ಒಂದು ಕಾಲದ ಜನಪ್ರಿಯ ನಟಿ ಲೈಲಾ ರವರಿಗೆ ಇದೀಗ ಯಾವ ಪರಿಸ್ಥಿತಿ ಬಂದಿದೆ ನೋಡಿ, ಕಣ್ಣಂಚಲ್ಲಿ ನೀರು ಬರುತ್ತದೆ.

ನಮಸ್ಕಾರ ಸ್ನೇಹಿತರೇ ನಾವು ಚಿತ್ರರಂಗದಲ್ಲಿರುವ ನಟ-ನಟಿಯರ ಕುರಿತಂತೆ ಸದಾ ತಪ್ಪುಕಲ್ಪನೆಯನ್ನು ಹೊಂದಿರುತ್ತೇವೆ. ಅದೇನೆಂದರೆ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಅವರಿಗೆ ಏನು ಕಷ್ಟ ಖಂಡಿತವಾಗಿ ಸುಖದ ಸುಪ್ಪತಿಗೆಯಲ್ಲಿ ಇರುತ್ತಾರೆ ಎಂದು. ಆದರೆ ಅವರ ಜೀವನವನ್ನು ಹತ್ತಿರದಿಂದ ಬಲ್ಲವರಿಗೆ ಹಾಗೂ ಅವರಿಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ. ಹೌದು ಸ್ನೇಹಿತರೆ ಇವತ್ತು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿ ಅಂದಿನ ಕಾಲದಲ್ಲಿ ಜನಪ್ರಿಯ ಪಡೆದುಕೊಂಡಿರುವ ಲೈಲಾ ಅವರ ಕುರಿತಂತೆ.

ಹೌದು ಸ್ನೇಹಿತರೆ ಲೈಲಾ ರವರು ಹಲವಾರು ಭಾಷೆಗಳಲ್ಲಿ ನಟಿಸಿ ತಮ್ಮ ಮುಗ್ಧ ನಟನೆಯ ಮೂಲಕ ಎಲ್ಲರ ಮನಗೆದ್ದಂತಹ ಪ್ರತಿಭಾನ್ವಿತೆ. ಇನ್ನು ಲೈಲಾ ರವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ತಂದೆಗೆ ತಕ್ಕ ಮಗ ಹಾಗೂ ನವರಸ ನಾಯಕ ಜಗ್ಗೇಶ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ರಾಮಕೃಷ್ಣ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಈ ಎರಡು ಚಿತ್ರಗಳಲ್ಲಿ ಕೂಡ ತಮ್ಮ ಮುಗ್ಧ ಪಾತ್ರದ ಮೂಲಕ ಕನ್ನಡಿಗರ ಹೃದಯವನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಇನ್ನು ಇವರು 2006ರಲ್ಲಿ ಇರಾನ್ ಮೂಲದ ಬ್ಯುಸಿನೆಸ್ ಮ್ಯಾನ್ ಮೆಹದಿ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದಕ್ಕಿಂತ ಮೊದಲು ಇವರು ಎಂಟು ವರ್ಷಗಳ ಕಾಲ ಡೇಟಿಂಗ್ ನಡೆಸಿರುತ್ತಾರೆ ಹಾಗೂ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಕೂಡ ಇರುತ್ತಾರೆ.

ಇನ್ನು ಮದುವೆಯಾದ ಕೆಲವೇ ವರ್ಷಗಳಲ್ಲಿ ಇವರು ಇಬ್ಬರು ಮಕ್ಕಳನ್ನು ಕೂಡ ಪಡೆಯುತ್ತಾರೆ‌. ಆದರೆ ಚಿತ್ರರಂಗದಿಂದ ದೂರವಾಗಿ ದುಬೈನಲ್ಲಿ ನೆಲೆಸಿದ ನಂತರ ಇವರ ಪತಿಯ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಉಂಟಾಗಿ ಇವರು ಬೀದಿಗೆ ಬರಬೇಕಾ ದಂತಹ ಪರಿಸ್ಥಿತಿ ಬರುತ್ತದೆ. ನಂತರ ದುಬೈನಲ್ಲಿದ್ದ ಭಾರತೀಯರ ನೆರವಿನಿಂದಾಗಿ ಇಂದು ನೆಮ್ಮದಿಯ ಜೀವನವನ್ನು ಇವರುಗಳು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಮಿಂಚಿದ ನಟಿ ಇಂದು ಇಂತಹ ಜೀವನವನ್ನು ನಡೆಸುತ್ತಿರುವುದು ಖಂಡಿತವಾಗಿ ವಿಪರ್ಯಾಸ.

Comments are closed.