ಕನ್ನಡದ ಸ್ಟಾರ್ ನಟರಾದ ದರ್ಶನ್, ಸುದೀಪ್, ಶಿವಣ್ಣಗೆ ಕೈ ಕೊಟ್ಟ ಚಿತ್ರಗಳು, ಯಾಕೆ ಗೊತ್ತೇ?? ಮತ್ತೆ ಬರುತ್ತಾ ಆ ಕಾಲ??

ನಮಸ್ಕಾರ ಸ್ನೇಹಿತರೇ ಒಂದು ಸಿನಿಮಾ ಸಕ್ಸೆಸ್ ಆಗ್ಬೇಕು ಅಂದ್ರೆ ಅದಕ್ಕೆ ತುಂಬಾನೇ ಶ್ರಮ ಹಾಕ್ಬೇಕಾಗತ್ತೆ. ತೆರೆಯ ಹಿಂದೆ ಸಾಕಷ್ಟು ಕೆಲಸಗಳನ್ನ ಮಾಡಬೇಕಾಗುತ್ತದೆ. ಅದರಲ್ಲೂ ಕೆಲವು ಚಿತ್ರಗಳನ್ನ ಸಿನಿಮಾ ನಟರು ಅಥವಾ ನಿರ್ದೇಶಕರು ತುಂಬಾ ಇಷ್ಟಪಟ್ಟಿರ್ತಾರೆ. ಹಾಗಾಗಿ ಆ ಸಿನಿಮಾ ಯಶಸ್ಸಿಗೆ ಶತಾಯಗತಾಯ ಪ್ರಯತ್ನವನ್ನೂ ಪಟ್ಟಿರ್ತಾರೆ. ಇಷ್ಟು ಶ್ರಮ ಹಾಕಿದ ನಂತರವೂ ಕೆಲವು ಸಿನಿಮಾಗಳು ಸೋಲನ್ನನುಭವಿಸುತ್ತವೆ. ಪ್ರೇಕ್ಷಕ ಒಪ್ಪಿಕೊಂಡರೆ ಹಣ ಬಂದಿರುವುದಿಲ್ಲ, ಅಥವಾ ಹಣ ಬಂದಿದ್ದರೂ ಅಭಿಪ್ರಾಯಗಳು ಚೆನ್ನಾಗಿರಲ್ಲ. ತೆರೆ ಕಂಡ ಸಿನಿಮಾಗಳಲ್ಲಿ ಹೊಸ ಪ್ರಯತ್ನಗಳಿಗೆ ಸೋಲಾದರೆ ಮತ್ತೆ ಅಂಥ ಚಿತ್ರಗಳನ್ನು ಮಾಡಲು ಯಾರೂ ಮುಂದಾಗುವುದಿಲ್ಲ. ಕನ್ನಡದ ಕೆಲವು ಚಿತ್ರಗಳಲ್ಲಿ ಉಂಟಾದ ಸೋಲಿನ ಬಗ್ಗೆ ಇಂದು ಮಾತಾಡೋಣ ಬನ್ನಿ.

’ಏಕಾಂಗಿ’ಯ ಸೋಲು: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೊಸ ರೀತಿಯ ಸಿನಿಮಾ ಮಾಡಲು ಮುಂದಾಗುತ್ತಾರೆ. ಯಾರೂ ಮಾಡಿರದಂಥ ಪ್ರಯತ್ನಗಳನ್ನು ಮಾಡುತ್ತಾರೆ. ಇಂಥ ಪಟ್ಟಿಯಲ್ಲಿ ’ಏಕಾಂಗಿ’ ಚಿತ್ರವೂ ಒಂದು. ಇದು ಚೆನ್ನಾಗಿಯೇ ಮೂಡಿ ಬಂದಿದ್ದರೂ ಕೂಡ ಜನ ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲ. ಈ ಪ್ರಯತ್ನ ಗೆದ್ದಿದ್ದರೆ ರವಿಚಂದ್ರನ್ ಅವರ ಇನ್ನಷ್ಟು ’ಏಕಾಂಗಿ’ ಯಂಥ ಸಿನಿಮಾಗಳನ್ನು ನೋಡಬಹುದಾಗಿತ್ತು.

