ಕಿರುತೆರೆಯಿಂದ ದೂರ ಉಳಿಯುತ್ತಿರುವ ಕವಿತಾ ಗೌಡ ರವರ ಸ್ಥಾನವನ್ನು ತುಂಬುವ ಏಕೈಕ ನಟಿ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹೇಗೆ ಒಬ್ಬ ನಟ ನ ಜಾಗಕ್ಕೆ ಇನ್ನೊಬ್ಬ ನಟ ಬಂದು ಸೇರಿಕೊಳ್ಳುತ್ತಾರೆ. ಹಾಗೆಯೇ ಇದು ಕನ್ನಡದ ಕಿರುತೆರೆಯ ಧಾರವಾಹಿಗಳಲ್ಲಿ ಕೂಡಾ ಇತ್ತೀಚೆಗೆ ನಡೆಯುತ್ತಿದೆ. ಒಬ್ಬರ ಜಾಗಕ್ಕೆ ಇನ್ನೊಬ್ಬ ಸಮರ್ಥ ಅಭ್ಯರ್ಥಿ ಬಂದಾಗ ನಾವು ಹಿಂದೆ ಇದ್ದ ನಟರನ್ನು ಹೊಸ ನಟರ ನಟನೆಯಲ್ಲಿ ಹಾಗೂ ಅವರ ಪ್ರತಿಭೆಯಲ್ಲಿ ಕಾಣುತ್ತೇವೆ. ಇಂದು ನಾವು ಚಿತ್ರರಂಗದ ಬಗ್ಗೆ ಮಾತನಾಡುತ್ತಿಲ್ಲ ನಾವು ಮಾತನಾಡುತ್ತಿರುವುದು ಕಿರುತೆರೆಯ ಒಬ್ಬ ನಟಿಯ ಕುರಿತಂತೆ.

ಹೌದು ನಾವು ಮಾತನಾಡುತ್ತಿರುವುದು ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿಯಲ್ಲಿ ನಟಿಸಿದ ರಾಗಿರುವ ಕವಿತಾ ಗೌಡ ರವರ ಕುರಿತಂತೆ ಮಾತನಾಡುತ್ತಿರುವುದು. ಕವಿತಾ ಗೌಡ ಎಂದಾಕ್ಷಣ ಸಿಂಪಲ್ ಹಾಗೂ ಸಂಪ್ರದಾಯಬದ್ಧ ನಟನೆಯನ್ನು ತೋರಿಸಿ ಕನ್ನಡ ಕಿರುತೆರೆಯ ಅದೆಷ್ಟು ವೀಕ್ಷಕರನ್ನು ತಮ್ಮ ಅಭಿಮಾನಿಗಳಾಗಿ ಪರಿವರ್ತಿಸಿಕೊಂಡವರು. ಕವಿತ ಗೌಡ ಇದುವರಿಗೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸದಿದ್ದರು ಅವರ ಒಂದು ಧಾರಾವಾಹಿ ಅವರಿಗೆ ಅಷ್ಟೊಂದು ಜನಪ್ರಿಯತೆ ತಂದುಕೊಟ್ಟಿತು.

ನೀವೇ ಅಂದಾಜು ಮಾಡಿಕೊಳ್ಳಿ ಅವರ ಪಾತ್ರದ ತೂಕ ಎಷ್ಟು ಇತ್ತೆಂದು. ಚಿತ್ರರಂಗದ ನಟ ನಟಿಯರಂತೆ ಕವಿತಾ ಗೌಡ ಕೂಡ ತಮ್ಮ ಪಾತ್ರದ ಪರಕಾಯ ಪ್ರವೇಶ ಮಾಡಿ ಸ್ವಾಭಾವಿಕ ನಟನೆಯನ್ನು ಪರದೆ ಮೇಲೆ ನೀಡುತ್ತಿದ್ದರು. ಕವಿತ ಗೌಡರನ್ನು ನ್ಯಾಚುರಲ್ ನಟಿಯಂದೇ ನಾವು ಕರೆಯಬಹುದು. ಕವಿತಾ ಗೌಡರವರು ಇದುವರೆಗೆ ಯಾವ ಚಿತ್ರದಲ್ಲೂ ನಟಿಸಿಲ್ಲ ಆದರೆ ಅವರಿಗೆ ಅಭಿಮಾನಿಗಳ ಸಂಖ್ಯೆ ಯಾವ ಚಿತ್ರದ ನಟಿಯ ಅಭಿಮಾನಿಗಳ ಸಂಖ್ಯೆಗಿಂತಲೂ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅದೆಷ್ಟು ಲಕ್ಷಾಂತರ ಅಭಿಮಾನಿಗಳನ್ನು ಕವಿತಾ ಗೌಡ ರವರು ಹೊಂದಿದ್ದಾರೆ.

