ಮೀಸಲಾತಿ, ರೈತರ ಪ್ರತಿಭಟನೆ ಇನ್ನಿತರ ಸವಾಲುಗಳಿಗೆ ಖಡಕ್ ಉತ್ತರ ನೀಡಿದ ಬಿಎಸ್ವೈ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಕರ್ನಾಟಕ ರಾಜ್ಯದಲ್ಲಿ ನೀವು ಎಲ್ಲಿ ನೋಡಿದರೂ ಕೂಡ ಇಷ್ಟು ದಿವಸ ಶಾಂತವಾಗಿದ್ದ ಪ್ರತಿಯೊಂದು ಘಟನೆಗಳು ಹಾಗೂ ವಿಚಾರಗಳು ಹೊರ ಬರುತ್ತಿವೆ. ಅದರಲ್ಲಿಯೂ ಒಂದೆಡೆ ರೈತರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಕುರುಬ ಸಮುದಾಯ, ವಾಲ್ಮೀಕಿ ಸಮುದಾಯ ಸೇರಿದಂತೆ ಲಿಂಗಾಯಿತ ಪಂಚಮಸಾಲಿ ಸಮುದಾಯ ಸೇರಿದಂತೆ ಇನ್ನಿತರ ಸಮುದಾಯಗಳು ಕೂಡ ನಮಗೆ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದು ಕುಳಿತಿವೇ.

ಮೀಸಲಾತಿ ಎಂಬುದು ಕೇಂದ್ರ ಸರ್ಕಾರದ ಕೈಯಲ್ಲಿ ಇದ್ದರೂ ಕೂಡ ಹೊಸ ಸಮುದಾಯಗಳಿಗೆ ಮೀಸಲಾತಿ ಘೋಷಣೆ ಮಾಡಬೇಕು ಎಂದರೆ ಇದೀಗ ಪಟ್ಟಿಯಲ್ಲಿರುವ ಇನ್ಯಾವುದೇ ಇನ್ನಿತರ ಸಮುದಾಯ ಬೆಳೆದಿದೆ ಎಂದು ನಿರೂಪಿಸಿ ತದ ನಂತರ ಸಂವಿಧಾನದ ಪ್ರಕಾರ ಸಮುದಾಯವನ್ನು ಕೈಬಿಟ್ಟು ಮತ್ತೊಂದು ಸಮುದಾಯವನ್ನು ಮೀಸಲಾತಿ ಪಟ್ಟಿಗೆ ಸೇರಿಸಬಹುದಾಗಿದೆ ಆದರೆ ಹೀಗೆ ಮಾಡುವುದು ಕೂಡ ಸುಲಭದ ಕೆಲಸವಲ್ಲ ಯಾಕೆಂದರೆ ಯಾವುದೇ ಸಮುದಾಯ ಮೀಸಲಾತಿಯಿಂದ ತೆಗೆದುಹಾಕುತ್ತವೆ ಎಂದರೆ ಸುಮ್ಮನೆ ಇರುವುದಿಲ್ಲ, ಹೀಗಿರುವಾಗ ಈ ಎಲ್ಲಾ ವಿಚಾರಗಳಿಂದ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ನವರಿಗೆ ಸವಾಲಿನ ಮೇಲೆ ಸವಾಲುಗಳು ಹೆಚ್ಚಾಗುತ್ತಿವೆ.

ಇದರ ಕುರಿತು ಬಿಎಸ್ವೈ ರವರಿಗೆ ಪ್ರಶ್ನೆ ಮಾಡಿದಾಗ ನಾನು ಎಲ್ಲವನ್ನು ನಿಭಾಯಿಸುತ್ತೇನೆ ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಕೆಲಸ ಅದಕ್ಕಾಗಿ ನಾನು ಎದುರಿಸುತ್ತೇನೆ ನನಗೆ ಈ ರೀತಿಯ ಸವಾಲುಗಳು ಹೊಸತಲ್ಲ ಈ ರೀತಿಯ ಸವಾಲುಗಳು ನನಗೆ ಬಂದಾಗ ನನಗೆ ಮತ್ತಷ್ಟು ಖುಷಿಯಾಗುತ್ತದೆ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೀಸಲಾತಿ ವಿಚಾರಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.