ಬುಡಕಟ್ಟು ಮಕ್ಕಳಿಗೆ ಟೀಚರ್ ಆಗಿ ಹೋಗುವ ಇವರು, ಕಷ್ಟ ಪಟ್ಟು ಬಂದ ಸಂಬಳವನ್ನು ಏನು ಮಾಡುತ್ತಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಒಬ್ಬ ವ್ಯಕ್ತಿ ಏನನ್ನಾದರೂ ಕಲಿಯಲು ಅಥವಾ ಜೀವನದಲ್ಲಿ ಒಳ್ಳೆಯ ದಾರಿಯನ್ನು ಹಿಡಿದು ಒಬ್ಬ ಗುರುವಿನ ಅಗತ್ಯ ಖಂಡಿತ ಇರುತ್ತದೆ. ಹೇಗೆ ಜೀವನದಲ್ಲಿ ಮೊದಲ ಗುರು ತಾಯಿ ಆಗಿರುತ್ತಾರೆ ಜೀವನವನ್ನು ಸರಿಯಾದ ದಾರಿಗೆ ಕೊಂಡೊಯ್ಯಲು ನಿಮ್ಮ ತಂದೆ-ತಾಯಿಗಳು ಕೂಡ ನಂಬುವುದು ಗುರುಗಳನ್ನು. ಹಾಗಾಗಿ ನಮ್ಮ ಜೀವನದಲ್ಲಿ ನಮಗೆ ಗುರು ಕೇವಲ ಶಿಕ್ಷಣವನ್ನು ಮಾತ್ರವಲ್ಲದೆ ಜೀವನ ಮೌಲ್ಯವನ್ನು ಹಾಗೂ ಜೀವನವನ್ನು ಹೇಗೆ ನಡೆಸ ಬೇಕೆಂಬುದನ್ನು ಕೂಡ ನಮಗೆ ಸವಿಸ್ತಾರವಾಗಿ ಹೇಳುತ್ತಾರೆ.

ಇಲ್ಲೊಬ್ಬ ಶಿಕ್ಷಕಿ ಕೂಡ ಶಿಕ್ಷಕಿಯ ಕಾರ್ಯಕ್ಕಿಂತಲೂ ಹೆಚ್ಚಾಗಿ ಸಾಧನೆ ಮಾಡಿದ್ದಾರೆ ಅದು ಏನು ಎಂಬುದನ್ನು ನಾವು ನಿಮಗೆ ಪೂರ್ಣವಾಗಿ ವಿವರಿಸುತ್ತೇವೆ ಬನ್ನಿ. ಕೇರಳ ರಾಜ್ಯ ಸರ್ಕಾರ ಬುಡಕಟ್ಟು ಜನಾಂಗದ ಮಕ್ಕಳಿಗೆ ಶಿಕ್ಷಣವೆಂಬ ನೀತಿಯಡಿಯಲ್ಲಿ ಕಾಡಿನ ಮಧ್ಯದಲ್ಲಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸಿತು. ಈ ಶಾಲೆ ಕಾಡಿನ ಮಧ್ಯದಲ್ಲಿದ್ದು ಪಟ್ಟಣ ಕಿಂತಲೂ ತುಂಬಾ ದೂರದಲ್ಲಿದ್ದು ಇಲ್ಲಿಗೆ ನಡೆದುಕೊಂಡು ಹೋಗಬೇಕಾಗಿತ್ತು. ಹಾಗಾಗಿ ಇಲ್ಲಿ ಶಿಕ್ಷಣಕ್ಕೆ ಬಂದ ಶಿಕ್ಷಕರೆಲ್ಲ ರಾಜೀನಾಮೆ ಕೊಟ್ಟು ಹೋದರು.

ಆದರೆ ಉಷಾ ಕುಮಾರಿ ಎಂಬ ಶಿಕ್ಷಕಿ ಮಾತ್ರ ಈ ಕೆಲಸಕ್ಕೆ ಹಿಂದೇಟು ಹಾಕದೆ ಮುಂದೆ ನಡೆದರು. ಹೌದು ತಮ್ಮ ಮನೆಯಿಂದ ನದಿಯ ಬಳಿಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ನಂತರ ನದಿಯಿಂದ ಕಾಡಿನ ಒಳಗೆ ದೋಣಿಯಿಂದ ಹೋಗುತ್ತಿದ್ದರು. ದೋಣಿಯಿಂದ ಹೇಳಿದ್ದು ಕಾಡಿನ ಒಳಕ್ಕೆ ಒಂದು ಗಂಟೆಗಳ ಕಾಲ ನಡೆದು ಹೋಗುತ್ತಿದ್ದರು. ಈ ಕಾಡಿನಲ್ಲಿ ಕಾಡು ಪ್ರಾಣಿಗಳು ಇದ್ದರೂ ಸಹ ಯಾವುದೇ ಭಯವಿಲ್ಲದೆ ಕೋಲಿನ ಆಧಾರದಿಂದ ನಡೆದು ಶಾಲೆಗೆ ಬರುತ್ತಿದ್ದರು.

