ತನ್ನ ಮದುವೆ ಇದ್ದರೂ ಕೂಡ ಮದುವೆಗೆ ಕೆಲವು ನಿಮಿಷಗಳಿಗೂ ಮುನ್ನ ಆಕೆ ಮಾಡಿದ್ದೇನು ಗೊತ್ತೇ?? ವಿಧಿಯಾಟ ಅಂದ್ರೆ ಇದೇನಾ??

ನಮಸ್ಕಾರ ಸ್ನೇಹಿತರೆ ನಾವು ಇದು ಮಾತನಾಡಲು ಹೊರಟಿರುವುದು ಹೈದರಾಬಾದ್ ನಲ್ಲಿ ನಡೆದಿರುವ ನೈಜವಾದ ಘಟನೆಯ ಕುರಿತಂತೆ. ಈ ಘಟನೆಯನ್ನು ಕೇಳಿದ ನಂತರ ಖಂಡಿತವಾಗಿ ನೀವು ಕೂಡ ಆಶ್ಚರ್ಯಚಕಿತರಾಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಂ ಸಂಪ್ರದಾಯದಲ್ಲಿ ಒಂದು ಮಾತಿದೆ ಅದೇನೆಂದರೆ ಅಲ್ಲಾ ಯಾರನ್ನಾದರೂ ಇಷ್ಟಪಟ್ಟರೆ ಅವರಿಗೆ ಈ ಜಗತ್ತಿನಲ್ಲಿರುವ ಎಲ್ಲಾ ಸುಖ ಸಂತೋಷ ಐಶ್ವರ್ಯಗಳನ್ನು ನೀಡುತ್ತಾನಂತೆ.

ಹೈದರಾಬಾದ್ನಲ್ಲಿ ಫಾತಿಮಾ ಎನ್ನುವ ಹುಡುಗಿ ಇದ್ದಳು ಅವಳು ಅಲ್ಲಾನನ್ನು ಚಾಚೂ ತಪ್ಪದಂತೆ ಪಾಲಿಸುತ್ತಿದ್ದಳು ಹಾಗೂ ಪೂಜಿಸುತ್ತಿದ್ದಳು. ಇವಳು ಪ್ರತಿದಿನ ಐದು ಬಾರಿ ನಮಾಜ್ ತಪ್ಪದೆ ಮಾಡುತ್ತಿದ್ದಳು. ಇನ್ನು ಇವಳು ಮದುವೆ ವಯಸ್ಸಿಗೆ ಬಂದಿದ್ದಳು. ಇವಳ ಅಪ್ಪ ಅಮ್ಮ ಇವಳಿಗಾಗಿ ಗಂಡನ್ನು ಹುಡುಕಿ ರೆಹಮಾನ್ ಎನ್ನುವುವವರ ಜೊತೆಗೆ ಮದುವೆ ಮಾಡಬೇಕೆಂದು ನಿರ್ಧರಿಸುತ್ತಾರೆ. ಫಾತಿಮ ಹಾಗೂ ರೆಹಮಾನ್ ಮದುವೆ ದಿನ ಬಂದೇಬಿಟ್ಟಿತು. ಮುಸ್ಲಿಂ ಸಂಪ್ರದಾಯದಲ್ಲಿ ಮದುವೆಗೆ ನಿಕಾ ಎಂದು ಕರೆಯುತ್ತಾರೆ. ರೆಹಮಾನ್ ಮತ್ತು ಆತನ ಮನೆಯವರು ಫಾತಿಮಾಳನ್ನು ಮಸೀದಿಗೆ ಮದುವೆ ಕರೆದುಕೊಂಡು ಹೋಗಲು ಬರುತ್ತಾರೆ. ಇನ್ನು ಆ ಸಂದರ್ಭದಲ್ಲಿ ಫಾತಿಮಾ ಕೂಡ ಮೇಕಪ್ ಮಾಡಿಕೊಂಡು ರೆಡಿಯಾಗುತ್ತಿರುತ್ತಾಳೆ.

