ಡಯಾಬಿಟಿಸ್ ಪ್ರಮಾಣ ಕಡಿಮೆ ಇರಲು, ಮನೆಯಲ್ಲೇ ಮಾಡಿಕೊಳ್ಳಬಹುದಾದ 5 ಪದಾರ್ಥಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಊರ್ಫ್ ಡಯಾಬಿಟಿಸ್ , ಈಗ ಎಲ್ಲಾ ಜನರಲ್ಲೂ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ. ಜೀವನಶೈಲಿ, ಆಹಾರ ಕ್ರಮ, ರಾತ್ರಿ ಪಾಳಿ ಕೆಲಸ, ಸರಿಯಾದ ದೈಹಿಕ ಚಟುವಟಿಕೆ ಇಲ್ಲದಿರುವಿಕೆ, ಈ ಎಲ್ಲಾ ಕಾರಣಗಳಿಂದ ಹಲವಾರು ಜನ ಬಹುಬೇಗ ಡಯಾಬಿಟಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ರೋಗಕ್ಕೆ ಇನ್ಸುಲಿನ್ ತೆಗೆದುಕೊಳ್ಳುವ ಬದಲು, ಮನೆಯಲ್ಲೇ ಸೇವಿಸಬಹುದಾದ ಟಾಪ್ -5 ಆಹಾರಗಳು ಯಾವುವು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಬೇಳೆಕಾಳುಗಳ ಪದಾರ್ಥ – ದ್ವಿದಳ ಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ನಿಧಾನವಾಗಿ ಬಿಡುಗಡೆಯಾಗುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನ ಕಡಿಮೆ ಮಾಡುತ್ತದೆ. ಹಾಗಾಗಿ ಆಹಾರದಲ್ಲಿ ಹೆಚ್ಚೆಚ್ಚು ಬೇಳೆಕಾಳುಗಳನ್ನ ಬಳಸಬೇಕು.

ಎರಡನೆಯದಾಗಿ ಸೇಬು ಹಣ್ಣು – ದಿನಕ್ಕೊಂದು ಸೇಬು ತಿಂದರೇ, ವೈದ್ಯರನ್ನ ದೂರವಿಡಬಹುದು ಎಂಬ ಗಾದೆಯೇ ಇದೆ. ಸೇಬು ಹಣ್ಣಿನಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ.

ಮೂರನೆಯದಾಗಿ ಬಾದಾಮಿ – ಬಾದಾಮಿಯಲ್ಲಿ ಮೆಗ್ನಿಸಿಯಮ್ ಅಧಿಕವಾಗಿರುತ್ತದೆ. ಇದು ಇನ್ಸುಲಿನ್ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಮಾಡಲು ಸಹಕರಿಸುತ್ತದೆ. ಆಗಾಗ ನಾಲ್ಕು ಬಾದಾಮಿ ತಿನ್ನುತ್ತಿರುವುದು ಉತ್ತಮ.

ನಾಲ್ಕನೆಯದಾಗಿ ಸೊಪ್ಪು – ಮಾರುಕಟ್ಟೆಯಲ್ಲಿ ಸಿಗುವ ಬಸಳೆ,ಹರವೆ, ಸಬ್ಬಸಿಗೆ ಹೀಗೆ ನಾನಾ ಬಗೆಯ ಸೊಪ್ಪಿನ ಖಾದ್ಯಗಳನ್ನ ಸೇವಿಸಬೇಕು. 21 ಥರದ ಕ್ಯಾಲೋರಿ ಹಾಗೂ ಮೆಗ್ನಿಸಿಯಮ್ ಮತ್ತು ಫೈಬರ್ ಅಂಶಗಳನ್ನು ಸೊಪ್ಪು ಹೊಂದಿದೆ.

ಐದನೆಯದಾಗಿ ಓಟ್ಸ್ – ಹೃದಯದ ಆರೋಗ್ಯಕ್ಕೆ ಬೆಳಿಗ್ಗೆ ಉಪಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಹೃದಯಕ್ಕೆ ಮಾತ್ರವಲ್ಲ, ಸಕ್ಕರೆ ಖಾಯಿಲೆಗೂ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೇಲೆ ತಿಳಿಸಿದ ಈ ಆಹಾರ ಪದಾರ್ಥಗಳನ್ನ ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು, ಮಧುಮೇಹವನ್ನ ನಿಯಂತ್ರಣಕ್ಕೆ ತನ್ನಿ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ‌.

Comments are closed.