ಕಲಿಯುಗದ ಈ ಕಠೋರ ಸತ್ಯಗಳನ್ನು ದ್ವಾಪರಯುಗದಲ್ಲೇ ಹೇಳಿದ್ದ ಕೃಷ್ಣ, ಕಲಿಯುಗ ಹೇಗಿರಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಮಾಯಣ, ಮಹಾಭಾರತ, ಗೀತೆ ಇಂಥ ಯಾವುದೇ ಪುರಾಣ ಗ್ರಂಥಗಳನ್ನು ನೋಡಿ ಎಲ್ಲದರಲ್ಲಿಯೂ ಕಲಿಯುಗಕ್ಕೂ ಅನ್ವಯವಾಗುವಂತ ವಿಷಯಗಳನ್ನು ಹೇಳಿರುತ್ತಾರೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಜೀವನ ಪಥವಾಗಿ ಸ್ವೀಕರಿಸುವುದು ಅತ್ಯಂತ ಅಗತ್ಯ. ಕೃಷ್ಣ ಪರಮಾತ್ಮ ಕಲಿಯುಗದಲ್ಲಿ ಮನುಷ್ಯರು ಹೇಗಿರುತ್ತಾರೆ? ಅವರ ನಡೆಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಶ್ರೀ ಕೃಷ್ಣ ಉದಾಹರಣೆಗೆ ಸಮೇತವಾಗಿ ಉತ್ತರಿಸುತ್ತಾನೆ. ಪಾಂಡವರು ವನವಾಸಕ್ಕೆ ಹೊರಟಿರುವ ಸಂದರ್ಭದಲ್ಲಿ ಕಾಡಿಗೆ ಹೀಗಿ ಅಲ್ಲಿ ಕಂಡ ವಿಷಯವನ್ನು ಸರಿಯಾಗಿ ಗಮನಿಸಿ ತನಗೆ ಬಂದು ಹೇಳುವಂತೆ ಆದೇಶಿಸುತ್ತಾನೆ. 5 ದಿಕ್ಕುಗಳಿಗೆ ಹೋದ ಪಾಂಡವರು 5 ವಿಷಯಗಳನ್ನು ನೋಡಿಕೊಂಡು ಬರುತ್ತಾರೆ. ಕೃಷ್ಣ ಮತ್ತು ಪಾಂಡವರ ನಡುವಿನ ಮಾತುಕತೆಗಳು ಹೀಗಿವೆ.

ಯುಧಿಷ್ಠಿರ: ಕೃಷ್ಣ ನಾನು ನೋಡಿದ್ದು 2 ಸೊಂಡಿಲಿನ ಆನೆಯನ್ನು. ಇದಕ್ಕೆ ಏನು ಅರ್ಥ?? ಕೃಷ್ಣ : ಯುಧಿಷ್ಠಿರ, ಈ ಆನೆಯೇ ಕಲಿಯುಗದ ಮನುಷ್ಯನ ಎರಡು ಬುದ್ಧಿಯ ಸಂಕೇತ. ಮನುಷ್ಯರು ಹೇಳುವುದು ಒಂದು ಮಾಡುವುದು ಮತ್ತೊಂದು. ಯಾವುದೇ ರಾಜಕರಣಿಗಳಾಗಿರಲಿ, ಅಥವಾ ಸಾಮನ್ಯನಾಗಿರಲಿ ಬಾಯಲ್ಲಿ ಹೇಳುವುದು ಹಾಗೂ ನಡೆದುಕೊಳ್ಳುವುದರಲ್ಲಿ ವ್ಯತ್ಯಾಸವಿರುತ್ತದೆ. ಕಲಿಯುಗದ ಜನರಲ್ಲೂ ಎರಡೆರಡು ರೀತಿಯ ವಿಚಾರಧಾರೆಗಳು ಇರುತ್ತವೆ.

ಭೀಮ: ವಾಸುದೇವ ನಾನು ನೋಡಿದ್ದು ಒಂದು ಆಕಳು ತನ್ನ ಕರುವನ್ನು ಪ್ರೀತಿಯಿಂದ ನೆಕ್ಕುತ್ತಿರುವುದು, ಕರುವನ್ನು ನೆಕ್ಕಿ ನೆಕ್ಕಿ ಅದರ ಚರ್ಮದಿಂದ ರಕ್ತ ಒಸರುತ್ತಿತ್ತು. ಕೃಷ್ಣ: ಭೀಮ ಇದು ಕಲಿಯುಗದಲ್ಲಿ ತಂದೆ ತಾಯಿ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ಸೂಚಿಸುತ್ತದೆ. ಕಲಿಯುಗದಲ್ಲಿ ಪಾಲಕರು ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಅವರಿಗಾಗಿಯೇ ಜೀವ ತೆಯುತ್ತಾರೆ. ಅವರ ಮಕ್ಕಳು ಮಾತ್ರ ಮುಖ್ಯವಾಗಿರುತ್ತದೆಯೇ ಹೊರತು ಬೇರೆ ಯಾರು ಅಲ್ಲ. ಹಾಗಾಗಿ ಬಡವ ಬಲ್ಲಿದ ಎನ್ನುವ ಭಾವನೆಗಳು ಕೂಡ ಅವರಿಗಿರುವುದಿಲ್ಲ.

