ಕೆ ಎಂ ಎಫ್ ನಲ್ಲಿ ಖಾಲಿ ಇವೆ 460 ಕ್ಕೂ ಅಧಿಕ ಹುದ್ದೆಗಳು, ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಹೇಗೆ ಸಲ್ಲಿಸುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನೀವು ಸರಿಯಾದ ಹುದ್ದೆಗಾಗಿ ಹುಡುಕಾಟ ನಡೆಸುತ್ತಿದ್ದರೆ, ಕೆ ಎಂ ಎಫ್ ಹಲವು ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡುವುದರಲ್ಲಿ ನಿರತವಾಗಿದೆ. ಹಾಗಾಗಿ ನೀವೂ ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಇಲ್ಲಿನ ಹುದ್ದೆಗಳನ್ನು ಆಯ್ದುಕೊಂಡು ಅದಕ್ಕೆ ಅರ್ಜಿ ಸಲ್ಲಿಸಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಕೆಎಂಎಫ್‌ನಿಂದ ವಿವಿಧ 460 ಹುದ್ದೆಗಳನ್ನು ಮಾರ್ಚ್ ತಿಂಗಳ ಒಳಗಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೀತಲೀಕರಣ ಘಟಕವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಅವರು ಈ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಉತ್ತರ ಕರ್ನಾಟಕದ ಯುವಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

kmf | ಕೆ ಎಂ ಎಫ್ ನಲ್ಲಿ ಖಾಲಿ ಇವೆ 460 ಕ್ಕೂ ಅಧಿಕ ಹುದ್ದೆಗಳು, ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಹೇಗೆ ಸಲ್ಲಿಸುವುದು ಗೊತ್ತೇ??
ಕೆ ಎಂ ಎಫ್ ನಲ್ಲಿ ಖಾಲಿ ಇವೆ 460 ಕ್ಕೂ ಅಧಿಕ ಹುದ್ದೆಗಳು, ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಹೇಗೆ ಸಲ್ಲಿಸುವುದು ಗೊತ್ತೇ?? 2

ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಕ್ರೋಡೀಕರಣ ಕೆಎಂಎಫ್‌, ವರ್ಷಕ್ಕೆ ಸುಮಾರು 17 ಸಾವಿರ ಕೋಟಿಗೂ ಅಧಿಕ ವ್ಯವಹಾರ ಮಾಡುತ್ತಿದ್ದು ರಾಜ್ಯದ ಅಗ್ರಗಣ್ಯ ಸಹಕಾರ ಸಂಸ್ಥೆ ಎನಿಸಿದೆ. ರೈತರಿಗೆ ಕೆ ಎಂ ಎಫ್ ನಿಂದಾಗಿ ಅವರ ಹೈನೋದ್ಯಮಕ್ಕೆ ಉತ್ತಮ ಪ್ರೋತ್ಸಾಹ ದೊರೆತಂತಾಗಿದೆ. ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮತ್ತು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ರೈತರ ಕೈಯಲ್ಲಿದೆ ಎಂಬುದಾಗಿ ಜಾರಕಿಹೊಳಿ ಈಸಮಯದಲ್ಲಿ ಹೇಳಿದರು. ಇನ್ನು ದಿ. ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ನಂದಿನಿ ಪ್ಯಾಕೆಟ್ ಮೇಲೆ ಪ್ರಕಟಿಸಿ ಅವರಿಗೆ ಕೆ ಎಂ ಎಫ್ ಕಡೆಯಿಂದ ಗೌರವ ಸಲ್ಲಿಸಲಾಗಿದೆ ಎಂಬ ಹೆಮ್ಮೆಯ ವಿಷಯವನ್ನೂ ಮತ್ತೊಮ್ಮೆ ಜನರಿಗೆ ತಿಳಿಸಿದರು.

Comments are closed.