ಮದುವೆಯಾಗುವಾಗ ವಯಸ್ಸಿನ ಅಂತರ ಎಷ್ಟು ಇರಬೇಕು ಗೊತ್ತೇ?? ಮದುವೆಯಾಗುವ ಮುನ್ನ ಈ ಕುರಿತು ಯೋಚಿಸಿ ನೋಡಿ. ಅಸಲಿಗೆ ಎಷ್ಟು ಇರಲೇಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಾಂಪತ್ಯ ಸರಿಯಾಗಿ ನಡೆಯುವುದಕ್ಕೆ, ದಾಂಪತ್ಯ ಜೀವನದಲ್ಲಿ ಸಂತೋಷ ಇರುವುದಕ್ಕೆ ದಂಪತಿಗಳ ನಡುವಿನ ಅಂತರ ಅಷ್ಟು ಮುಖ್ಯವಲ್ಲ, ಎಂದು ಕೆಲವರು ಹೇಳಿದರೂ ಇನ್ನೂ ಕೆಲವರು ದಂಪತಿಗಳ ನಡುವಿನ ಅಂತರ ತುಂಬಾ ಮುಖ್ಯ ಎನ್ನುತ್ತಾರೆ. ಹಾಗಾಗಿ ಮೊದಲು ತಂದೆ ತಾಯಿ ನೋಡಿ ಮಾಡುವ ಮದುವೆಗಳಲ್ಲಿ ಸಂಗಾತಿಗಳ ನಡುವೆ ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ರೀತಿಯಲ್ಲಿ ಅಂತರ ಇರುವ ಹಾಗೆ ನೋಡಿಕೊಳ್ಳುತ್ತಿದ್ದರು.

ಹಾಗಾದರೆ ದಂಪತಿಗಳ ನಡುವೆ ಎಷ್ಟು ಅಂತರವಿದ್ದರೆ ಸೂಕ್ತ? ದಂಪತಿಗಳ ನಡುವೆ ೨೦ ವರ್ಷದ ಅಂತರವಿದ್ದರೆ: ಇಂಥ ಜೋಡಿಗಳಲ್ಲಿ ಯಶಸ್ವಿ ಜೋಡಿಗಳು ಇದ್ದರೂ ಈ ಅಂತರ ಅಷ್ಟು ಒಳ್ಳೆಯದಲ್ಲ, ಹೆಚ್ಚು ಕಡಿಮೆ ಒಂದು ಜನರೇಶನ್ ಅಂತರ ಅಂತಲೇ ಹೇಳಬಹುದು. ಈ ಸಂಬಂಧದಲ್ಲಿ ಒಬ್ಬರಿಗೆ ಮಕ್ಕಳನ್ನು ಪಡೆಯುವ ತವಕ ಇದ್ದರೆ ಕಿರಿಯವಯಸ್ಸಿನವರಿಗೆ ಅದರಲ್ಲಿ ಉತ್ಸಾಹವಿರುವುದಿಲ್ಲ. ಇನ್ನು ಅಧಿಕ ಅಂತರ ದಂಪತಿಗಳ ನಡುವೆ ಎಲ್ಲಾ ವಿಚಾರಗಳಲ್ಲಿಯೂ ಮನಸ್ತಾಪವನ್ನು ಹುಟ್ಟುಹಾಕುತ್ತದೆ.

marraige | ಮದುವೆಯಾಗುವಾಗ ವಯಸ್ಸಿನ ಅಂತರ ಎಷ್ಟು ಇರಬೇಕು ಗೊತ್ತೇ?? ಮದುವೆಯಾಗುವ ಮುನ್ನ ಈ ಕುರಿತು ಯೋಚಿಸಿ ನೋಡಿ. ಅಸಲಿಗೆ ಎಷ್ಟು ಇರಲೇಬೇಕು ಗೊತ್ತೇ??
ಮದುವೆಯಾಗುವಾಗ ವಯಸ್ಸಿನ ಅಂತರ ಎಷ್ಟು ಇರಬೇಕು ಗೊತ್ತೇ?? ಮದುವೆಯಾಗುವ ಮುನ್ನ ಈ ಕುರಿತು ಯೋಚಿಸಿ ನೋಡಿ. ಅಸಲಿಗೆ ಎಷ್ಟು ಇರಲೇಬೇಕು ಗೊತ್ತೇ?? 2