ಅರ್ಜುನ: ಕೃಷ್ಣ, ನಾನು ಒಂದು ದುಷ್ಠ ಮಾಂಸಾಹಾರಿ ಪಕ್ಷಿಯನ್ನು ನೋಡಿದೆ. ಇದು ಮನುಷ್ಯರ ಯಾವ ಗುಣವನ್ನು ಸೂಚಿಸುತ್ತದೆ?? ಕೃಷ್ಣ: ಕಲಿಯುಗದಲ್ಲಿ ಮನುಷ್ಯ ಬುದ್ಧಿವಂತನೂ ವಿದ್ಯಾವಂತನೂ ಆಗಿರುತ್ತಾನೆ. ಆದರೆ ಆತನಲ್ಲಿ ಕ್ರೌರ್ಯವೂ ತುಂಬಿರುತ್ತದೆ. ಬೇರೆಯವರ ವಸ್ತುವಿಗಾಗಿ ಕೊಲೆಯನ್ನು ಮಾಡಲು ಕೂಡ ಹೇಸುವುದಿಲ್ಲ. ಯಾವ ಪಾಪ ಮಾಡಲೂ ಹಿಂಜರಿಯುವುದಿಲ್ಲ.

ನಕುಲ: ಮಾಧವ, ನಾನು ಕಾಡಿನಲ್ಲಿ ಕಂಡಿದ್ದು ಒಂದು ಬಂಡೆಗಲ್ಲು ಉರುಳಿ ಬರುತ್ತಿರುವುದನ್ನು. ಯಾವುದೇ ದೊಡ್ಡ ಮರವೂ ಕೂಡ ಬಂಡೆಯನ್ನು ತಡೆಯಲಾಗಲಿಲ್ಲ ಆದರೆ ಒಂದು ಸಣ್ಣ ಪೊದೆ ಅದನ್ನು ತಡೆಯಿತು. ಇದರ ಅರ್ಥವೇನು?? ಕೃಷ್ಣ: ನಕುಲ, ಇದರ ಅರ್ಥ ಕಲಿಯುಗದಲ್ಲಿ ಜನರು ಬುದ್ಧಿವಂತರಾಗಿರುತ್ತಾರೆ ಆದರೆ ಅದನ್ನು ಬೇಕಾಗಿರುವುದಕ್ಕೆ ಬಳಸುವುದಿಲ್ಲ. ಇದರಿಂದ ಬದುಕು ನಾಶವಾಗುತ್ತದೆ. ಯಾವ ಹಣ, ಅಂತಸ್ತು ಕೂಡ ನಮ್ಮನ್ನು ಕಪಾಡುವುದಿಲ್ಲ. ಆದರೆ ಹರಿ ನಾಮ ಸ್ಮರಣೆಯಂತ ಸಣ್ಣ ಪೊದೆಯನ್ನು ರಕ್ಷಿಸಿದಂತೆ ನಮ್ಮನ್ನು ರಕ್ಷಿಸಬಲ್ಲದು.

ಸಹದೇವ: ಕಾಡಿನಲ್ಲಿ ನಾನು ಬಾವಿಗಳನ್ನು ನೋಡಿದೆ, ಆದರೆ ಮಧ್ಯದಲ್ಲಿರುವ ಒಂದು ಬಾವಿಯಲ್ಲಿ ಮಾತ್ರ ನಿರೀರಲಿಲ್ಲ. ಅಕ್ಕ ಪಕ್ಕದಲ್ಲಿರುವ ಬಾವಿಗಳು ತುಂಬಿದ್ದವು ಕಾರಣವೇನು?? ಕೃಷ್ಣ: ಸಹದೇವ ಇದರ ಅರ್ಥ ಇಷ್ಟೆ. ಕಲಿಯುಗದಲ್ಲಿ ಜನರು ತಮ್ಮ ಶೋಕಿಗಾಗಿ ಖರ್ಚು ಮಾಡುತ್ತಾರೆ ವಿನ: ಬಡವರಿಗೆ ಒಂದು ರೂಪಾಯಿಯನ್ನು ಕೂಡ ದಾನ ಮಾಡುವುದಿಲ್ಲ. ಬಡವರು ಬಡವರಾಗಿಯೇ ಇರಬೇಕಾಗುತ್ತದೆ. ಹೀಗೆ ಶ್ರೀ ಕೃಷ್ಣ, ಕಲಿಯುಗದ ಕಠೋರ ಸತ್ಯಗಳನ್ನು ಹೇಳುತ್ತಾನೆ.

Comments are closed.