ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆ ಅನ್ನೋದು ಜೀವನದಲ್ಲಿ ಪ್ರತಿಯೊಬ್ಬ ಗಂಡು ಹಾಗೂ ಹೆಣ್ಣು ಮಾಡಲೇ ಕುಳ್ಳ ಬೇಕಾದಂತಹ ಒಂದು ಧಾರ್ಮಿಕ ಪ್ರಕ್ರಿಯೆ. ಒಂದು ಹೆಣ್ಣು ಹಾಗೂ ಗಂಡು ಅಧಿಕೃತವಾಗಿ ಗಂಡ ಹೆಂಡತಿ ಎಂಬ ಘೋಷಣೆಯಾಗಲು ಮದುವೆ ಅತ್ಯವಶ್ಯಕ. ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಕೆಲ ಭಾರತೀಯ ಕ್ರಿಕೆಟಿಗರು ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದಾರೆ. ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಅದು ಅವರಿಗೆ ಬಿಟ್ಟ ವಿಚಾರ. ಆದರೆ ಇಂದು ನಾವು ಮದುವೆಯ ಕುರಿತಂತೆ ನಿಮಗೆ ವಿಸ್ತೃತವಾಗಿ ಹೇಳಲಿದ್ದೇವೆ ಬನ್ನಿ.

ಮಹಮ್ಮದ್ ಅಜರುದ್ದೀನ್ ಮಹಮ್ಮದ್ ಅಜರುದ್ದೀನ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. 1984ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಜರುದ್ದಿನ್ 99 ಟೆಸ್ಟ್ ಪಂದ್ಯ ಹಾಗೂ 334 ಏಕದಿನ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೈದ್ರಾಬಾದ್ ಮೂಲದವರಾದ ಇವರು ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಕ್ರಿಕೆಟ್ ಆಟದ ಅಷ್ಟೇ ಫಿಕ್ಸಿಂಗ್ ಮೂಲಕ ಕೂಡ ಸದ್ದಾಗಿದ್ದಾರೆ. 1987 ರಲ್ಲಿ ಅಜರುದ್ದಿನ್ ಹೈದರಾಬಾದ್ ಮೂಲದ ನೌರೀನ್ ಎಂಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದರು. ಇದಾದ ಕೆಲವೇ ವರ್ಷಗಳಲ್ಲಿ ಬಾಲಿವುಡ್ ನಟಿ ಸಂಗೀತ ಬಿಜ್ಲನಿ ಅವರನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದರು. ಮೊದಲ ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ನಂತರ 14 ವರ್ಷಗಳ ನಂತರ ಸಂಗೀತಾ ಬಿಜಲಾನಿ ಅವರಿಗೂ ಕೂಡ ವಿವಾಹ ವಿಚ್ಛೇದನ ನೀಡಿದರು. ನಂತರದ ದಿನಗಳಲ್ಲಿ ಅಜರುದ್ದೀನ್ ರವರು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ ರವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಗುಸುಗುಸು ಮಾಹಿತಿಗಳು ಕೇಳಿಕೊಂಡು ಬರುತ್ತಿದ್ದವು.