ಇನ್ನು ಹತ್ತು ವರ್ಷಗಳ ಅಂತರವಿದ್ದರೆ: ಹತ್ತುವರ್ಷಗಳ ಅಂತರವಿರುವ ಸಾಕಷ್ಟು ಜೊಘಿಗಳನ್ನು ನೋಡಿರಬಹುದು. ಪರಸ್ಪರ ಇಷ್ಟಪಟ್ಟು, ಅರ್ಥ ಮಾಡಿಕೊಂಡು ಜೀವನ ಮಾಡುತ್ತಿದ್ದರೆ ಹತ್ತು ವರ್ಷಗಳ ಅಂತರ ದೊಡ್ಡ ವಿಷಯ ಎನಿಸುವುದಿಲ್ಲ. ಆದರೆ ಇಲ್ಲಿ ಹೆಚ್ಚುವಯಸ್ಸ್ಸಿನ ಚಿಂತನೆಗಳು ಕಿರಿಯ ವಯಸ್ಸಿನವರಿಗೆ ಸರಿಬರದೇ ಇದ್ದರೆ ಸಮಸ್ಯೆಯಾಗುತ್ತದೆ. ಯಾಕೆಂದರೆ ಸಣ್ಣ ವಯಸ್ಸಿನಲ್ಲಿರುವವರಿಗೆ ಹೆಚ್ಚು ಮೆಚ್ಯೂರಿಟಿ ಬಂಡಿರುವುದಿಲ್ಲ, ಆಗ ಸಣ್ಣ ಪುಟ್ಟ ವಿಚಾರಗಳಿಗೂ ಭಿನ್ನಾಭಿಪ್ರಾಯಗಳು ಮೂಡಬಹುದು.

ಐದರಿಂದ ಏಳು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಅಂತರವಿದ್ದರೆ: ಉಳಿದವರಿಗಿಂತ ಇದು ಒಳಿತು ಎನ್ನಬಹುದು. ಇಲ್ಲಿ ಜಗಳ ವಾದಗಳು ನಡೆದರು ಒಬ್ಬರು ಇನ್ನೊಬ್ಬರನ್ನು ಸಂಬಾಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ ಈ ಅಂತರವಿರುವ ದಂಪತಿಗಳು ಸಾಮಾನ್ಯವಾಗಿ ಚೆನ್ನಾಗಿಯೇ ಬದುಕುತ್ತಾರೆ. ಅಂದಹಾಗೆ ದಾಂಪತ್ಯದಲ್ಲಿ ಅಂತರದ ಅಗತ್ಯವಿದೆಯೇ ಎನ್ನುವುದು ನಿಮ್ಮ ಗೊಂದಲವಾಗಿದ್ದರೆ ಉತ್ತರ ಹೌದು, ವೈವಾಹಿಕ ಜೀವನ ಸರಿಯಾಗಿ ನಡೆಯಬೇಕಾದರೆ ಇಬ್ಬರಲ್ಲೂ ಮೆಚ್ಯೂರಿಟಿ ಬೇಕು. ಅದರಲ್ಲೂ ಕಾಲಕ್ಕೆ ತಕ್ಕಹಾಗೆ ಜನರ ಯೋಚನೆಗಳೂ ಬದಲಾಗುವುದರಿಂದ ಅಧಿಕ ಅಂತರ ಇರುವ ದಂಪತಿಗಳಲ್ಲಿ ಹೊಂದಾಣಿಕೆ ಕಷ್ಟ.

Comments are closed.