ಅದಕ್ಕೆ ತಾನೆ ನಾವು ಹೇಳ್ತಿದ್ದಿದ್ದು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಕಿರುತೆರೆ ರಂಗಕ್ಕೆ ಕೂಡ ಅದೆಷ್ಟು ಲಕ್ಷಾಂತರ ವೀಕ್ಷಕರು ಅಭಿಮಾನಿಗಳಿದ್ದಾರೆ ಎಂದು. ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ಚಿತ್ರರಂಗವನ್ನು ಸಂಪೂರ್ಣವಾಗಿ ಓವರ್ಟೇಕ್ ಮಾಡಿ ಕನ್ನಡ ಕಿರುತೆರೆ ವೇಗವಾಗಿ ಟೆಲಿವಿಷನ್ ರಂಗದಲ್ಲಿ ಬೆಳೆಯುತ್ತಿದೆ. ಆದರೆ ಇತ್ತೀಚೆಗಷ್ಟೇ ಕವಿತಾ ಗೌಡ ರವರು ತಮ್ಮ ಬಹುಕಾಲದ ಗೆಳೆಯ ಚಂದನ್ ಗೌಡರನ್ನು ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಚಂದನ್ ಗೌಡ ರವರು ಕೂಡ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಕೂಡ ಕವಿತ ಗೌಡರಿಗೆ ಪರಿಚಯವಾದದ್ದು. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿ ಪ್ರೀತಿ ಈಗ ಮದುವೆಯಲ್ಲಿ ಮುಂದುವರೆಯುತ್ತಿದೆ.

ಆದ ಕಾರಣ ಸಿನಿಮಾ ರಂಗದ ಜೊತೆ ವೈಯಕ್ತಿಕ ಜೀವನವನ್ನು ಕೂಡ ನಿಭಾಯಿಸಿಕೊಂಡು ಕಿರುತೆರೆಯಲ್ಲಿ ಸಂಪೂರ್ಣವಾಗಿ ಸಮಯ ನೀಡುವುದು ಬಹುತೇಕ ಕಷ್ಟ ಸಾಧ್ಯವೇ ಸರಿ. ಆದರೆ ಇದೇ ಸಮಯದಲ್ಲಿ ಅದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೇಳೆ ಅವರು ಕಿರುತೆರೆಯನ್ನು ಬಿಟ್ಟರೆ ಅವರ ಜಾಗವನ್ನು ಸಮರ್ಥವಾಗಿ ತುಂಬಿಸುವ ಕಿರುತೆರೆ ನಟಿ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ, ಅದೇ ಸಮಯದಲ್ಲಿ ಈ ಕುರಿತು ಹಲವಾರು ನಟಿಯರ ಹೆಸರು ಕೂಡ ಕೇಳಿ ಬರುತ್ತಿದೆ.

ಹೌದು ಕವಿತಾ ಗೌಡರವರ ಕಿರುತೆರೆಯ ಜಾಗವನ್ನು ಸಮರ್ಥವಾಗಿ ತುಂಬಿಸ ಬಲ್ಲ ಕಿರುತೆರೆಯ ನಟಿಯೆಂದರೆ ಅದು ಭವ್ಯ ಗೌಡ. ಭವ್ಯ ಗೌಡ ಯುವನಟಿ ಆದರೂ ಸಹ ಬಹಳ ಚುರುಕು ಹಾಗೂ ಜಾಣೆ. ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ಎಂಬ ದಾರವಾಹಿಯಲ್ಲಿ ನಾಯಕಿ ನಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕೆಲ ನಟನೆಯ ಮನಸ್ಸು ನೋಡಿದರೆ ಕವಿತಾ ಗೌಡರವರ ನಟನೆಗೆ ನಾವು ಹೋಲಿಸಬಹುದು.

ಅದೇ ಗಾಂಭೀರ್ಯ ಹಾಗೂ ನಟನೆಯ ಬಗ್ಗೆ ಇರುವ ಶ್ರದ್ಧೆ ಭವ್ಯ ಗೌಡರನ್ನು ಕವಿತಾ ಗೌಡ ರವರ ಸ್ಥಾನವನ್ನು ಸಮರ್ಥವಾಗಿ ತುಂಬಿಹ ಬಲ್ಲ ನಟಿಯೆಂದು ಸಾಬೀತುಪಡಿಸುತ್ತದೆ. ಮುಂದಿನ ದಿನಗಳಲ್ಲಿ ಉದಯೋನ್ಮುಖ ನಟಿ ಯಿಂದ ಖ್ಯಾತ ನಟಿಯ ಪಟ್ಟವನ್ನು ಭವ್ಯ ಗೌಡರವರು ಅಲಂಕರಿಸಬಹುದು. ನಿಮಗೇನನ್ನಿಸುತ್ತಿದೆ ಸ್ನೇಹಿತರೆ ಲಕ್ಷ್ಮೀಬಾರಮ್ಮ ಖ್ಯಾತಿಯ ಕವಿತಾ ಗೌಡ ರವರ ಸ್ಥಾನವನ್ನು ಗೀತಾ ಧಾರಾವಾಹಿ ನಟಿ ಭವ್ಯ ಗೌಡರವರು ಸಮರ್ಥವಾಗಿ ತುಂಬಿಸ ಬಲ್ಲರೇ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮೂಲಕ ನಮಗೆ ತಿಳಿಸಿ.

Comments are closed.