ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ??

ನಮಸ್ಕಾರ ಸ್ನೇಹಿತರೇ ಕೌನ್ ಬನೆಗಾ ಕರೋಡ್ ಪತಿ 13ನೆ ಸೀಸನ್ ಪ್ರಸಾರವಾಗುತ್ತಿವೆ. ಇಲ್ಲಿಯವರೆಗೂ ಅತ್ಯಂತ ಸರಳವಾಗಿ ಸುಂದರವಾಗಿ ನಡೆಸಿಕೊಂಡು ಬರುತ್ತಿರುವ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಜನರಿಗೆ ಇನ್ನಷ್ಟು ಇಷ್ಟವಾಗುತ್ತಾರೆ. ಇಲ್ಲಿ ಬರುವ ಎಲ್ಲಾ ಸ್ಪರ್ಧಿಗಳನ್ನು ಬಿಗ್ ಬಿ ನಡೆಸಿಕೊಳ್ಳುವ ರೀತಿಯೇ ಬಹಳ ವಿಭಿನ್ನ. ಅವರ ಪ್ರೋತ್ಸಾಹದ ಮಾತುಗಳೇ ಸ್ಪರ್ಧಿಗಳನ್ನು ಹೆಚ್ಚು ಸ್ಫೂರ್ತಿಗೊಳಿಸುತ್ತೆ.

kbc 1 | ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ??
ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?? 2

ಇನ್ನು ಈ ಬಾರಿಯ ಸೀಸನ್ ಬಗ್ಗೆ ಹೇಳುವುದಾದರೆ ಈಗಾಗಲೇ 3 ಸ್ಪರ್ಧಿಗಳು ತಮ್ಮ ನಾಲೆಡ್ಜ್ ಪ್ರದರ್ಶಿಸಿ ಕೋಟಿ ಗಳಿಸಿಕೊಂಡು ಹೋಗಿದ್ದಾರೆ. ಕೆಬಿಸಿಯ ಕೊನೆಯ 7 ಕೋಟಿ ರೂಪಾಯಿ ಮೌಲ್ಯದ ಪ್ರಶ್ನೆಯ ವರೆಗೂ ತಲುಪಿ ಉತ್ತರ ಗೊತ್ತಾಗದೆ ಕ್ವಿಟ್ ಮಾಡಿ ಒಂದು ಕೋಟಿ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ ಗೀತಾ ಸಿಂಗ್ ಗೌರ್. ಇವರು ಮೂಲತಃ ಮಧ್ಯ ಪ್ರದೇಶದವರು. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಕೊನೆಯದಾಗಿ ಮೊಘಲ್ ಸಾಮ್ರಾಜ್ಯದ ಬಗ್ಗೆ ಕೇಳಿದ ಒಂದು ಪ್ರಶ್ನೆಗೆ ಗೀತಾ ಅವರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.

ಗೀತಾ ಗೌರ್ ಅವರ ಎಲ್ಲಾ ಲೈಫ್ ಲೈನ್ ಗಳೂ ಮುಗಿದಿದ್ದು ಅವುಗಳನ್ನು ಉಪಯೋಗಿಸಿಕೊಳ್ಳುವ ಹಾಗೂ ಇರಲಿಲ್ಲ. ಆದ್ದರಿಂದ ಅವರು ಪ್ರಶ್ನೆಯನ್ನು ಕೇಳಿ, ಯೋಚಿಸಿ ಕ್ವಿಟ್ ಮಾಡಿದ್ದಾರೆ. ಅವರಿಗೆ ಕೇಳಲಾದ ಪ್ರಶ್ನೆ ಇದಾಗಿತ್ತು. ’ಅಕ್ಬರ್ ಮೊಮ್ಮಕ್ಕಳನ್ನು ಕ್ರೈಸ್ತ ಪಾದ್ರಿಯರಿಗೆ ಹಸ್ತಾಂತರಿಸಿದ ನಂತರ, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಿಸಿ, ಹೆಸರು ಬದಲಿಸಲಾಯಿತು. ಈ‌ ಕೆಳಗಿನ ಹೆಸರುಗಳಲ್ಲಿ ಯಾವುದು ಅಕ್ಬರ್ ನ ಮೂರು ಮಕ್ಕಳ‌ ಹೆಸರಲ್ಲ?’ ಇದು ಪ್ರಶ್ನೆಯಾಗಿದ್ದು ಉತ್ತರವಾಗಿ ನೀಡಲಾಗಿದ್ದ ಹೆಸರುಗಳು ಹೀಗಿದ್ದವು. ಡಾನ್‌ ಫೆಲಿಪೆ, ಡಾನ್ ಹೆನ್ರಿಕ್, ಡಾನ್‌ ಕಾರ್ಲೋಸ್ ಮತ್ತು ಡಾನ್ ಫ್ರಾನ್ಸಿಸ್ಕೊ. ಸರಿಯಾದ ಉತ್ತರ ಡಾನ್‌ ಫ್ರಾನ್ಸಿಸ್ಕೋ ಆಗಿತ್ತು.

ಅಕ್ಬರ್ ಪುತ್ರ ಜಹಾಂಗೀರ್, ತಮ್ಮ‌ ಸೋದರನ ಮೂವರು ಪುತ್ರರನ್ನು ಕ್ರಿಶ್ಚಿಯನ್ ಪಾದ್ರಿಗಳಿಗೆ ಹಸ್ತಾಂತರಿಸಿದ್ದನು. ಆದ್ದರಿಂದ ಅವರ ಹೆಸರುಗಳನ್ನು ಬದಲಾಯಿಸಲಾಗಿತ್ತು. ಆದರೆ ಕೆಲ ತಿಂಗಳುಗಳ ನಂತರ ಮೂವರೂ ಮತ್ತೆ‌ ಇಸ್ಲಾಂ ಧರ್ಮಕ್ಕೆ ಹಿಂತಿರುಗಿದರು‌ ಎಂದು ಅಮಿತಾಭ್ ಅವರು ಈ ಪ್ರಶ್ನೆಗೆ ಸಬಂಧಿಸಿದ ಮಾಹಿತಿಯನ್ನು ನೀಡಿದ್ದಾರೆ.

Comments are closed.