ಆದರೆ ಈ ಸಂದರ್ಭದಲ್ಲಿ ನಮಾಜ್ ಮಾಡುವ ಸಮಯ ಬಂದುಬಿಡುತ್ತದೆ. ಮುಸ್ಲಿಂ ಸಂಪ್ರದಾಯದಲ್ಲಿ ನಮಾಜನ್ನು ಆ ಸಮಯದಲ್ಲಿ ಮಾಡಲೇಬೇಕಾಗುತ್ತದೆ. ಇಲ್ಲವಾದರೆ ಅಲ್ಲಾ ನಿಮ್ಮನ್ನು ಕ್ಷಮಿಸಲಾರೆ ಎಂಬ ಮಾತು ಕೂಡ ಇದೆ. ಇನ್ನು ಫಾತಿಮಾ ಅಲ್ಲಾನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಆರಾಧಿಸುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಈ ಸಂದರ್ಭದಲ್ಲಿ ಅಮ್ಮನಿಗೆ ಹೋಗಿ ಪಾತಿಮಾ ನಾನು ನಮಾಜ್ ಮಾಡಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿರುತ್ತಾಳೆ. ಆದರೆ ಅವಳ ಅಮ್ಮ ಇನ್ನೇನು ಕೆಲವೇ ಕ್ಷಣಗಳಲ್ಲಿ ಗಂಡಿನ ಕಡೆಯವರು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಾರೆ ಈಗ ನೀನು ನಮಾಜ್ ಮಾಡಿದರೆ ನಿನ್ನ ಮೇಕಪ್ ಹಾಳಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಫಾತಿಮಾ ನಾನು ಅಲ್ಲಾನ ಮಗಳು ನನಗೆ ಅವರಿಗೆ ನಮಾಜ್ ಮಾಡುವುದು ಮುಖ್ಯವಾದ ಕೆಲಸ ಎಂಬುದಾಗಿ ಹೇಳುತ್ತಾಳೆ.

ಅದಕ್ಕೆ ತಾಯಿ ಇವತ್ತು ನಿನ್ನ ಮದುವೆ ದಿವಸ ಇವತ್ತು ಒಂದು ದಿವಸವಾದರೂ ನಮ್ಮ ಮರ್ಯಾದೆ ತೆಗೆಯಬೇಡ ಏಕೆಂದರೆ ಮದುವೆ ಗಂಡಿನ ಮನೆಯವರು ಈಗಾಗಲೇ ಬರುವಂತಾಗಿದೆ ಎಂಬುದಾಗಿ ಹೇಳುತ್ತಾಳೆ. ಅದಕ್ಕೆ ಮದುವೆ ಆಗಿರಲಿ ಅಥವಾ ಏನೇ ಆಗಿರಲಿ ನಾನು ನಮಾಜ್ ಮಾಡಿಯೇ ಮಾಡುತ್ತೇನೆ ನನಗೆ ಅಲ್ಲಾನ ಕೋಪಕ್ಕೆ ಗುರಿಯಾಗುವುದು ಇಷ್ಟವಿಲ್ಲ ಎಂಬುದಾಗಿ ಹೇಳುತ್ತಾಳೆ. ಆಗ ತಾಯಿ ದುಃಖದಿಂದ ರೂಮಿನಿಂದ ಹೊರಕ್ಕೆ ಹೋಗುತ್ತಾಳೆ. ಕೂಡಲೇ ಫಾತಿಮಾ ಮುಖ ತೊಳೆದುಕೊಂಡು ನಮಾಜ್ ಮಾಡಲು ಅಣಿಯಾಗುತ್ತಾಳೆ. ನಿಮಗೆ ಗೊತ್ತಿರಬಹುದು ಸ್ನೇಹಿತರೆ ಒಬ್ಬ ಹುಡುಗಿ ಮತ್ತೊಮ್ಮೆ ಮೇಕಪ್ ಮಾಡಿಕೊಂಡು ಮದುವೆಗೆ ರೆಡಿಯಾಗುವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು.

