್ಲಿ ಟೆಸ್ಟ್ ಕ್ರಿಕೆಟ್ ಎನ್ನುವುದು ಸಾಕಷ್ಟು ದೀರ್ಘವಾಗಿ ಅಂದರೆ ಐದು ದಿನಗಳ ಕಾಲ ನಡೆಯುವ ಆಟವಾಗಿದೆ. ಈ ಸಂದರ್ಭದಲ್ಲಿ ಬ್ಯಾಟಿಂಗ್ ಕೌಶಲ್ಯ ಗಿಂತ ಹೆಚ್ಚಾಗಿ ಆತ ಕ್ರೀಸ್ ಮೇಲೆ ಇರುವಂತಹ ತಾಳ್ಮೆಯನ್ನು ತೋರಿಸುವುದು ನಿಜವಾಗಲೂ ಕೂಡ ಕಷ್ಟಕರವಾದಂತಹ ಕೆಲಸವಾಗಿದೆ.

kaif dravid 1 | ರಾಹುಲ್ ದ್ರಾವಿಡ್ ರವರ ಸ್ಥಾನವನ್ನು ತುಂಬುವ ಏಕೈಕ ಆಟಗಾರ ಈತ, ಆತನಿಗೆ ಅವಕಾಶ ನೀಡಿ ಎಂದ ಮೊಹಮದ್ ಕೈಫ್. ಆ ಆಟಗಾರ ಯಾರಂತೆ ಗೊತ್ತೇ??
ರಾಹುಲ್ ದ್ರಾವಿಡ್ ರವರ ಸ್ಥಾನವನ್ನು ತುಂಬುವ ಏಕೈಕ ಆಟಗಾರ ಈತ, ಆತನಿಗೆ ಅವಕಾಶ ನೀಡಿ ಎಂದ ಮೊಹಮದ್ ಕೈಫ್. ಆ ಆಟಗಾರ ಯಾರಂತೆ ಗೊತ್ತೇ?? 2

ಈ ಮಾದರಿಯ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ರವರನ್ನು ಬಿಟ್ಟರೆ ಬೇರೆ ಯಾವ ಆಟಗಾರನೂ ಕೂಡ ಅಷ್ಟೊಂದು ಸಮರ್ಪಕವಾಗಿ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬುದಾಗಿ ಹಲವಾರು ಕ್ರಿಕೆಟಿಗರು ಹೇಳಿದ್ದಾರೆ. ಎಲ್ಲರೂ ಹೇಳಿರುವಂತೆ ರಾಹುಲ್ ದ್ರಾವಿಡ್ ಅವರು ಹಲವಾರು ಬಾರಿ ಭಾರತೀಯ ಕ್ರಿಕೆಟ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದು ಕೂಡ ಇದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಮತ್ತೊಬ್ಬ ಶ್ರೇಷ್ಠ ಆಟಗಾರನಾಗಿರುವ ಮೊಹಮ್ಮದ್ ಕೈಫ್ ರವರು ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬಬಲ್ಲಂತಹ ಒಬ್ಬ ಕ್ರಿಕೆಟಿಗ ಈಗಿನ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಹಾಗಿದ್ದರೆ ಆ ಕ್ರಿಕೆಟಿಗ ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಕ್ರಿಕೆಟಿಗ ಇನ್ಯಾರು ಅಲ್ಲ ಮತ್ತೊಬ್ಬ ಕನ್ನಡಿಗನಾಗಿರುವ ಕೆ ಎಲ್ ರಾಹುಲ್. ಕೆಎಲ್ ರಾಹುಲ್ ರವರು ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬಬಲ್ಲಂತಹ ಪರ್ಫೆಕ್ಟ್ ಆಟಗಾರ ಎಂಬುದಾಗಿ ಹೇಳಿದ್ದಾರೆ. ಕೆ ಎಲ್ ರಾಹುಲ್ ರವರು ಆರಂಭಿಕ ಬ್ಯಾಟ್ಸ್ಮನ್ ಮಧ್ಯಮ ಕ್ರಮಾಂಕ ಹಾಗೂ ಫಿನಿಶರ್ ಆಗಿ ಕೂಡ ತಮ್ಮ ಕಾರ್ಯವನ್ನು ಚಾಚೂ ತಪ್ಪದೆ ಪಾಲಿಸಿ ಬಲ್ಲಂತಹ ಕ್ಷಮತೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಿದ್ದು ಅವರಲ್ಲಿರುವ ರಾಹುಲ್ ದ್ರಾವಿಡ್ ಅವರ ಅಂಶವನ್ನು ಎತ್ತಿ ಹಿಡಿಯುತ್ತದೆ ಎಂಬುದಾಗಿ ಹೇಳಿದ್ದಾರೆ.

Comments are closed.