ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಲಕ್ ಹೊಂದಿರುವ ಸ್ಪರ್ದಿ ಯಾರು ಗೊತ್ತಾ?? ಲಕ್ ಈಗ ಬದಲಾಗುತ್ತಿದೆ.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈಗಾಗಲೇ ಪ್ರೇಕ್ಷಕರು ಊಹಿಸದಂತಹಘಟನೆಗಳು ಸಾಕಷ್ಟು ನಡೆದು ಹೋಗಿವೆ, ಪ್ರತಿ ಬಾರಿಯೂ ಕೂಡ ಪ್ರೇಕ್ಷಕರು ತಮ್ಮಿಷ್ಟದ ಸ್ಪರ್ಧಿಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಸ್ಪರ್ಧಿಗಳು ಮನೆಯಲ್ಲಿ ಉಳಿಯುತ್ತಾರೆ ಎಂಬ ಲೆಕ್ಕಾಚಾರಗಳನ್ನು ಎಲಿಮಿನೇಷನ್ ಪ್ರಕ್ರಿಯೆಗೂ ಮುನ್ನ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಪ್ರೇಕ್ಷಕರ ಲೆಕ್ಕಾಚಾರಗಳು ಬಹುತೇಕ ಬಾರಿ ನಿಜವಾಗಲೂ ಸಾಧ್ಯವೇ ಇಲ್ಲ.

ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿರುವ ಹೆಸರುಗಳು ಬಹಳ ಸುಲಭವಾಗಿ ಎಲಿಮಿನೇಟ್ ಆಗಬಹುದು ಅಥವಾ ಕೇಳದೆ ಇರುವ ಹೆಸರು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಮೂಲಕ ಮನೆಯಲ್ಲಿ ಉಳಿದು ಕೊಳ್ಳಬಹುದು. ಇನ್ನು ಕೆಲವರಿಗೆ ಅದೃಷ್ಟ ತಾನಾಗಿಯೇ ಹುಡುಕಿಕೊಂಡು ಬಂದು ಪ್ರೇಕ್ಷಕರು ಇಷ್ಟಪಡದೆ ಇದ್ದರೂ ಕೂಡ ಮನೆಯಲ್ಲಿ ಉಳಿದು ಕೊಳ್ಳಬಹುದು. ಹೌದು ಹೀಗೆ ಉಳಿದುಕೊಂಡರೆ ಅದನ್ನು ಲಕ್ಕಿ ಎಂದು ಕರೆಯುತ್ತಾರೆ ಆ ಲಕ್ ಇದ್ದದ್ದು ನಿಜಕ್ಕೂ ಶಮಂತ್ ರವರಿಗೆ ಎಂದರೆ ತಪ್ಪಾಗಲಾರದು.

ಆರಂಭದ ದಿನಗಳಲ್ಲಿ ಶಮಂತ್ ರವರು ಯಾರಿಗೂ ಕೂಡ ಹೆಚ್ಚಾಗಿ ತಿಳಿದಿರಲಿಲ್ಲ ಈ ಸಮಯದಲ್ಲಿ ಅವರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಾಗಿದ್ದು ಆದರೆ ಕ್ಯಾಪ್ಟನ್ ಆಗುವ ಮೂಲಕ ಇಮ್ಮ್ಯೂನಿಟಿ ಪಡೆದು ಕೊಂಡಿದ್ದರು, ಇನ್ನು ತದ ನಂತರ ಕೆಲವು ವಾರಗಳ ಕಾಲ ಬಚಾವಾದರು ಇನ್ನೇನು ಎಲಿಮಿನೇಟ್ ಆದರು ಎನ್ನುವಷ್ಟರಲ್ಲೇ ವೈಜಯಂತಿ ಅಡಿಗರು ಸಮಂತ ರವರನ್ನು ಉಳಿಸಿದರು, ಇದಾದ ಬಳಿಕ ಈ ವಾರ ಶಮಂತ್ ಅವರು ಎಲಿಮಿನೇಷನ್ ಇಂದ ಬಚಾವಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಗೋಲ್ಡನ್ ಪಾಸ್ ಟಾಸ್ಕ್ ನಲ್ಲಿ ಶಮಂತ್ ರವರು ವೇಗವಾಗಿ ಓಡಿದರೆ ಪಾಸ್ ಕಳೆದುಕೊಳ್ಳುತ್ತೇನೆ ಎಂದು ತಿಳಿದಿದ್ದರೂ ಕೂಡ ವೇಗವಾಗಿ ಓಡುವ ಮೂಲಕ ಪ್ರೇಕ್ಷಕರ ಮನಗೆದ್ದದ್ದಾರೆ, ಈ ಮೂಲಕ ಇಷ್ಟು ದಿವಸ ಲಕ್ ನಲ್ಲಿ ಉಳಿದುಕೊಂಡಿದ್ದ ಶಮಂತ್ ಇನ್ನು ಮುಂದೆ ಆ ಲಕ್ ಇಲ್ಲದಿದ್ದರೂ ಕೂಡ ತಮ್ಮ ಆಟದ ವೈಖರಿಯ ಮೂಲಕ ಉಳಿದು ಕೊಳ್ಳುವ ಸಾಧ್ಯತೆ ಇದೆ.

Comments are closed.