ಸೋತ ಸ್ವಸ್ತಿಕ್: 1998ರಲ್ಲಿ ತೆರೆಕಂಡಿತ್ತು ಉಪೇಂದ್ರ ಅವರ ಸ್ವಸ್ತಿಕ್ ಚಿತ್ರ. ಟೆರೆರಿಸ್ಟ್ ಕಥೆಯನ್ನು ಹೊಂದಿದ್ದ ಈ ಚಿತ್ರವನ್ನು ಈಗಿನ ಯುವತೆ ಮೆಚ್ಚಿಕೊಳ್ಳುತ್ತಿದ್ದರೂ ಆ ಸಮಯದಲ್ಲಿ ಈ ಚಿತ್ರ ಹಿಟ್ ಆಗಲೇ ಇಲ್ಲ, ಒಂದೊಮ್ಮೆ ಪ್ರೇಕ್ಷಕ ಈ ಚಿತ್ರವನ್ನು ಬೆಂಬಲಿಸಿದ್ದರೆ ಉಪೇಂದ್ರ ಇಂಥ ಇನ್ನಷ್ಟು ಚಿತ್ರಗಳನ್ನು ಮಾಡಲು ಮುಂದಾಗುತ್ತಿದ್ದರೋ ಏನೋ!

ಶಿವಣ್ಣನ ಮುದುಡಿದ ’ಚಿಗುರಿದ ಕನಸು’: ಶಿವರಾಜ್ ಕುಮಾರ್ ಅವರು ಮಾಡಿದ್ದ ಚಿಗುರಿದ ಕನಸು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಅಂತೂ ಲಭಿಸಿತ್ತು ಆದರೆ ಚಿತ್ರ ಗೆಲ್ಲಲಿಲ್ಲ. ಹಾಗೆಯೇ ’ಕಬೀರ’ ಚಿತ್ರವನ್ನೂ ಕೂಡ ಪ್ರೇಕ್ಷಕರು ಗೆಲ್ಲಿಸಲಿಲ್ಲ. ಆದರೆ ಈ ಚಿತ್ರಗಳಲ್ಲಿ ಹಿನ್ನಡೆ ಕಂಡರೂ ಶಿವಣ್ಣ ಎದೆಗುಂದದೆ ಇನ್ನೂ ಹೊಸ ಪ್ರಯತ್ನಗಳಿಗೆ ತೆರೆದುಕೊಂಡರು. ಇದಕ್ಕೆ ಶಿವಣ್ಣ ಅವರ ’ಕವಚ’ ಚಿತ್ರದ ಯಶಸ್ಸೇ ಸಾಕ್ಷಿ!

ಸುದೀಪ್ ನಿಲ್ಲಿಸಿದ ’ಶಾಂತಿ ನಿವಾಸ’: ಕಿಚ್ಚ ಸುದೀಪ್ ಇಷ್ಟಪಟ್ಟು ಮಾಡಿದ್ದ ಚಿತ್ರ ಶಾಂತಿ ನಿವಾಸ 2007ರಲ್ಲಿ ತೆರೆಕಂಡ ಚಿತ್ರ. ಆದರೆ ಈ ಚಿತ್ರ ಯಶಸ್ಸನ್ನು ಕಾಣಲಿಲ್ಲ. ಹಾಗಾಗಿ ಸುದೀಪ್ ಕಮರ್ಶಿಯಲ್ ಚಿತ್ರದತ್ತ ಮುಖ ಮಾಡಿದರು. ಮತ್ತೆ ಶಾಂತಿ ನಿವಾಸದಂತ ಚಿತ್ರ ಮಾಡಲೇ ಇಲ್ಲ.

ಹೀಗೆ ಅತ್ಯಂತ ಇಷ್ಟ ಪಟ್ಟು ಸಿನಿಮಾ ನಿರ್ದೇಶನ ಮಾಡಿ, ನಟಿಸಿ ತೆರೆಮೇಲೆ ಬಂದ ನಂತರ ಪ್ರೇಕ್ಷಕರಿಗೆ ಅಷ್ಟು ಇಷ್ಟವಾಗದೇ ಸೋಲನ್ನು ಕಂಡ ಸಾಕಷ್ಟು ಚಿತ್ರಗಲಿವೆ. ಆದರೆ ಇವೆಲ್ಲ ಉತ್ತಮ ಪ್ರಯತ್ನಗಳಾಗಿದ್ದು, ಸ್ವಲ್ಪ ಮಟ್ಟಿನ ಸುಧಾರಣೆ ಮಾಡಿಕೊಂಡರೆ ಹೊಸ ಪ್ರಯತ್ನಗಳು ಖಂಡಿತವಾಗಿ ಗೆದ್ದೇ ಗೆಲ್ಲುತ್ತವೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಮುಂದುವರೆಯಬೇಕಾಗಿದೆ.

Comments are closed.