ಕಳೆದ ಎರಡು ವರ್ಷದಿಂದ ಎಲ್ಲರ ಜೀವನದಲ್ಲಿ ಅಸ್ತವ್ಯಸ್ತ, ಆದರೆ ಈ ವರ್ಷ ಯಶಸ್ವಿಯಾಗಿ ಕೆಲಸ ಮಾಡಲು ಈ ಸರಳ ನಿಯಮಗಳನ್ನು ಪಾಲಿಸಿ ಲಕ್ಷ ಲಕ್ಷ ದುಡಿಯಿರಿ.

ನಮಸ್ಕಾರ ಸ್ನೇಹಿತರೇ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಜನ ವೃತ್ತಿಜೀವನದಲ್ಲಿ ಸಮಸ್ಯೆಯನ್ನು ಅನುಭವಿಸಿದ್ದಾರೆ. ಕೆಲವರು ಕೆಲಸವನ್ನೇ ಕಳೆದುಕೊಂಡರೆ ಇನ್ನು ಕೆಲವರು ತಮಗೆ ಬರುತ್ತಿರುವ ಸಂಬಳದಲ್ಲಿ ಕಡಿತವನ್ನು ಕೂಡ ಕಂಡಿದ್ದಾರೆ. ಇದರಿಂದ ಹಲವರು ಕೆಲಸವನ್ನು ಬಿಟ್ಟಿದ್ದು ಇದೆ. ಇದು ಹಲವರಿಗೆ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತೆ ಮಾಡಿತ್ತು. ಅಂದಹಾಗೆ ಹೊಸವರ್ಷ ಆರಂಭವಾಗಿದೆ. ಮಾರ್ಚ್ ತಿಂಗಳನ್ನು ಫೈನಾನ್ಸಿಯಲ್ ಎಂದೇ ಕರೆಯಲಾಗುತ್ತದೆ.

ಈ ತಿಂಗಳಿನಲ್ಲಿ ವೃತ್ತಿಜೀವನದಲ್ಲಿ ನೀವು ಎಷ್ಟು ಯಶಸ್ಸನ್ನು ಸಾಧಿಸುತ್ತಿರೋ, ಎಷ್ಟರಮಟ್ಟಿಗೆ ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿರೋ, ಅದರ ಮೇಲೆ ನಿಮ್ಮ ವೃತ್ತಿಜೀವನದ ಭವಿಷ್ಯ ನಿಂತಿದೆ. ಹಾಗಾಗಿ ತಜ್ಞರು ಹೇಳುವ ಈ ಕೆಳಗಿನ ಮಹತ್ವಪೂರ್ಣ ಸಲಹೆಗಳನ್ನು ನೀವು ಪಾಲಿಸಿದರೆ ನಿಮ್ಮ ವೃತ್ತಿ ಜೀವನವು ಅತ್ಯುತ್ತಮವಾಗುವುದರಲ್ಲಿ ಸಂಶಯವಿಲ್ಲ.

women working | ಕಳೆದ ಎರಡು ವರ್ಷದಿಂದ ಎಲ್ಲರ ಜೀವನದಲ್ಲಿ ಅಸ್ತವ್ಯಸ್ತ, ಆದರೆ ಈ ವರ್ಷ ಯಶಸ್ವಿಯಾಗಿ ಕೆಲಸ ಮಾಡಲು ಈ ಸರಳ ನಿಯಮಗಳನ್ನು ಪಾಲಿಸಿ ಲಕ್ಷ ಲಕ್ಷ ದುಡಿಯಿರಿ.
ಕಳೆದ ಎರಡು ವರ್ಷದಿಂದ ಎಲ್ಲರ ಜೀವನದಲ್ಲಿ ಅಸ್ತವ್ಯಸ್ತ, ಆದರೆ ಈ ವರ್ಷ ಯಶಸ್ವಿಯಾಗಿ ಕೆಲಸ ಮಾಡಲು ಈ ಸರಳ ನಿಯಮಗಳನ್ನು ಪಾಲಿಸಿ ಲಕ್ಷ ಲಕ್ಷ ದುಡಿಯಿರಿ. 3

