ಮಗನ ಭವಿಷ್ಯಕ್ಕಾಗಿ ದೊಡ್ಡ ತ್ಯಾಗ ಮಾಡಲು ಮುಂದಾದ ಖ್ಯಾತ ನಟ ಮಾಧವನ್, ನೀವು ಬಿಡಿ ಗ್ರೇಟ್ ಎಂದ ನೆಟ್ಟಿಗರು. ಅಷ್ಟಕ್ಕೂ ಮಾಧವನ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಬಹುಬೇಡಿಕೆಯ ನಾಯಕನಟನಾಗಿ ಹಾಗೂ ಪೋಷಕ ನಟನಾಗಿ ನಟಿಸಿರುವವರು ಆರ್ ಮಾಧವನ್. ಆರ್ ಮಾಧವನ್ ರವರ ನಟನೆಯ ಮಟ್ಟಿಗೆ ಯಾವುದೇ ಅನುಮಾನಗಳು ಬೇಡ ಯಾಕೆಂದರೆ ಭಾರತ ಕಂಡಂತಹ ಶ್ರೇಷ್ಠ ನಟರಲ್ಲಿ ಮಾಧವನ್ ರವರು ಕಾಣಸಿಗುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಕಾಲದಲ್ಲಿ ಡಾಕ್ಟರ್ ಮಗ ಡಾಕ್ಟರ್ ಆಗಬೇಕು ಇಂಜಿನಿಯರ್ ಮಗ ಇಂಜಿನಿಯರ್ ಆಗಬೇಕು ಚಲನಚಿತ್ರ ನಟ ನಟ ಆಗಬೇಕು ಎನ್ನುವ ವಾಡಿಕೆಗಳು ಸಮಾಜದಲ್ಲಿದ್ದವು.

ಮಕ್ಕಳಿಗೆ ಒಂದೋ ಅವರ ತಂದೆ-ತಾಯಿಯರು ಮಾಡಿಕೊಂಡು ಬಂದಂತಹ ಕೆಲಸವನ್ನು ಮಾಡಬೇಕಾಗಿತ್ತು ಇಲ್ಲವೇ ತಂದೆ-ತಾಯಿಯರು ಹೇಳಿದಂತಹ ಕೆಲಸ ಮಾಡಬೇಕಾಗಿತ್ತು. ಆದರೆ ಮಾಧವನ್ ರವರ ವಿಚಾರದಲ್ಲಿ ಹಾಗಲ್ಲ ಅವರ ಮಗ ಇಷ್ಟಪಟ್ಟಿರುವ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಮಾಧವನ್ ವರ ಮಗ ವೇದಾಂತ್ ಚಿತ್ರರಂಗಕ್ಕೆ ಕಾಲಿಡುತ್ತಾನೆ ಎಂಬ ಸುದ್ದಿಗಳು ಕೇಳಿಬಂದಿತ್ತು. ಆದರೆ ಈಗ ವೇದಾಂತ್ ರವರು ಬೇರೆಯದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ವೇದಾಂತ ರವರು ಕ್ರೀಡಾಕ್ಷೇತ್ರದಲ್ಲಿ ಅಂದರೆ ಈಜುವಿಕೆಯಲ್ಲಿ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯಾರು ಕೂಡ ಊಹಿಸಲಾಗದಂತಹ ಸಾಧನೆಗಳನ್ನು ಮಾಡಿದ್ದಾರೆ.

r maadhavan | ಮಗನ ಭವಿಷ್ಯಕ್ಕಾಗಿ ದೊಡ್ಡ ತ್ಯಾಗ ಮಾಡಲು ಮುಂದಾದ ಖ್ಯಾತ ನಟ ಮಾಧವನ್, ನೀವು ಬಿಡಿ ಗ್ರೇಟ್ ಎಂದ ನೆಟ್ಟಿಗರು. ಅಷ್ಟಕ್ಕೂ ಮಾಧವನ್ ಮಾಡಿದ್ದೇನು ಗೊತ್ತೇ??
ಮಗನ ಭವಿಷ್ಯಕ್ಕಾಗಿ ದೊಡ್ಡ ತ್ಯಾಗ ಮಾಡಲು ಮುಂದಾದ ಖ್ಯಾತ ನಟ ಮಾಧವನ್, ನೀವು ಬಿಡಿ ಗ್ರೇಟ್ ಎಂದ ನೆಟ್ಟಿಗರು. ಅಷ್ಟಕ್ಕೂ ಮಾಧವನ್ ಮಾಡಿದ್ದೇನು ಗೊತ್ತೇ?? 2

ಕೇವಲ 16 ವರ್ಷದಲ್ಲಿ ವೇದಾಂತ್ ರವರು ಈ ತರಹದ ಸಾಧನೆ ಮಾಡುತ್ತಿರುವುದು ಅವರ ತಂದೆಯಾಗಿರುವ ಮಾಧವನ್ ರವರು ಹೆಮ್ಮೆಪಡುವಂತಹ ವಿಚಾರವಾಗಿದೆ. ಇನ್ನು ಮಗ ಮೆಡಲ್ ಗೆದ್ದಾಗಲೆಲ್ಲ ಮಾಧವನ್ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಇನ್ನು ಈಗ ಮಗನಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. 2026 ಒಲಿಂಪಿಕ್ಸ್ ಗಾಗಿ ಮಗನನ್ನು ಈಜುವಿಕೆಯಲ್ಲಿ ತಯಾರು ಮಾಡುವಲ್ಲಿ ಮಾಧವನ್ ರವರು ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ. ಮಹಾಮಾರಿಯ ಕಾರಣದಿಂದಾಗಿ ಭಾರತದಲ್ಲಿ ದೊಡ್ಡ ಈಜುಕೊಳದ ನಿಷೇಧವಿದ್ದು ಮಗನೊಂದಿಗೆ ಹಾಗೂ ಪತ್ನಿಯೊಂದಿಗೆ ಈಗ ದುಬೈಗೆ ಹೋಗಿದ್ದಾರೆ. ಅಲ್ಲಿ ಉತ್ತಮ ತರಬೇತುದಾರರು ಹಾಗೂ ದೊಡ್ಡ ಈಜುಕೊಳದ ಲಭ್ಯತೆ ಇದ್ದು ಮಗನಿಗೆ ಉತ್ತಮ ಮಟ್ಟದ ಟ್ರೈನಿಂಗ್ ನೀಡುವ ಯೋಜನೆ ಮಾಧವನ್ ರವರದ್ದಾಗಿದ್ದು ಈಗಾಗಲೇ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳುತ್ತಿಲ್ಲ. ಮಗನಿಗಾಗಿ ಇಷ್ಟೊಂದು ತ್ಯಾಗ ಮಾಡಿರುವ ಮಾಧವನ್ ರವರಿಗೆ ನಮ್ಮ ಸಲಾಂ.

Comments are closed.