ನೀವು ಸಾಕಷ್ಟು ಬಾರಿ ಭೇಟಿ ಮಾಡಿದ್ದರೂ ಕೂಡ ನಿಮಗೆ ತಿಳಿಯದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ 12 ವಿಷಯಗಳು ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳ. ಕುಕ್ಕೆ ದೇಗುಲಕ್ಕೆ ಕೇವಲ ಕರ್ನಾಟಕ ಮಾತ್ರವಲ್ಲದೇ ಪಕ್ಕದ ಕೇರಳ, ತಮಿಳುನಾಡು,.ಆಂದ್ರ ಪ್ರದೇಶದಿಂದಲೂ ಸಹ ಜನ ಬರುತ್ತಾರೆ. ಈ ಪವಿತ್ರ ದೇವಾಲಯವು ನಾಗದೋಷಕ್ಕೆ ಸಂಭಂದಿಸಿದಂತಹ ದೋಷಗಳನ್ನ ನಿವಾರಿಸಲು ಪ್ರಖ್ಯಾತಿಯನ್ನು ಪಡೆದಿದೆ. 5000 ವರ್ಷಕ್ಕೂ ಅಧಿಕ ಇತಿಹಾಸವಿರುವ ಈ ದೇಗುಲದ 12 ಪ್ರಾಮುಖ್ಯತೆಗಳನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಈ ದೇವಾಲಯವು ಶಿವ ಮತ್ತು ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಒಪ್ಪಿತವಾಗಿದ್ದು, ಇಲ್ಲಿ ಕಾರ್ತಿಕೇಯನನ್ನು ಸುಬ್ರಹ್ಮಣ್ಯನ ರೂಪದಲ್ಲಿ ಪೂಜಿಸಲಾಗುತ್ತಿದೆ. ದೈವಾಂಶ ಸಂಭೂತ ಸರ್ಪಗಳು ಗರುಡಗಳಿಂದ ಬೆದರಿಕೆಗೊಳಗಾದಾಗ, ಸುಬ್ರಹ್ಮಣ್ಯನ ಆಶ್ರಯದಲ್ಲಿ ಇಲ್ಲಿ ಬಂದು ವಾಸವಾದವು ಎಂಬ ಐತಿಹ್ಯವಿದೆ. ಇನ್ನು ಎರಡನೇದಾಗಿ ದೇವಾಲಯದ ಮತ್ತೊಂದು ಆಕರ್ಷಣೆ ಎಂದರೇ, ಅದು ಕುಮಾರ ಪರ್ವತದಿಂದ ಸುತ್ತುವರಿದೆ. ಕುಮಾರ ಪರ್ವತ ಚಾರಣಿಗರ ಅತಿ ನೆಚ್ಚಿನ ಸ್ಥಳವಾಗಿದೆ.

ಮೂರನೆಯದಾಗಿ ಕುಮಾರ ಪರ್ವತ ಹಿನ್ನಲೆಯಲ್ಲಿರುವ ಕಾರಣ ದೇವಾಲಯ ಅತ್ಯಂತ ಸೊಬಗಿನಿಂದ ಕೂಡಿದೆ. ಹಿಂದೆ ಇರುವ ಪರ್ವತಗಳು ಶೇಷ ರೂಪದಲ್ಲಿದ್ದು , ಆರು ತಲೆಯ ಹಾವಿನ ಆಕಾರದಲ್ಲಿರುವಂತೆ ಕಾಣುತ್ತದೆ. ಇನ್ನು ನಾಲ್ಕನೆಯದಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ಈ ಹಿಂದೆ ಈ ಪಟ್ಟಣದಲ್ಲಿ ಆದಿ ಗುರುಗಳಾದ ಶಂಕರಾಚಾರ್ಯರು ಸಹ ಸ್ವಲ್ಪ ದಿನಗಳ ಮಟ್ಟಿಗೆ ನೆಲೆಸಿದ್ದರು ಎಂಬ ಪ್ರತೀತಿ ಇದೆ. ಐದನೆಯದಾಗಿ ಪವಿತ್ರ ನದಿಯಾದ ಧಾರಾ ನದಿಯ ದಂಡೆಯ ಮೇಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇದೆ. ಧಾರಾ ನದಿಯು ಕುಮಾರ ಪರ್ವತದಲ್ಲಿ ಹುಟ್ಟುವ ಕಾರಣ, ಕುಮಾರಧಾರಾ ಎಂಬ ಹೆಸರಿದೆ.