ಇಲ್ಲಿರುವ ಕೇವಲ 14 ಬುಡಕಟ್ಟು ಜನಾಂಗದ ಮಕ್ಕಳಿಗೋಸ್ಕರ ಇಷ್ಟೆಲ್ಲಾ ಕಷ್ಟಪಟ್ಟು ಉಷಾ ಕುಮಾರಿಯವರು ಬರುತ್ತಿದ್ದರು. ಈ ಮಕ್ಕಳಿಗೆ ಉಷಾ ಕುಮಾರಿಯವರು ಕೇವಲ ಶಿಕ್ಷಕಿಯಾಗಿ ಮಾತ್ರ ಆಗಿರದೆ ಅವರ ಬದುಕನ್ನು ಕೂಡ ಸುಧಾರಿಸಲು ಇವರು ಹಲವಾರು ಯೋಜನೆಗಳನ್ನು ಮಾಡಿದ್ದರು. ಹೌದು ಅವರಿಗೆ ಸರ್ಕಾರದಿಂದ ಸಂಬಳ ಬರೋದು ಲೇಟ್ ಆದರೂ ಸಹ ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರಗಳನ್ನು ನೀಡುತ್ತಿದ್ದರು.

ಅಲ್ಲದೆ ಮೊದಲು ಇವರು ಮರದ ಕೆಳಗಡೆ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದರು. ಸರ್ಕಾರ ಯಾವುದೇ ಅನುದಾನವನ್ನು ಇವರಿಗೆ ನೀಡಲಿಲ್ಲ. ನಂತರ ಅವರು ಏನು ಮಾಡಿದರು ಗೊತ್ತ. ಹೌದು ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡದಿದ್ದರೂ ಶಿಕ್ಷಕರ ಕುಮಾರಿಯವರು ತಮ್ಮ ಸ್ವಂತ ಹಣದಿಂದ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಒಂದು ಸೂರನ್ನು ನಿರ್ಮಾಣ ಮಾಡಿದರು.

ನೋಡಿ ಇಂತಹ ಶಿಕ್ಷಕರನ್ನು ಪಡೆದ ಆ ಮಕ್ಕಳೇ ಧನ್ಯರು. ಇಂತಹ ಶಿಕ್ಷಕರಿಂದಲೇ ತಾನೇ ಇಂದು ಭಾರತದಾದ್ಯಂತ ಅದೆಷ್ಟು ಒಳ್ಳೆಯ ಹಾಗೂ ದಕ್ಷ ಅಧಿಕಾರಿಗಳು ಬರುತ್ತಿರುವುದು. ಉಷಾ ಕುಮಾರಿ ಅವರು ತಮ್ಮ ಸ್ವಂತ ಹಣದಿಂದಲೇ ಮಕ್ಕಳಿಗೆ ಶಿಕ್ಷಣ ಊಟ ಹಾಗೂ ಕಲಿಯಲು ಒಂದು ಶಾಲೆಯನ್ನು ಕೂಡ ನಿರ್ಮಾಣ ಮಾಡಿರುವುದು ಬಹಳ ಪ್ರಶಂಸಾರ್ಹ ವಿಚಾರ. ಅಲ್ಲದೆ ಇವರು ಒಂದೊಮ್ಮೆ ಬರಲಾಗದಿದ್ದರೆ ತಮ್ಮ ಪ್ರತಿನಿಧಿಯನ್ನು ಮಕ್ಕಳಿಗೆ ಶಿಕ್ಷಣ ಬೋಧಿಸಲು ಕಳಿಸಿಕೊಡುತ್ತಿದ್ದರು. ಇವರ ಈ ಮಹಾನ್ ಕಾರ್ಯಕ್ಕೆ ಹಲವಾರು ಪ್ರಶಸ್ತಿ ಹಾಗೂ ಗೌರವ ಕೂಡ ಸಿಕ್ಕಿವೆ. ಶಿಕ್ಷಕಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ನಮಗೆ ತಿಳಿಸಿ.

Comments are closed.