ವಿನೋದ್ ಕಾಂಬ್ಳಿ ಮುಂಬೈ ಮೂಲದ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸಚಿನ್ ತೆಂಡೂಲ್ಕರ್ ಅವರ ಆಪ್ತ ಗೆಳೆಯ. ಇಬ್ಬರು ಬಾಲ್ಯದಿಂದಲೂ ಗೆಳೆಯರಾಗಿದ್ದು ಒಂದೇ ಕೋಚ್ ನ ಬಳಿ ಕ್ರಿಕೆಟ್ ಕೋಚಿಂಗ್ ಅನ್ನು ಪಡೆಯುತ್ತಿದ್ದರು. ಚಿಕ್ಕ ವಯಸ್ಸಲ್ಲಿ ಇವರಿಬ್ಬರ 664 ರನ್ನುಗಳ ಪಾರ್ಟ್ನರ್ಶಿಪ್ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಭಾರತ ಕ್ರಿಕೆಟ್ ತಂಡದಲ್ಲಿ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆಗಿ ಮಿಂಚಿದ್ದರು. ಇಂದಿಗೂ ಭಾರತೀಯ ಟೆಸ್ಟ್ ಪ್ಲಾಟ್ ಫಾರ್ಮ್ ನಲ್ಲಿ ಅತಿ ವೇಗದ 1000 ಗಳನ್ನು ಪೂರೈಸಿದ ಕ್ರಿಕೆಟಿಗನಾಗಿ ಇಂದಿಗೂ ಕೂಡ ರೆಕಾರ್ಡನ್ನು ಹೊಂದಿದ್ದಾರೆ ಕ್ರಿಕೆಟಿಗ ವಿನೋದ್ ಕಾಂಬ್ಳಿ. ಇನ್ನು ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ವೈವಾಹಿಕ ಜೀವನಕ್ಕೆ ಬರೋದಾದರೆ 1998 ರಲ್ಲಿ ನೀಯೋಲ್ಲಾ ಲೆವಿಸ್ ಎಂಬಾಕೆಯನ್ನು ಮದುವೆಯಾಗಿದ್ದರು. ನಂತರ ತಮ್ಮ ಮೊದಲ ಪತ್ನಿ ಯನ್ನು ತೊರೆದ ನಂತರ 2010ರಲ್ಲಿ ಆಂಡ್ರಿಯಾ ಹೆವಿಟ್ ಎಂಬ ಕೆನು ಮದುವೆಯಾಗಿ ಗಂಡು ಮಗನನ್ನು ಪಡೆದರು.

ಜಾವಗಲ್ ಶ್ರೀನಾಥ್ ಕರ್ನಾಟಕ ಮೂಲದ ಹೆಮ್ಮೆಯ ಕನ್ನಡಿಗ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಭರವಸೆಯ ಬೌಲರ್ ಆಗಿ ಹೆಸರನ್ನು ಗಳಿಸಿದವರು. ಎದುರಾಳಿ ತಂಡದ ಎದೆಯಲ್ಲಿ ನಡುಕ ಹುಟ್ಟಿಸುವ ಅಂತಹ ಬೌಲರ್ ಆಗಿದ್ದರು ಜಾವಗಲ್ ಶ್ರೀನಾಥ್. 300ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದಂತಹ ಅನುಭವಿ ಬೌಲರ್ ಆಗಿದ್ದರು. ಇವರನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಮೈಸೂರ್ ಎಕ್ಸ್ಪ್ರೆಸ್ ಎಂದು ಕರೆಯಲಾಗುತ್ತಿತ್ತು. ಇನ್ನು ಜಾವಗಲ್ ಶ್ರೀನಾಥ್ ರವರ ವೈವಾಹಿಕ ವಿಚಾರಕ್ಕೆ ಬರುವುದಾದರೆ ಮೊದಲಿಗೆ ಇವರು ಜ್ಯೋತ್ಸ್ನಾ ಎಂಬಾಕೆಯನ್ನು 1999 ರಲ್ಲಿ ಮದುವೆಯಾದರು. ಆದರೆ ಈ ಮದುವೆ 2007 ರಲ್ಲಿ ಪರಸ್ಪರ ಒಪ್ಪಿಗೆಯಿಂದ ಆಗಿ ವಿವಾಹ ವಿಚ್ಛೇದನದ ಮೂಲಕ ಅಂತ್ಯವಾಯಿತು. ನಂತರ ಜಾವಗಲ್ ಶ್ರೀನಾಥ್ ಅವರು 2008 ರಲ್ಲಿ ಮಾಧವಿ ಎಂಬ ಪತ್ರಕರ್ತೆಯನ್ನು ಮದುವೆಯಾದರು.