ಮೊದಲನೆಯದಾಗಿ ಹೊಸದನ್ನು ಮಾಡುವುದು. ಅಂದರೆ ನಿಮ್ಮ ಕೆಲಸದಲ್ಲಿ ನಿಮಗೆ ವಹಿಸಿದ ಕೆಲಸವನ್ನು ಹೊರತುಪಡಿಸಿ ಬೇರೆ ಯಾವ ಕೆಲಸವನ್ನು ನೀವು ಮಾಡಬಹುದು, ಯಾವ ರೀತಿಯ ಹೊಸ ಅನ್ವೇಷಣೆಗಳನ್ನು ನೀವು ಮಾಡಬಹುದು, ನಿಮ್ಮ ಕಂಪನಿಗೆ ನಿಮ್ಮ ಹೆಸರು ತರಲು ಸಾಧ್ಯ ಎಂಬುದನ್ನು ನೀವು ಯೋಚಿಸಬೇಕು. ನಿಮ್ಮ ಕೆಲಸದ ಜೊತೆ ಈ ಕೆಲಸವನ್ನು ಮಾಡುವಾಗ ಸ್ವಲ್ಪ ಉತ್ತರದಂತೆ ಅನುಭವವಾದರೂ ಇದರ ಪರಿಣಾಮ ಮಾತ್ರ ನಿಮಗೆ ಖುಷಿ ಕೊಡುವಂತೆ ಇರುತ್ತದೆ.

ಮುಂದಿನದು ನಿಮ್ಮ ಆರೋಗ್ಯದ ಕಾಳಜಿ ಮಾಡಿ. ಕರೋನಾ ಬಂದಾಗಿನಿಂದ ಸಾಮಾನ್ಯವಾಗಿ ವರ್ಕ್ ಫ್ರಂ ಹೋಮ್ ಮಾಡುವವರೇ ಹೆಚ್ಚು. ಹೀಗೆ ಮಾಡುವಾಗ ಆಫೀಸ್ ನಲ್ಲಿ ತೆಗೆದುಕೊಳ್ಳುತ್ತಿದ್ದ ಬ್ರೇಕ್ ಅನ್ನು ಕೂಡ ತೆಗೆದುಕೊಳ್ಳದೇ ಕೆಲಸ ಮಾಡುವವರಿದ್ದಾರೆ. ಹಾಗೆ ಒಂದೇ ಸಮನೆ ಕುಳಿತು ಕೆಲಸ ಮಾಡುತ್ತಿದ್ದರೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಇಲ್ಲಿ ಸ್ಮಾರ್ಟ್ ವರ್ಕ್ ಮಾಡುವುದು ಅತ್ಯಗತ್ಯ.

ಮೂರನೆಯದಾಗಿ ಒತ್ತಡದಿಂದ ಹೊರಬನ್ನಿ. ನಿಮಗೆ ಕೆಲಸದ ಒತ್ತಡ ಅತಿ ಆಗಿದ್ದರೆ ಮುಜುಗರ ಪಟ್ಟುಕೊಳ್ಳದೆ ನಿಮ್ಮ ಮ್ಯಾನೇಜರ್ ಬಳಿ ಈ ವಿಷಯವನ್ನು ಚರ್ಚಿಸಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರಾಮಾಗಿದ್ದಾರೆ ಮಾತ್ರ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯ. ಕೆಲಸದಲ್ಲಿ ಒತ್ತಡ ಹೆಚ್ಚಾದರೆ ಕಿನ್ನತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ವಿಷಯಗಳಲ್ಲಿ ನೀವು ಜಾಗ್ರತೆ ವಹಿಸಬೇಕು. ಒತ್ತಡ ಹೆಚ್ಚಾದಾಗ ಯಾವುದಾದರೂ ಸಿನಿಮಾ ನೋಡಿ ಇದರಿಂದ ಮೈಂಡ್ ಫ್ರೆಶ್ ಆಗುತ್ತದೆ ಅಥವಾ ಸ್ನೇಹಿತರೊಂದಿಗೆ ಅಥವಾ ಮನೆಯವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ.

