ಹೊಸ ಉದ್ಯಮ ಆರಂಭಿಸಿದ ಖ್ಯಾತ ನಟಿ ಕೃಷಿ ತಾಪಂಡ, ಸಿನಿಮಾ ಫೀಲ್ಡ್ ಬಿಡಲು ಯೋಜನೆ ಹಾಕೊಂಡ್ರ?? ಯಾವ ಉದ್ಯಮ ಗೊತ್ತೇ??

ನಮಸ್ಕಾರ ಸ್ನೇಹಿತರೇ ಲಾಕ್ ಡೌನ್ ಅಸಮಯದಲ್ಲಿ ಹಲವಾರು ಜನರಿಗೆ ನಷ್ಟವಾಗಿತ್ತು, ಹಲವರ ಜೀವನ ಅಸ್ತವ್ಯಸ್ತವಾಗಿತ್ತು, ಇಂಥ ಹಲವಾರು ಸಮಸ್ಯೆಗಳ ನಡುವೆ ಕೆಲ ಹೊಸ ಉದ್ಯಮಗಳೂ ಹುಟ್ಟಿಕೊಂಡವು. ಅದರಲ್ಲೂ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಮಾಡುವ ಯೋಚನೆ ಹಾಕಿಕೊಂಡರು. ಅದರಂತೆ ಮನೆಯಲ್ಲಿಯೇ ಕುಳಿತು ಜಗತ್ತೇ ಗುರುತಿಸುವ ಮಟ್ಟಿಗೆ ಸ್ವ ಉದ್ಯೋಗಗಳನ್ನು ಮಾಡಿದ್ದು ನಮ್ಮ ಕಣ್ಮುಂದಿದೆ.

ಇನ್ನು ಸಿನಿ ಕ್ಷೇತ್ರದಲ್ಲಿ ನಟನೆಯ ಜೊತೆಗೆ ಹಲವಾರು ನಟ ನಟಿಯರು ತಮ್ಮದೇ ಆದ ಇತರ ಉದ್ದಿಮೆಗಳನ್ನೂ ಹೊಂದಿರುತ್ತಾರೆ. ಸಿನಿಮಾ ಚಿತ್ರೀಕರಣದ ಫ್ರೀ ಸಮಯದಲ್ಲಿ ಬೇರೆ ಉದ್ದಿಮೆಗಳನ್ನೂ ಮಾಡುತ್ತಾರೆ. ಇನ್ನು ನಟ ನಟಿಯರು ಜಿಮ್, ಹೋಟೆಲ್ ಉದ್ದಿಮೆ, ಪ್ರೊಡಕ್ಷನ್ ಹೌಸ್, ಫಾರ್ಮಿಂಗ್ ಹೀಗೆ ಹಲವಾರು ಉದ್ದಿಮೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ನಟಿ ಕೃಷಿ ತಾಪಂಡ ಕೂಡ ಸ್ವಾವಲಂಬಿ ಮಹಿಳೆಯರ ಸಾಲಿಗೆ ಸೇರಲಿದ್ದಾರೆ.

ಹೌದು ಎಂಟ್ರಪ್ರೆನರ್ ಆಗಿ ಕೃಷಿ ಉದ್ದಿಮೆ ಮಡುತ್ತಿದ್ದಾರೆ. ’ಬಿರು’ ಎನ್ನುವ ಬಟ್ಟೆ ಬ್ರ್ಯಾಂಡ್ ನ್ನು ಪರಿಚಯಿಸುತ್ತಿದ್ದಾರೆ ಕೃಷಿ. ಇವರ ಈ ತಂಡದಲ್ಲಿ ಹನ್ನೆರಡು ಮಂದಿ ಇದ್ದಾರಂತೆ. ಫಾಶನ್ ಡಿಸೈನರ್ ನಿಖಿತಾ ಭರಣ ಕೃಷಿಯವರ ಟೀಮ್ ನಲ್ಲಿದ್ದಾರೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉಡುಪುಗಳನ್ನು ಗ್ರಾಹಕರಿಗೆ ತಲುಪಿಸುವ ಇರಾದೆ ಹೊಂದಿದೆ ಕೃಷಿಯವರ ’ಬಿರು’ ತಂಡ. ಕೃಷಿ ತಾಮಂಡ ತಮಿಳು ಚಿತ್ರರಂಗದಿಂದ ಕನ್ನಡಕ್ಕೆ ಬಂದವರು. ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದು ಬಿಗ್ ಬಾಸ್ ನಲ್ಲಿಯೂ ಕೂಡ ಭಾಗವಹಿಸಿದ್ದರು. ಅಕೀರ, ಭರಾಟೆ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಎರದು ಕನಸು, ಕಹಿ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ, ಸದ್ಯ ಅವರ ಹೊಚ್ಚ ಹೊಸ ಸಿನಿಮಾ ಲಂಕೆ ಬಿಡುಗಡೆ ಕಂಡಿದೆ.

Comments are closed.