ಯೋಗರಾಜ್ ಸಿಂಗ್ ಭಾರತೀಯ ಕ್ರಿಕೆಟ್ ರಂಗದಲ್ಲಿ ಅಂದಿನ ಕಾಲಕ್ಕೆ ಸಾಕಷ್ಟು ಹೆಸರನ್ನು ಮಾಡಿದ ಯೋಗರಾಜ್ ಸಿಂಗ್ ರವರು ಅಷ್ಟೇ ಪ್ರಮಾಣದ ವಿವಾದಕ್ಕೂ ಕೂಡ ಹೆಸರಾಗಿದ್ದರು. ಭಾರತೀಯ ಕ್ರಿಕೆಟ್ ತಂಡಕ್ಕೆ ಅವರು ಆಡಿದ್ದು ಬೆರಳೆಣಿಕೆಯಷ್ಟು ಪಂದ್ಯಗಳು ಆಡಿದ್ದರು ಸಹ ಅವರ ಇಂಜುರಿ ಸಮಸ್ಯೆಯಿಂದಾಗಿ ಭಾರತ ತಂಡದಿಂದ ಹೊರ ತಳ್ಳಲ್ಪಟ್ಟರು. ಆದರೆ ಅವರು ಇದಕ್ಕೆ ಕೊಟ್ಟಂತಹ ಕಾರಣ ನನ್ನ ಕ್ರಿಕೆಟ್ ಕರಿಯರನ್ನು ಕಪಿಲ್ದೇವ್ ಹಾಳು ಮಾಡಿಬಿಟ್ಟರು ಎಂಬುದು. ಇದು ಕೇವಲ ಪಬ್ಲಿಸಿಟಿ ಗಿಮಿಕ್ ಆಗಿತ್ತು. ಯೋಗರಾಜ್ ಸಿಂಗ್ ಮೊದಲು ಮದುವೆಯಾಗಿದ್ದು ಶಬ್ನಮ್ ಎಂಬುವರನ್ನು ಇವರಿಂದ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಯುವರಾಜ್ ಸಿಂಗ್ ಎಂಬ ಮಗನನ್ನು ಪಡೆದರು. ನಂತರ ಯೋಗರಾಜ್ ಸಿಂಗ್ ಸತ್ವೀರ್ ಕೌರ್ ಎಂಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದರು. ಕ್ರಿಕೆಟ್ ರಂಗದಿಂದ ಸಂಪೂರ್ಣವಾಗಿ ಸಂಬಂಧವನ್ನು ಕಡಿದುಕೊಂಡು ಯೋಗರಾಜ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳತ್ತ ತಮ್ಮ ದೃಷ್ಟಿಯನ್ನು ನೆಟ್ಟಿದ್ದಾರೆ. ಈಗಾಗಲೇ ಅವರು ಯಾವತ್ತ ಚಿತ್ರಗಳಾದ ಭಾಗ್ ಮಿಲ್ಕಾ ಭಾಗ್ ಹಾಗೂ ದರ್ಬಾರ್ ಅಂತ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದಿನೇಶ್ ಕಾರ್ತಿಕ್ ದಿನೇಶ್ ಕಾರ್ತಿಕ್ ತಮಿಳುನಾಡು ಮೂಲದ ಕ್ರಿಕೆಟಿಗ. ಮೊದಲಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡಿದರು ಸಹ ನಂತರದ ದಿನಗಳಲ್ಲಿ ತಮ್ಮ ಪ್ರತಿಭೆಯ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದರು ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ವಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ರವರು 2007 ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಕಿತ ವಂಜರ ರವರನ್ನು ಮದುವೆಯಾದರು. ನಂತರ ಅವರ ಪತ್ನಿ ನಿಖಿತಾ ದಿನೇಶ್ ಕಾರ್ತಿಕ್ ರವರ ಸ್ನೇಹಿತ ಹಾಗೂ ಕ್ರಿಕೆಟಿಗ ಮುರಳಿ ವಿಜಯ್ ಅವರೊಂದಿಗೆ ಸಂಬಂಧ ಹೊಂದಿರುವುದನ್ನು ತಿಳಿದ ದಿನೇಶ್ ಕಾರ್ತಿಕ್ ರವರು ವಿವಾಹ ವಿಚ್ಛೇದನವನ್ನು ಪಡೆಯುತ್ತಾರೆ. ನಂತರ 2015ರಲ್ಲಿ ದಿನೇಶ್ ಕಾರ್ತಿಕ್ ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ರವರನ್ನು ವಿವಾಹವಾಗುತ್ತಾರೆ.

ನೋಡಿದ್ರಲ್ಲ ಸ್ನೇಹಿತರೇ ಯಾವೆಲ್ಲ ಭಾರತೀಯ ಕ್ರಿಕೆಟ್ ಆಟಗಾರರು ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡಿಕೊಂಡಿದ್ದಾರೆ ಎಂಬುದನ್ನು. ಎರಡನೇ ಮದುವೆ ಆಗಿದ್ದಾರೆಂಬ ಮಾತ್ರಕ್ಕೆ ಅವರನ್ನು ನಾವು ಜಡ್ಜ್ ಮಾಡೋದು ತಪ್ಪು. ಅದು ಅವರ ಇಷ್ಟ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.