ಇನ್ನು ಎಲ್ಲದಕ್ಕೂ ಸಿದ್ಧವಾಗಿರುವುದು ನಾಲ್ಕನೆಯ ಮಹತ್ವಪೂರ್ಣ ಅಂಶ. ಅಂದರೆ ನಿಮಗೆ ಕೊಟ್ಟ ಕೆಲಸವನ್ನು ಹೇಗೆ ಮುಗಿಸಬೇಕು, ಯಾವಾಗ ಮುಗಿಸಬೇಕು ಎಂಬುದನ್ನು ಮೊದಲೇ ಯೋಚಿಸಿ ಇದರಿಂದ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ನಾಳೆ ಮಾಡಬೇಕಾದ ಕೆಲಸದ ಬಗ್ಗೆ ಒಂದು ಡೈರಿಯಲ್ಲಿ ಬರೆದಿಡಿ ಇದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ.

women working 2 | ಕಳೆದ ಎರಡು ವರ್ಷದಿಂದ ಎಲ್ಲರ ಜೀವನದಲ್ಲಿ ಅಸ್ತವ್ಯಸ್ತ, ಆದರೆ ಈ ವರ್ಷ ಯಶಸ್ವಿಯಾಗಿ ಕೆಲಸ ಮಾಡಲು ಈ ಸರಳ ನಿಯಮಗಳನ್ನು ಪಾಲಿಸಿ ಲಕ್ಷ ಲಕ್ಷ ದುಡಿಯಿರಿ.
ಕಳೆದ ಎರಡು ವರ್ಷದಿಂದ ಎಲ್ಲರ ಜೀವನದಲ್ಲಿ ಅಸ್ತವ್ಯಸ್ತ, ಆದರೆ ಈ ವರ್ಷ ಯಶಸ್ವಿಯಾಗಿ ಕೆಲಸ ಮಾಡಲು ಈ ಸರಳ ನಿಯಮಗಳನ್ನು ಪಾಲಿಸಿ ಲಕ್ಷ ಲಕ್ಷ ದುಡಿಯಿರಿ. 4

ಇನ್ನು ಕೊನೆಯದಾಗಿ ಸಂಬಂಧವನ್ನು ಗಟ್ಟಿಯಾಗಿಸುವುದು. ವೃತ್ತಿಜೀವನ ಎಂದಮೇಲೆ ಅಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಆದರೆ ನೀವು ಅನಗತ್ಯವಾಗಿ ಮ್ಯಾನೇಜರ್ ಸಹೋದ್ಯೋಗಿಗಳು ಅಥವಾ ಸೀನಿಯರ್ ಆಫೀಸರ್ ಜೊತೆಗೆ ಸಂಬಂಧವನ್ನು ಕೆಡಿಸಿಕೊಳ್ಳಬಾರದು. ಯಾವುದಾದರೂ ಸಮಸ್ಯೆ ಇದ್ದಲ್ಲಿ ಅವರೊಂದಿಗೆ ಮಾತನಾಡಿ ಅದನ್ನು ಪರಿಹರಿಸಿಕೊಳ್ಳಬೇಕು. ಸಹೋದ್ಯೋಗಿಗಳೊಂದಿಗೆ ಅಥವಾ ನಿಮ್ಮ ಟೀಮ್ ಲೀಡರ್ ನೊಂದಿಗೆ ಧನಾತ್ಮಕ ಆಲೋಚನೆಯನ್ನು ನಡೆಸುವುದರಿಂದ ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸ್ನೇಹಿತರೆ ಈ ಮೇಲಿನ ಎಲ್ಲಾ ಮಹತ್ವಪೂರ್ಣ ಅಂಶಗಳನ್ನು ಗಮನಿಸಿ ಅದರಂತೆಯೇ ನೀವು ವೃತ್ತಿಜೀವನದಲ್ಲಿ ನಡೆದುಕೊಂಡರೆ ಖಂಡಿತವಾಗಿಯೂ ಸಾಕಷ್ಟು ಯಶಸ್ಸನ್ನು ಗಳಿಸುತ್ತೀರಿ

Comments are closed.