ಲವ್ ಮಾಕ್ಟೈಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮುಂದಿನ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ? ಟಾಪ್ ಕಿರುತೆರೆಯ ನಾಯಕಿಗೆ ಕುಲಾಯಿಸಿದ ಅದೃಷ್ಟ.

ನಮಸ್ಕಾರ ಸ್ನೇಹಿತರೇ ಇದೊಂದು ಹೊಸ ಟ್ರೆಂಡ್ ಎಂದೇ ಹೇಳಬಹುದು. ಸಿನಿಮಾಗಳಲ್ಲಿ ಸಾಕಷ್ಟು ಹೊಸ ಪ್ರಯೋಗಗಳು ನಡೆಯುತ್ತಿರುವುದರ ಜೊತೆಗೆ ಹೊಸ ಹೊಸ ನಟ ನಟಿಯರನ್ನೇ ಆ ಚಿತ್ರದಲ್ಲಿ ಅಭಿನಯಕ್ಕೆ ಆಯ್ಕೆ ಮಾಡಲಾಗುತ್ತದೆ. ಇನ್ನು ಈ ತರ ಸಿನಿಮಾಕ್ಕೆ ಬರುವ ನಟಿಯರು ಹಿಂದೆ ಯಾಉದೋ ಚಿತ್ರ ಮಾಡಿ ಫೇಮಸ್ ಆಗಿರಬೇಕು ಎಂದೇನು ಇಲ್ಲ. ಕಿರುತೆರೆಯಲ್ಲಿ ಉತ್ತಮವಾಗಿ ಅಭಿನಯಿಸುತಿರುವ ಕೆಲವು ನಟಿಯರು ಇಂದು ನೇರವಾಗಿ ಬೆಳ್ಳೆತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಂದು ಕಿರುತೆರೆಯಲ್ಲಿ ಫೇಮಸ್ ಆಗಿರುವ ಒಬ್ಬ ನಟಿ ಅತೀ ಕಡಿಮೆ ಅವಧಿಯಲ್ಲಿ ಬೆಳ್ಳೆತೆರೆಯಲ್ಲೂ ಕೂಡ ಉತ್ತಮ ನಟಿ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಯಾರು ಗೊತ್ತಾ ಆ ನಟಿ!

ಹೌದು ಸ್ನೇಹಿತರೆ ಕಿರುತೆರೆಯಲ್ಲಿ ಫೇಮಸ್ ಆಗಿರುವ ಈ ನಟಿ ಇದೀಗ ಬೆಳ್ಳೆತೆರೆಯನ್ನೂ ತಮ್ಮ ಖಾತೆ ತೆರೆದಿದ್ದಾರೆ. ಅವರೇ ನಟಿ ಮೇಘಾ ಶೆಟ್ಟಿ. ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಹಿಟ್ ಆಗಿರುವ ನಟಿ ಮೇಘಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಆಕ್ಟಿವ್ ಆಗಿರುವುದು ಕೂಡ ಇದಕ್ಕೆ ಒಂದು ಕಾರಣ! ಇನ್ನು ನಟಿ ಮೇಘಾ ತಮ್ಮ ಮೊದಲನೆ ಧಾರಾವಾಹಿಯಲ್ಲೇ ಉತ್ತಮ ನಟನೆಯಲ್ಲಿ ಹೆಸರು ಗಳಿಸಿದ್ದು ಈಗಾಗಲೇ ಸಿನಿಮಾರಂಗ ಪ್ರವೇಶಿಸಿದ್ದಾರೆ. ಚಂದನ್ ಶೆಟ್ಟಿಯವರ ಅಲ್ಬಂ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿರುವ ಮೇಘಾ, ಗೊಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತ್ರಿಬಲ್ ರೈಡರ್ ಚಿತ್ರದಲ್ಲಿ ನಾಯಕಿಯಾಗಿಯೂ ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ.

ಈ ಖುಷಿಯ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ನಟಿ ಮೇಘಾ ಶೆಟ್ಟಿ. ಲವ್ ಮಾಕ್ಟೆಲ್ ನಲ್ಲಿ ಸಕ್ಕತ್ ಸಕ್ಸೆಸ್ ಕಂಡ, ನಟ ಡಾರ್ಲಿಂಗ್ ಕೃಷ್ಣಅವರ ಮುಂದಿನ ಚಿತ್ರಕ್ಕೆ ನಟಿ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರಂತೆ. ಇಬ್ಬರು ನಾಯಕಿಯರು ಇರುವ ಈ ಚಿತ್ರದಲ್ಲಿ ನಿಶ್ವಿಕಾ ಗೌಡ ಹಾಗೂ ಮೇಘಾ ಶೆಟ್ಟಿ ಡಾರ್ಲಿಂಗ್ ಕೃಷ್ಣ ಜೊತೆ ತೆರೆಹಂಚಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದ ಟೈಟಲ್ ಅಧಿಕೃತವಾಗಿ ಬಿಡುಗಡೆಯಾಗಬೇಕಷ್ಟೇ! ಇನ್ನು ತಮ್ಮ ಮೊದಲನೇ ಚಿತ್ರ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Comments are closed.