ಅಲ್ಲಾಗೆ ಕೋಪ ತರಿಸಬಾರದು ಎಂಬ ಕಾರಣಕ್ಕಾಗಿ ಮದುವೆ ಇದ್ದರೂ ಕೂಡ ಮೇಕಪ್ ತೆಗೆದು ಮುಖ ತೊಳೆದುಕೊಂಡು ನಮಾಜ್ ಮಾಡುತ್ತಾಳೆ ಫಾತಿಮಾ. ಈ ಸಂದರ್ಭದಲ್ಲಿ ಗಂಡಿನ ಕಡೆಯವರು ಏನು ಅನ್ನುತ್ತಾರೆ ಮನೆಯವರು ಏನು ಅನ್ನುತ್ತಾರೆ ಅಥವಾ ಸಮಾಜದವರು ಏನು ಅನ್ನುತ್ತಾರೆ ಎಂಬುದನ್ನು ತಲೆಗೆ ಹಾಕಿಕೊಳ್ಳದೆ ನಮಾಜ್ ಮಾಡುತ್ತಾಳೆ. ಆಗ ಫಾತಿಮಾಳ ಹೃದಯಾಗಾತದಿಂದ ದೇಹದಿಂದ ಪ್ರಾಣಪಕ್ಷಿಯನ್ನುವುದು ಹಾರಿ ಅಲ್ಲಾನ ಕಡೆಗೆ ಹೋಗುತ್ತದೆ. ಸ್ವಾತಿ ಮಾಳಿಗೆ ಯಾವುದೇ ಕಷ್ಟಕರ ಇಲ್ಲದ ಮರಣ ಸಂಭವಿಸುತ್ತದೆ.

ಫಾತಿಮಾಳ ಭಕ್ತಿಯನ್ನು ಮೆಚ್ಚಿ ಅಲ್ಲ ಅವಳಿಗೆ ಯಾವುದೇ ಕಷ್ಟಕರ ಇಲ್ಲದಂತಹ ಮರಣವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಗಂಡಿನ ಮನೆಯವರು ಫಾತಿಮಾಳನ್ನು ಕರೆದುಕೊಂಡು ಹೋಗಲು ಮನೆಗೆ ಬರುತ್ತಾರೆ. ಮಗಳನ್ನು ಕರೆತರಲು ರೂಮಿಗೆ ಹೋದಂತಹ ತಂದೆತಾಯಿಗಳಿಗೆ ಮಗಳ ಪಾರ್ಥಿವ ಶರೀರ ನೋಡಿ ದುಃಖವಾಗಿ ಕಣ್ಣೀರು ಹಾಕುತ್ತಾರೆ. ನಂತರ ಮನೆಯವರು ಫಾತಿಮಾಳ ಶರೀರವನ್ನು ಮುಸ್ಲಿಂ ವಿಧಿವಿಧಾನದಂತೆ ಅಂತ್ಯಕ್ರಿಯೆಯನ್ನು ಮಾಡುತ್ತಾರೆ. ಕೆಲವರು ಫಾತಿಮಾಳ ಜಾಗದಲ್ಲಿ ಇದ್ದಿದ್ದರೆ ಕಂಡಿತವಾಗಿಯೂ ಮೇಕಪ್ ಅನ್ನೇ ಮುಖ್ಯ ಎಂದು ಭಾವಿಸುತ್ತಿದ್ದರು ಆದರೆ ಫಾತಿಮಾ ಮಾತ್ರ ಅಲ್ಲಾನ ಪ್ರಾರ್ಥನೆಯೇ ಮುಖ್ಯ ಎಂದು ನಮಾಜ್ ಮಾಡಿರುತ್ತಾಳೆ. ಖಂಡಿತವಾಗಿಯೂ ಅವಳ ಭಕ್ತಿಯನ್ನು ಮೆಚ್ಚಲೇಬೇಕು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ಹಂಚಿಕೊಳ್ಳಿ.

Comments are closed.