ಇನ್ನು ಆರನೆಯದಾಅಗಿ ದೇವಸ್ಥಾನದ ಆವರಣದಲ್ಲಿ ಬೆಳ್ಳಿಯಿಂದ ಆವೃತವಾದ ಬೃಹತ್ ಗರುಡ ಸ್ತಂಭವೊಂದಿದೆ. ಒಳಗಡೆ ಗರ್ಭಗುಡಿಯಲ್ಲಿರುವ ವಾಸುಕಿಯ ಉಸಿರಾಟದಿಂದ ಹೊರಬರುವ ವಿಷಕಾರಿ ಗಾಳಿಯಿಂದ ಭಕ್ತರನ್ನು ರಕ್ಷಿಸಲು ಇದು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಏಳನೆಯದಾಗಿ ಇಲ್ಲಿ ಹಂತಹಂತವಾಗಿ ದೇವರನ್ನ ನೋಡುವ ವಿಶೇಷ ಅವಕಾಶ ಲಭ್ಯವಿದೆ. ಮೊದಮೊದಲು ವಾಸುಕಿ ಹಾಗೂ ಸುಬ್ರಹ್ಮಣ್ಯ ದೇವರನ್ನ ನೋಡಿದರೇ, ನಂತರ ಮುಂದಿನ ಹಂತದಲ್ಲಿ ಶೇಷ ದೇವರನ್ನು ನೋಡಬಹುದು. ಇನ್ನು ಎಂಟನೆಯದಾಗಿ ಈ ದೇವಾಲಯದ ಗರ್ಭಗುಡಿಯನ್ನ ಕೇರಳ ಮಾದರಿಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಪವಿತ್ರ ಮಣ್ಣನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಒಂಬತ್ತನೇಯದಾಗಿ ಆರಂಭದಲ್ಲಿ ಈ ದೇವಸ್ಥಾನದ ಅರ್ಚಕರಾಗಿ ತುಳು ಬ್ರಾಹ್ಮಣರಾದ ಮೊರೋಜ ಕುಟುಂಬವು ಇತ್ತು. ನಂತರದ ದಿನಗಳಲ್ಲಿ ಮಾಧ್ವ ಬ್ರಾಹ್ಮಣರು ಈ ದೇವಾಲಯದ ಪೂಜಾಕೈಂಕರ್ಯಗಳನ್ನ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಹತ್ತನೆಯದಾಗಿ ಇಲ್ಲಿ ಪ್ರಮುಖವಾಗಿ ಎರಡು ಪೂಜೆಗಳು ಹೆಚ್ಚು ಹೆಸರುವಾಸಿಯಾಗಿವೆ. ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರ ಪೂಜೆಗಳು ಅತಿ ಮಹತ್ವವಾಗಿವೆ.

ಇನ್ನು ಹನ್ನೊಂದನೆಯದಾಗಿ ಕೇವಲ ಪೂಜೆ ಮಾತ್ರವಲ್ಲದೇ, ಈ ದೇವಾಲಯದಲ್ಲಿ ಮಡೆ ಸ್ನಾನ, ಮಹಾರಥೋತ್ಸವ, ರಂಗಪೂಜೆ, ಮತ್ತು ಕಾರ್ತೀಕ ಮಾಸದ ದೀಪೋತ್ಸವಗಳು ಹೆಚ್ಚು ಪ್ರಸಿದ್ಧಿಯಾಗಿವೆ. ಇನ್ನು ಕೊನೆಯದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವೂ ಕರ್ನಾಟಕದ ಅತಿ ಶ್ರೀಮಂತ ದೇವಾಲಯಗಳಲ್ಲಿ ಸಹ ಒಂದು ದೇವಸ್ಥಾನವಾಗಿದೆ. ವಾರ್ಷಿಕವಾಗಿ ಅತಿ ಹೆಚ್ಚು ಇಲ್ಲಿ ಬಂದು ದರ್ಶನ ಪಡೆಯುತ್ತಾರೆ. ಇಲ್ಲಿ ದೇವರ ದರ್ಶನ ಮಾಡಿದ ನಂತರ, ಸೀದಾ ಮನೆಗೆ ಹೋಗಬೇಕು. ಬೇರೆ ಕಡೆ ಹೋದರೇ, ಫಲ ಪ್ರಾಪ್ತಿಯಾಗುವುದಿಲ್ಲ ಎಂಬ ಪ್ರತೀತಿಯೂ ಸಹ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.